ಕ್ಲಿಕ್ ಆಯ್ತು ಕವಿತೆ: ಕತ್ತಲೆಯೇ ಮನಕೊಂದು ಹಿತ ತಂದಿದೆ

ಸರಳ ಹಿಂದೆ ಬಂದಿ

sarojini_padasalagi-249x300

ಸರೋಜಿನಿ  ಪಡಸಲಗಿ

ಎದೆಯಲೊಂದು ಪ್ರೀತಿಯ ಕರೆ ಮೊರೆಯುತಿದೆ
ಮನ ಕರಗಿ  ಹುಚ್ಚಾಗಿ ಅತ್ತ  ಇತ್ತ ವಾಲುತಿದೆ.

ಬರಲಾರೆಯಾ ಪ್ರಿಯೆ ಕಾದಿಹೆನು ನಿನಗಾಗಿclick-kavte4
ನನ್ನೆದೆಯ ಕದ ತೆರೆದಿಹುದು ನೀ ಕಾಣೆಯಾ
ನನ್ನ ಜೀವ ನೀ ಎಂದುಕೊಂಬಿಹೆನು ಇನ್ನೂ
ಒಮ್ಮೆ ನನ್ನ ನೋಡಿ ಹೇಳು ನೀನರಿಯೆ ಎಂದು.

ಆ ಪ್ರೀತಿಗೆ ಆ ನೋವಿಗೆ ಜೀವ ಹುಚ್ಚಾಗಿ ಹೋಯ್ತು
ನೀ ಅರಿಯೆಯಾ ನಾ ಬಂಧಿ ಇಲ್ಲಿ ಸರಳ ಹಿಂದೆ
ಬಿಡಿಸಲಾಗದ  ನೂರೆಂಟು ಬಂಧಗಳ ನಡುವೆ ನಾನು
ತಿಳಿಯಲಾಗದ ಎಳೆತ ಸೆಳೆತಗಳ ಸುಳಿವಲ್ಲಿ
ನಾನು.

ಮನ ಉಲಿಯುತಿದೆ ಈ ಬಾಳು ನಮ್ಮ ಕಥೆಯೆಂದು
ಅದಕುಂಟೆ ಒಂದು ಅರ್ಥ ಇರಲಹುದೇ ಒಂದು ತಥ್ಯ
ಸಿಲುಕಿಹೆನು  ಬಂಧನದಿ ಎಲ್ಲಿಹುದು ಒಂದಾಯ್ಕೆ
ಬಿಡಲಹುದೇ ಈ ಮಾಯೆ ಬಿಟ್ಟೀತೆ ಈ ಛಾಯೆ
ಈಗ ಈ  ಕತ್ತಲೆಯೇ  ಮನಕೊಂದು ಹಿತ ತಂದಿದೆ
ಅಲ್ಲಿಹ ಅನಂತ ನಿಶ್ಯಬ್ದದಲಿ ಕನಸೊಂದ ಕಾಣುತಿದೆ
ಸರಳುಗಳ ಜಗ್ಗಿ ಹಲ್ಲು ಕಚ್ಚಿ ಬಂಧನದಿ ಇರುವಾಸೆ
ಅಲ್ಲಿಯೇ  ಒಂದು ಕನಸಿನ ಲೋಕ ಸೃಷ್ಟಿಸುವಾಸೆ.

‍ಲೇಖಕರು Admin

October 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: