ಲಕ್ಷ್ಮಿ ವಿ ಪ್ರಸಾದ್
ಕೋಟಿ ಚೆನ್ನಯರ ಅಕ್ಕ ಕಿನ್ನಿದಾರುವಿನ ಮನೆ, ದೋಲ, ಎಡಮಂಗಲ ಸಮೀಪದಲ್ಲಿದೆ
ನಾಲ್ಕು -ವರ್ಷ ಮೊದಲು ಎಡಮಂಗಲ ಮಾಲಿಂಗ ರಾಯ ದೈವದ ನೇಮ ರೆಕಾರ್ಡ್ ಮಾಡಲು ಹೋಗುತ್ತಿದ್ದಾಗ, ದಾರಿಯಲ್ಲಿ ದೋಲ ಅರಮನೆ ಎಂಬ ಫಲಕ ಕಂಡು ಅಲ್ಲಿ ಸೂಚಿಸಿದಂತೆ ದಾರಿ ಹುಡುಕಿಕೊಂಡು ಹೋಗಿ ನೋಡಿ ಫೋಟೋ ಹಿಡಿದು ಬಂದೆ. ವಾಸ್ತವದಲ್ಲಿ ದಾರಿ ತಪ್ಪಿ ಅಲೆದಾಡುವಾಗ ಕಾಣಿಸಿದ ದೋಲ ಅರಮನೆ ಎಂಬ ಮಾರ್ಗ ಸೂಚಿಯನ್ನು ಅನುಸರಿಸಿ ಬಂದಾಗ ಸಿಕ್ಕಿದ್ದು ಕಿನ್ನಿದಾರುವಿನ ಮನೆ.
ಸುಮಾರು 350 ವರ್ಷ ಹಿಂದಿನ ಮಣ್ಣಿನಲ್ಲಿ ಕಟ್ಟಿದ ಮನೆ ಇದ. ಇಲ್ಲಿ ದೀಪ ಇಡುವ ಗಿಳಿಸೂವೆ ಇದೆ, ಒಳಗೆ ಉಯ್ಯಾಲೆ ಇದೆ, ಎದುರಿನಲ್ಲಿ ಕಾಣುವ ಬಾವಿಯಿಂದ ನೀರನ್ನು ಕೋಟಿ ಚೆನ್ನಯರು ಕುಡಿದರು ಎಂಬ ನಂಬಿಕೆ ಇದೆ.
ಇದರ ಬದಿಯಲ್ಲಿ ಒಂದು ಭೂತದ ಮಾಡ ಇದೆ, ಅಲ್ಲಿ ವರ್ಷಕ್ಕೊಮ್ಮೆ ನೂತೊಂಜಿ ಮಲೆ ಭೂತೋಲೆ ನೇಮ ಆಗುತ್ತದೆ ಎಂದು ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದರು.
ಈ ಮನೆಯ ಎದುರು ಭಾಗಕ್ಕೆ ಸ್ವಲ್ಪ ಮುಂದೆ ಎರಡು ತಾಳೆ ಮರಗಳು ಅಕ್ಕ ಪಕ್ಕ ಇವೆ. ಇವು ಕೋಟಿ ಚೆನ್ನಯರ ಪ್ರತೀಕ ಎಂಬ ನಂಬಿಕೆ ಇದೆ.
ಇದರ ಜೊತೆಗೆ ವಿವೇಕ ರೈ ಅವರು ಬರೆದ ಎಕ್ಕ ಸಕ್ಕ ಚಿತ್ರಗೀತೆಯನ್ನು ಕೇಳಿ ನೋಡಿ
ಕೋಟಿ ಚನ್ನಯ ಸಿನೆಮಾಗಾಗಿ ಬರೆದ ಹಾಡು ಇದು
ತುಳುವಿನ ಚಿತ್ರ ಗೀತೆಯೊಂದು ಇಂದಿಗೂ ಜನಮನವನ್ನು ಆಳುತ್ತಿದೆ ಎಂದರೆ ಈ ಹಾಡೊಂದೇ..
ಇದು ಕೋಟಿ ಚನ್ನಯ ತಮ್ಮ ಅಕ್ಕನ ಮನೆಗೆ ಬರುವ ದೃಶ್ಯ.
ಅಕ್ಕ ಸಂತಸದಿಂದ ಈ ಹಾಡು ಹಾಡುತ್ತಾ ಕೋಟಿ ಚನ್ನಯರನ್ನು ಆದರಿಸುತ್ತಾಳೆ
ಅಂದ ಹಾಗೆ ಈ ಚಿತ್ರದಲ್ಲಿ ಅಕ್ಕ ಕಿನ್ನಿದಾರುವಿನ ಪಾತ್ರ ಮಾಡಿದವರು ಯಾರು ಎಂದು ಕೊಂಡಿದ್ದೀರಿ?
the one and only ಕಲ್ಪನಾ
0 ಪ್ರತಿಕ್ರಿಯೆಗಳು