ಕ್ರಿಕೆಟ್ ಮತ್ತು ಕ್ಯಾಪಿಟಲಿಸಮ್

ಶ್ರೀಹರ್ಷ ಸಾಲಿಮಠ

—–

ಕ್ರಿಕೆಟ್ ಎಂಬುದು ಕ್ಯಾಪಿಟಲಿಸಮ್ ನೀರು ಎರೆದು ಬೆಳೆಸಿದ ಆಟ.

ಫುಟ್ ಬಾಲ್ ಹಾಕಿ ಬಾಕ್ಸಿಂಗ್ ರಗ್ಬಿ ವಾಲಿಬಾಲ್ ಯಂತಹ ಎಲ್ಲಾ ಆಟಗಳು ಹೆಚ್ಚೆಂದರೆ ಒಂದೂವರೆ ತಾಸು ನಡೆಯುತ್ತವೆ. ಹಾಗೂ ಒಂದೇ ಬ್ರೇಕ್ ಮಾತ್ರ ಇರುತ್ತದೆ.

ಕ್ರಿಕೆಟ್ ಐದು ದಿನ ಅಥವಾ ಇಡಿಯ ದಿನ ಅಥವಾ ಟಿ-೨೦ ಆದರೂ ಕನಿಷ್ಟ ಮೂರು ತಾಸು ನಡೆಯುತ್ತದೆ. ಇಡಿಯ ದಿನ ಜಾಹೀರಾತು ಫಲಕಗಳನ್ನು ಆಟದಗುಂಟ ಹಿನ್ನೆಲೆಯಲ್ಲಿ ತೋರಿಸಬಹುದು.

ಉಳಿದ ಆಟಗಳಲ್ಲಿ ಜಾಹೀರಾತು ಬ್ರೇಕ್ ಗಳಲ್ಲಿ ಮಾತ್ರ ಕಂಡುಬಂದರೆ ಕ್ರಿಕೆಟ್ ನಲ್ಲಿ ಎಲ್ಲೆಲ್ಲಿ ಜಾಹೀರಾತುಗಳನ್ನು ಹಾಕಬಹುದು ಎಂಬುದರ ಪಟ್ಟಿ ,

ಪ್ರತಿ ಓವರ್ ಗಳ ನಡುವೆ

ಪ್ರತಿ ವಿಕೆಟ್ ಬಿದ್ದಾಗ

ಇನ್ನಿಂಗ್ಸ್ ಗಳ ನಡುವೆ

ಡ್ರಿಂಕ್ಸ್ ಬ್ರೆಕ್ ನಲ್ಲಿ

ಆಟದ ಬ್ರೆಕ್ ನಲ್ಲಿ

ಡಯ್ಲಿ ಸೋಪ್ ಗಳಿಗಿಂತ ಲೆಜಿಟಿಮೇಟ್ ಆಗಿ ಇಲ್ಲಿ ಜಾಹೀರಾತು ತೋರಿಸಬಹುದು.

ಉಳಿದ ಆಟಗಳಲ್ಲಿ ಆಟಗಾರರು ಸತತವಾಗಿ ಓಡುತ್ತಿರುತ್ತಾರೆ. ಕ್ರಿಕೆಟ್ ನಲ್ಲಿ ನಿಂತಲ್ಲೇ ನಿಲ್ಲುವುದರಿಂದ ಅಂಗಿಯ ಮೇಲೆ, ತಲೆಗವಚಿನ ಮೇಲೆ, ಬ್ಯಾಟ್ ಮೇಲೆ ಇರುವ ಜಾಹೀರಾತುಗಳು ಸ್ಪಷ್ಟವಾಗಿ ಕಣ್ಣಿಗೆ ಬೀಳುತ್ತವೆ. ಜಾಹೀರಾತು ಹಾಕಲಿಕ್ಕೆ ಇರುವ ಜಾಗಗಳೂ ಹೆಚ್ಚು. ಬೌಂಡರಿಯ ಬೋರ್ಡು, ವಿಕೆಟ್ ಗಳು, ಪಿಚ್ ಹಿಂದೆ ಮುಂದೆ, ಬೌಂಡರಿಯ ಹಗ್ಗ, ಅಂಪೈರ್ ನ ಅಂಗಿ, ಕ್ಯಾಪು, ಕಮೆಂಟೇಟರ್ ಗಳ ಬಟ್ಟೆ.

ಕ್ರಿಕೆಟ್ ಹಿಂದೆ ಕ್ಯಾಪಿಟಲಿಸಮ್ ಕೈವಾಡ ಇದೆ ಎನ್ನುವುದಕ್ಕೆ ದೊಡ್ಡ ಸಾಕ್ಷಿ ಅದರ ಅಭಿಮಾನಿಗಳ ಸಂಖ್ಯೆ ಹೋಲಿಕೆ. ಅತಿ ಜನಪ್ರಿಯ ಆಟ ಫುಟ್ ಬಾಲ್/ಸಾಕರ್ ಇನ್ನೂರು ದೇಶಗಳು ಆಡುತ್ತವೆ ಹಾಕಿ, ವಾಲಿಬಾಲ್ ಸುಮಾರು ನೂರೈವತ್ತು ದೇಶಗಳು, ಟೆನಿಸ್ ನೂರು ದೇಶಗಳು. ದೇಶಗಳಲ್ಲದೇ ನೂರಾರು ಅಂತರರಾಷ್ಟ್ರೀಯ ಕ್ಲಬ್ ಗಳು ಈ ಆಟವನ್ನು ಆಡಿಸುತ್ತವೆ. ಕ್ರಿಕೆಟ್ ಹೆಚ್ಚೆಂದರೆ ಇಪ್ಪತ್ತು ದೇಶಗಳು, ಕೌಂಟಿ ಮತ್ತು ಕೆಲ ಸ್ಥಳೀಯ ಕ್ಲಬ್ ಗಳು. ಫುಟ್ ಬಾಲ್ ಅಭಿಮಾನಿಗಳ ಸಂಖ್ಯೆ ಮುನ್ನೂರೈವತ್ತು ಕೋಟಿ, ಹಾಕಿಗೆ ನೂರೈವತ್ತು ಕೋಟಿ ಟೆನಿಸ್ ಗೆ ನೂರು ಕೋಟಿ. ಕೇವಲ ಇಪ್ಪತ್ತು ದೇಶಗಳು ಆಡುವ ಕ್ರಿಕೆಟ್ ಗೆ ಇನ್ನೂರೈವತ್ತು ಕೋಟಿ.

ಇಂಡಿಯಾದಲ್ಲಿ ಧರ್ಮ ಎಂದು ಕರೆಯಲ್ಪಡುವ ಮಟ್ಟಿಗೆ ಕ್ರಿಕೆಟ್ ಜನಪ್ರಿಯವಾಗಿದ್ದು ಹೇಗೆ?

ಟೆನಿಸ್ ರಾಯಲ್ ಗೇಮ್. ಆಟವಾಡಿ ಮೊದಲಿಗೆ ಒಮ್ಮೆ ಮತ್ತು ಕೊನೆಗೊಮ್ಮೆ ಹ್ಯಾಂಡ್ ಶೇಕ್ ಮಾಡಿ ಮ್ಮುವಾ ಮ್ಮುವಾ ಅಂತ ಗಲ್ಲ ಹಚ್ಚಿದರೆ ಮುಗಿಯಿತು. ಯಾರೂ ಯಾರನ್ನೂ ಮುಟ್ಟುವ ಅವಶ್ಯಕತೆಯಿಲ್ಲ ಇಬ್ಬರೇ ಆಡ ಬಲ್ಲ ಆಟ. ದುಬಾರಿ ಪರಿಕರಗಳೂ, ಕೋರ್ಟೂ ಬೇಕು.. ಕ್ರಿಕೆಟ್ ಜಂಟಲ್ ಮನ್ ಗೇಮ್. ಅಧಿಕಾರಿ ವರ್ಗದವರು ಮಿಲಿಟರಿಯವರು ದಿನಗಟ್ಟಲೆ ಖಾಲಿ ಇದ್ದಾಗ ನಮ್ಮ ಜನ ಇಸ್ಪಿಟು ಆಡುವಂತೆ ದಿನಗಟ್ಟಲೆ ಆಡುವದು. ನಡುವೆ ವಿಕೆಟ್ ಬಿದ್ದಾಗ ಆಟದ ಮೊದಲು ಕೊನೆಗೆ ಒಮ್ಮೆ ಹ್ಯಾಂಡ್ ಶೇಕ್ ಮಾಡಿದರೆ ಮುಗಿಯಿತು. ಒಬ್ಬರನ್ನೊಬ್ಬರು ಮುಟ್ಟುವ ಅವಶ್ಯಕತೆಯಿಲ್ಲ. ಮೈಕೈ ಕೊಳೆಯಾಗಬೇಕಿಲ್ಲ. ಪರಿಕರಗಳು ಮತ್ತು ಮೈದಾನ ಬೇಕು. ಫುಟ್ ಬಾಲ್ ಬಾಕ್ಸಿಂಗ್ ಮತ್ತಿತರೆ ಆಟಗಳು ಹಾಗಲ್ಲ ಇಡಿಯ ದಿನ ದುಡಿದು ದಣಿದ ಕಾರ್ಮಿಕರು ಮನರಂಜನೆಗಾಗಿ ಒಬ್ಬರೊಬ್ಬರು ಗೆಳೆಯರಾಗಿ ಒಬ್ಬರೊಬ್ಬರ ಮೇಮೇಲೆ ಬಿದ್ದು ಒದ್ದಾಡಿ ಮಣ್ಣೆಲ್ಲ ಮೈಗೆ ಹಚ್ಚಿಕೊಂಡು ಆಡುವ ಆಟಗಳು. ಪರಿಕರಗಳು ಚೆಂಡು ಮತ್ತು ಎಲ್ಲಿಬೇಕಲ್ಲಿ ಆಡಬಹುದು.

ಇಂಡಿಯಾದಲ್ಲಿ ಬೇರೂರಿರುವ ಅಸಮಾನತೆ ಮತ್ತು ಪರಿಕರಗಳ affordability ಗೆ ಕ್ರಿಕೆಟ್ ಸರಿಯಾದ ಆಟ. ಹೆಚ್ಚಿನ physical fitness ಅವಶ್ಯಕತೆಯಿಲ್ಲದ ಕೈಲಿ ಹಣ ಇರುವ ಸೋಮಾರಿಗಳು ಆಡಬಲ್ಲ ಆಟ. ಇಂಡಿಯನ್ ಮಿಡಲ್ ಕ್ಲಾಸ್ ಗೆ ಜಂಟಲ್ ಮನ್ ಫೀಲ್ ಮತ್ತು ಪ್ರತಿಷ್ಟೆ ಕೊಡುವ ಆಟ. ೧೯೮೭ ರಲ್ಲಿ ಇಂದಿರಾ ಹತ್ಯೆಯ ನಂತರ ರಾಜೀವ್ ಗಾಂಧಿ ಕಾಲದಲ್ಲಿ ಜಾಗತೀಕರಣದ ಮೂಲಕ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಲು ದೊಡ್ಡ ದೊಡ್ಡ ದೇಶಗಳು ತವಕಿಸುತ್ತಿದ್ದ ಕಾಲದಲ್ಲೇ ಇಂಡಿಯಾಕ್ಕೆ ಅಧಿಕೃತವಾಗಿ ಕ್ರಿಕೆಟ್ ಪ್ರವೇಶ ನೀಡಿತು.

ಮೊದಲ ಇಂಗ್ಲೇಂಡೇತರ ಪ್ರೊಟೀನ್ ತಿನ್ನದ ಪ್ರಿವಿಲೇಜ್ ಕಾಸ್ಟ್ ಸಸ್ಯಾಹಾರಿಗಳೂ ಆಡಬಹುದಾದ ಆಟ. ಕ್ರಿಕೆಟನ್ನು ಪ್ರಾಯೋಜಿಸಿದ್ದು ಅಂಬಾನಿಯ ರಿಲಯನ್ಸ್ ! ೧೯೯೬ ರ ವರ್ಡ್ ಕಪ್ ನಲ್ಲಿ ಕ್ರಿಕೆಟ್ ಜನಪ್ರಿಯಗೊಳಿಸಲು ಇಂಡಿಯಾ ಪಾಕಿಸ್ತಾನ ಮ್ಯಾಚ್ ಅನ್ನು ಡ್ರಾಮೆಟೈಸ್ ಮಾಡುವುದು ಸೇರಿದಂತೆ ಏನೇನು ಕಸರತ್ತು ಮಾಡಬೇಕೋ ಅದೆಲ್ಲ ಮಾಡಲಾಯಿತು. ಇಂಡಿಯಾಕ್ಕೆ ಬೆಂಕಿಪಟ್ಟಣದಿಂದ ಹಿಡಿದು ವಿಮಾನದವರೆಗೆ ರಫ್ತು ಮಾಡುವ ಕಂಪನಿಗಳು ತಮ್ಮ ಜಾಹೀರಾತಿನ ಅತಿ ದೊಡ್ಡ ಪ್ಲೆ ಗ್ರೌಂಡ್ ಆದ ಕ್ರಿಕೆಟ್ ಗೆ ಹಣ ಸುರಿಯಲಾರಂಭಿಸಿದವು. ಗ್ಲಾಮರ್ ಸುತ್ತಿಕೊಂಡಿತು, ಆಟಗಾರರು ನೂರಾರು ಕೋಟಿ ದುಡಿದರು. ತಂತ್ರಜ್ಞಾನಗಳ ಮೂಲಕ ಇನ್ನೂ ಡ್ರಾಮೆಟೈಸ್ ಮಾಡಲಾಯಿತು. ಈಗ ಸತತವಾಗಿ ಆಟಗಾರರ ರೌಂಡ್ ರಾಬಿನ್ ಮೂಲಕ ಕ್ರಿಕೆಟ್ ಆಡಿಸಲಾಗುತ್ತಿದೆ.

ವೆನೆಜುವೆಲಾದಲ್ಲಿ ಕಲ್ಲೆಣ್ಣೆ ಪತ್ತೆಯಾದಾಗ ವಿಶ್ವಸುಂದರಿ ಸ್ಪರ್ದೆಯಲ್ಲಿ ಸತತವಾಗಿ ಅಲ್ಲಿನ ಸುಂದರಿಯರು ಗೆದ್ದರು. ಇಂಡಿಯಾ ಜಗತ್ತಿಗೆ ಮಾರುಕಟ್ಟೆಯನ್ನು ತೆರೆದಾಗ ಇಲ್ಲೂ ಸತತವಾಗಿ ಗೆದ್ದರು. ಕ್ಯಾಪಿಟಲಿಸಮ್ ಹೆಣ್ಣು ಆಟ ಊಟ ಎಲ್ಲವನ್ನೂ ಮಾರುಕಟ್ಟೆಗೆ ಬಳಸುತ್ತದೆ. ಕ್ರಿಕೆಟನ್ನೂ!

‍ಲೇಖಕರು avadhi

November 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: