ಕ್ರಿಯೇಟೀವ್ ಕಾಮನ್ಸ್ ಪರವಾನಗಿ/ಲೈಸೆನ್ಸ್‌ಗಳು

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

|ಕಳೆದ ಸಂಚಿಕೆಯಿಂದ|

ಈ ಲೇಖನ ನಾನು ಬರೆಯುತ್ತಿರುವ “ಕ್ರಿಯೇಟೀವ್ ಕಾಮನ್ಸ್ ಕನ್ನಡ ೧೦೧” ಪುಸ್ತಕದ ಒಂದು ಭಾಗವಾಗಿದ್ದು, ‍Creative Commons Attribution 4.0 International License‌ ಅಡಿ ಲಭ್ಯವಿದೆ.

Creative Commons Kannada 101 by Omshivaprakash is licensed under a Creative Commons Attribution 4.0 International License, except where otherwise noted.

ಆರು ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್‌ಗಳು

The Attribution license or “CC BY”ಮೂಲ ಸೃಷ್ಟಿಕರ್ತನ/ಕರ್ತೃವಿನ ಉಲ್ಲೇಖದೊಂದಿಗೆ ಯಾವುದೇ ಉದ್ದೇಶಕ್ಕಾಗಿ (ವಾಣಿಜ್ಯ ಉದ್ದೇಶಗಳಿಗೆ ಮತ್ತು ಮಾರ್ಪಡಿಸಿದ ರೂಪದಲ್ಲಿಯೂ ಸಹ) ಕೃತಿಯನ್ನು ಬಳಸಲು ಅನುಮತಿಸುತ್ತದೆ. allows people to use the work for any purpose (even commercially and even in modified form) as long as they give attribution to the creator. 
The Attribution-ShareAlike license or “BY-SA”ಮೂಲ ಸೃಷ್ಟಿಕರ್ತನ/ಕರ್ತೃವಿನ ಉಲ್ಲೇಖದೊಂದಿಗೆ ಮತ್ತು ಅವರು ಇತರರೊಂದಿಗೆ ಹಂಚಿಕೊಳ್ಳುವ ಯಾವುದೇ ರೂಪಾಂತರಗಳನ್ನು ಅದೇ ಅಥವಾ ಹೊಂದಾಣಿಕೆ‌ಯಾಗುವ ಪರವಾನಗಿಯಡಿಯಲ್ಲಿ ಲಭ್ಯವಾಗುವಂತೆ ಮಾಡಿದಾಗ, ಯಾವುದೇ ಉದ್ದೇಶಕ್ಕಾಗಿ ಕೃತಿಯನ್ನು ಬಳಸಲು ಅನುಮತಿಸುತ್ತದೆ, ಇದು ಕ್ರಿಯೇಟೀವ್‌ ಕಾಮನ್ಸ್‌ನ ಕಾಪಿಲೆಫ್ಟ್ ಪರವಾನಗಿಯ ಆವೃತ್ತಿಯಾಗಿದೆ. allows people to use the work for any purpose, as long as they give attribution to the creator and make any adaptations they share with others available under the same or a compatible license. This is CC’s version of a copyleft license.
The Attribution-NonCommercial license or “BY-NC”ಮೂಲ ‍ಸೃಷ್ಟಿಕರ್ತನ/ಕರ್ತೃವಿನ ಉಲ್ಲೇಖದೊಂದಿಗೆ ಮತ್ತು ಕೃತಿಯನ್ನು ವಾಣಿಜ್ಯೇತರ ಉದ್ದೇಶಗಳಿಗಾಗಿ ಮಾತ್ರ ಬಳಸಲು ಅನುಮತಿಸುತ್ತದೆ, allows people to use the work for noncommercial purposes only, and only as long as they give attribution to the creator.
The Attribution-NonCommercial-ShareAlike license or “BY-NC-SA”ಮೂಲ ‍ಸೃಷ್ಟಿಕರ್ತನ/ಕರ್ತೃವಿನ ಉಲ್ಲೇಖದೊಂದಿಗೆ ಮತ್ತು ಅವರು ಇತರರೊಂದಿಗೆ ಹಂಚಿಕೊಳ್ಳುವ ಯಾವುದೇ ರೂಪಾಂತರಗಳನ್ನು ಅದೇ ಅಥವಾ ಹೊಂದಾಣಿಕೆ‌ಯಾಗುವ ಪರವಾನಗಿಯಡಿಯಲ್ಲಿ ಲಭ್ಯವಾಗುವಂತೆ ಮಾಡಿದಾಗ, ವಾಣಿಜ್ಯೇತರ ಉದ್ದೇಶಗಳಿಗಾಗಿ ಕೃತಿಯನ್ನು ಬಳಸಲು ಅನುಮತಿಸುತ್ತದೆ, allows people to use the work for noncommercial purposes only, and only as long as they give attribution to the creator and make any adaptations they share with others available under the same or a compatible license.
The Attribution-NoDerivatives license or “BY-ND”ಮೂಲ ‍ಸೃಷ್ಟಿಕರ್ತನ/ಕರ್ತೃವಿನ ಉಲ್ಲೇಖದೊಂದಿಗೆ ಮತ್ತು ಯಾವುದೇ ರೂಪಾಂತರಗೊಳ್ಳದ ಕೃತಿಯನ್ನು ‍ಯಾವುದೇ ಉದ್ದೇಶಕ್ಕಾಗಿ ಬಳಸಲು ಅನುಮತಿಸುತ್ತದೆ, allows people to use the un adapted work for any purpose, as long as they give attribution to the creator.
The Attribution-NonCommercial-NoDerivatives license or “BY-NC-ND”ಇದು ಅತ್ಯಂತ ನಿರ್ಬಂಧಿತ ಲೈಸೆನ್ಸ್ ಆಗಿದ್ದು ಮೂಲ ‍ಸೃಷ್ಟಿಕರ್ತನ/ಕರ್ತೃವಿನ ಉಲ್ಲೇಖದೊಂದಿಗೆ ಮತ್ತು ಯಾವುದೇ ರೂಪಾಂತರಗೊಳ್ಳದ ಕೃತಿಯನ್ನು ವಾಣಿಜ್ಯೇತರ ಉದ್ದೇಶಗಳಿಗಾಗಿ ಮಾತ್ರ ಬಳಸಲು ಅನುಮತಿಸುತ್ತದೆ, is the most restrictive license offered by CC. It allows people to use the unadapted work for noncommercial purposes only, and only as long as they give attribution to the creator.

ನಿಮಗಿದು ಗೊತ್ತೇ? FAIR USE

  • ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್‌ಗಳು ಕಾಪಿರೈಟ್ ಆಡಿಯಲ್ಲಿ ಬರುವ ಹಕ್ಕುಗಳಾದ ನ್ಯಾಯಯುತ ಬಳಕೆಯ ವಿನಾ‍ಯಿತಿಗಳು ಅಥವಾ ಮಿತಿಗಳನ್ನು (Fair Use)  ಮಿತಿಗೊಳಿ‍ಸುವುದು ಅಥವಾ ಕಡಿತಗೊಳಿಸುವುದಾಗಲೀ, ‍ನಿರ್ಬಂಧಿಸುವುದಾಗಲೀ ಮಾಡುವುದಿಲ್ಲ.
  • ನ್ಯಾಯಯುತ ಬಳಕೆಯಂತಹ ವಿನಾಯಿತಿಗಳು ಅಥವಾ ಮಿತಿಗಳನ್ನು ಅನ್ವಯಿಸಿದಾಗ ಅಥವಾ ಕೃತಿಗ‌ಳು ಸಾರ್ವಜನಿಕ ಸ್ವಾಮ್ಯದಲ್ಲಿದ್ದಲ್ಲಿ ಮೇಲೆ ಕೃತಿಸ್ವಾಮ್ಯ/ಕಾಪಿರೈಟ್ ಅನ್ವಯಿಸುವುದಿಲ್ಲ. ಇದರರ್ಥ, ಸಿಸಿ ಪರವಾನಗಿಗಳನ್ನು ಕಾಪಿರೈಟ್ ಮೇಲೆ ನಿರ್ಮಿಸಲಾಗಿರುವುದರಿಂದ ಈ ಸಂದರ್ಭಗಳಲ್ಲಿ ಸಿಸಿ ಪರವಾನಗಿಗಳು ಕೂಡ ಅನ್ವಯಿಸುವುದಿಲ್ಲ.
  • ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್ ಅಳವಡಿಸಿ ಕೃತಿಗಳನ್ನು ಸಾರ್ವಜನಿಕ ಸ್ವಾಮ್ಯದಿಂದ ಹೊರತರಲು ಸಾಧ್ಯವಿಲ್ಲ.
  • ನಿಮ್ಮ ಕೃತಿಗಳನು ಮುಕ್ತವಾಗಿ ಸಾರ್ವಜನಿಕ ಸ್ವಾಮಯಕ್ಕೆ ಕಾಣಿಕೆಯಾಗಿ ನೀಡಬೇಕೆಂದಿದ್ದೀರಾ? ಕ್ರಿಯೇಟೀವ್ ಕಾಮನ್ಸ್ ಕಾನೂನಾತ್ಮಕವಾಗಿ ‍ಸದೃಢವಾದ ಪಬ್ಲಿಕ್ ಡೊಮೇನ್ ಪರಿಕರವನ್ನು ಹೊಂದಿದೆ.

ಗಮನಿಸಿ: ನ್ಯಾಯಯುತ ಬಳಕೆಯಂತಹ ವಿನಾಯಿತಿಗಳ ಹಕ್ಕನ್ನು ಸಾಧಿಸುವುದನ್ನು ಉದ್ದೇಶಪೂರ್ವಕವಾಗಿ ಮರೆಯಬೇಡಿ.

‍ಲೇಖಕರು ಓಂಶಿವಪ್ರಕಾಶ್

November 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: