‘ಗಜಲ್‌ ನಾದ’ ಸಂಭ್ರಮ ನಿಮ್ಮೆದೆಯ ಮೀಟಲಿ..

ಮಹಿಪಾಲರೆಡ್ಡಿ ಸೇಡಂ

ʻಗಜಲ್‌ʼ ಅರಬ್ಬಿಯಿಂದ ಕನ್ನಡಕ್ಕೆ ಬಂದಿರುವ ವಿಶಿಷ್ಟ ಕಾವ್ಯಪ್ರಕಾರ. ಹೆಂಗಸರೊಡನೆ ಸಂಭಾಷಿಸುವುದು ಎಂಬುದು ಈ ಪದದ ಅರ್ಥ. ಪ್ರೇಮ, ಪ್ರೀತಿ, ವಿರಹ ಸಂಬಂಧಪಟ್ಟ ಅರ್ಥಗಳೂ ಇದಕ್ಕಿವೆ. 

ಉರ್ದು ಕಾವ್ಯದ ಕೆನೆ, ಘನತೆ ಮತ್ತು ಗೌರವ ಎಂದರೆ, ಅದು ಗಜಲ್‌. ಉರ್ದುವಿನಿಂದ ಕನ್ನಡಕ್ಕೆ ಈ ಗಜಲ್‌ ಕಾವ್ಯವನ್ನು ಯಶಸ್ವಿಯಾಗಿ ತಂದವರು ಹಿರಿಯ ಕವಿ ಶಾಂತರಸರು. ಉರ್ದು ಭಾಷೆಯಲ್ಲಿ ಅಭ್ಯಾಸ ಮಾಡಿದ್ದರಿಂದಾಗಿ ಶಾಂತರಸ ಅವರಿಗೆ ಗಜಲ್‌ ಕ್ಷೇತ್ರದ ಸಂಪೂರ್ಣ ಅಧ್ಯಯನ ಮಾಡಲು ಸಾಧ್ಯವಾಗಿದೆ. ಇದೀಗ ಗಜಲ್‌ ಕಾವ್ಯವು ಭಾರತೀಯ ಕಾವ್ಯದ ರೀತಿಯಲ್ಲಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ನಿರತವಾಗಿದೆ. 

ಗಜಲ್‌ ಎಂಬುದು ಪ್ರೇಮ, ಮೋಹ, ವಿರಹಕ್ಕೆ ಸಂಬಂಧಿಸಿದ್ದರೂ, ಅದರಾಚೆಗೂ ಅದೊಂದು ಆತ್ಮಧ್ಯಾನವನ್ನು ಒಳಗೊಂಡಿದೆ. ಧ್ಯಾನಸ್ಥ ಮಾತ್ರ ಗಜಲ ಅಪ್ಪಿಕೊಳ್ಳಲು ಸಾಧ್ಯ. ಸಂವೇದನೆ ದ್ವಿಪದಿಯ ಭಾವ. ಪ್ರತಿ ಶೇರ್‌ ಗಳ ನಡುವೆ ಗಜಲ್‌ ಕವಿ ಭಾವೋತ್ಕಟತೆಯ ಸಂವೇದನೆಯನ್ನು ತುಂಬುತ್ತಾನೆ. ಇಂತಹ ಹೃದಯವಂತಿಕೆಯ ಗಜಲಗಳ ನಾದಲೋಕ ನಿಮ್ಮೆದುರು ತೆರೆದುಕೊಳ್ಳಲಿದೆ.

ಈ ನಾದ ನಿಮ್ಮೆದೆಯ ಮೀಟಲಿ. ಆಗಿನ ಹೈದ್ರಾಬಾದ್‌ ಕರ್ನಾಟಕದ (ಈಗ ಕಲ್ಯಾಣ ಕರ್ನಾಟಕ) ಮೂಲಕ ಆರಂಭಗೊಂಡ ಕನ್ನಡ ಗಜಲ್‌ ಕಾವ್ಯಯಾತ್ರೆಯು ಇಂದು ಕರ್ನಾಟಕದ ಎಲ್ಲ ಕಡೆಗೆ ಹಬ್ಬಿದೆ. ಕನ್ನಡದಲ್ಲಿ ಗಜಲ್ ಬರಹಗಾರರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಬರೀ ಪ್ರೀತಿ, ವಿರಹಕ್ಕಷ್ಟೇ ಸೀಮಿತವಾಗದೇ ಇತ್ತೀಚೆಗೆ ಗಜಲ್‌ ಕವಿಗಳು ಸಾಮಾಜಿಕ ಕಳಕಳಿಯಿಟ್ಟುಕೊಂಡು ಬರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡದ ವೈವಿಧ್ಯಮಯ ನೆಲದ ಗಜಲಕಾರರ ʻಗಜಲ್‌ ನಾದʼವಿದು.

‍ಲೇಖಕರು Admin

October 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. krishna

    gajal bagge super mahiti. aneka gajla kararu illi parichayisiddu.. ishtavaytu. avdhi ge dhanyavadgalu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: