ಕೇಸರಿ ಹರವೂ ʼಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಪ್ರದರ್ಶನ..

ಕಳೆದ ಡಿಸೆಂಬರ್‌ನಿಂದ ನಡೆಯುತ್ತಿರುವ ರೈತ ಚಳವಳಿಯು ಜಗತ್ತಿನ ಗಮನ ಸೆಳೆದ ಅಪರೂಪದ ಸತ್ಯಾಗ್ರಹವಾಗಿದೆ. ಈ ಚಳವಳಿಯ ಕುರಿತ ಸಾಕ್ಷ್ಯಚಿತ್ರ ‘ಕಿಸಾನ್ ಸತ್ಯಾಗ್ರಹ’ ಈಗ ಪೂರ್ಣಗೊಂಡು, ಇದರ ಪ್ರಥಮ ಪ್ರದರ್ಶನವನ್ನು ಡಿಸೆಂಬರ್‌ 5 ರಂದು, ಕಲ್ಪ ಕ್ಷೇತ್ರ, ೫೮೧/೧, ೪ನೇ ಹಂತ, ೧ನೇ ಫೇಸ್, ವಿಜಯನಗರ ೩ನೇ ಹಂತ, ವಿಜಯನಗರ, ಮೈಸೂರಿನಲ್ಲಿ ಏರ್ಪಡಿಸಲಾಗಿದೆ. ಸುಮಾರು ೮೫ ನಿಮಿಷಗಳ ಚಿತ್ರದ ಪ್ರದರ್ಶನದ ನಂತರ ನಿರ್ದೇಶಕರೊಂದಿಗೆ ಸಂವಾದ ಇದೆ.

ಕೇಸರಿ ಹರವೂ: ಕನ್ನಡದ ಪ್ರಸಿದ್ಧ ಚಲನಚಿತ್ರ ನಿರ್ದೇಶಕರೂ ಮತ್ತು ರಾಷ್ಟ್ರಪ್ರಶಸ್ತಿ ವಿಜೇತರು (ಭೂಮಿಗೀತ, ೧೯೯೮) ಆದ ಕೇಸರಿ ಹರವೂ. ೨೦೦೮ರ ಚಲನಚಿತ್ರ ಪ್ರಶಸ್ತಿ ಅಯ್ಕೆ ಸಮಿತಿಯ ಅಧ್ಯಕರೂ ಅಗಿದ್ದರು. ಹರವೂ ಇದುವರೆವಿಗು ಹಲವಾರು ಸಾಕ್ಷ್ಯಚಿತ್ರಗಳನ್ನು ಸಹ ನಿರ್ದೇಶಿಸಿದ್ದು, ಅವುಗಳಲ್ಲಿ ರೈತ ಸಂಘದ ಪುಟ್ಟಣ್ಣಯ್ಯ, ನಗರ ಮತ್ತು ನದೀ ಕಣಿವೆ, ಅಘನಾಶಿನಿ ಮತ್ತು ಅವಳ ಮಕ್ಕಳು, ಲಾಕ್ ಡೌನ್ ಸರಣಿಯ ಚಿತ್ರಗಳು ಪ್ರಮುಖವಾದವುಗಳು. ಅಪಾರ ಸಾಮಾಜಿಕ ಕಾಳಜಿ, ಬದ್ದತೆ ಮತ್ತು ಸಂವೇದನಾ ಶೀಲತೆಯ ಹರವೂ ಅವರ ಸಾಕ್ಷ್ಯಚಿತ್ರಗಳು ಕನ್ನಡದ ಸಾಮಾಜಿಕ ವಾಸ್ತವಗಳ ಅಪೂರ್ವ ದಾಖಲೆಗಳಾಗಿವೆ.

ಆಯೋಜನೆ: ಮೈಸೂರು ಗೆಳೆಯರು, ಸಮಾಜವಾದಿ ಅಧ್ಯಯನ ಕೇಂದ್ರ ಮೈಸೂರು, ಅಲ್ಲಮ ರಿಸರ್ಚ ಅಂಡ್ ಕಲ್ಚರಲ್ ಫೌಂಟೇಶನ್ ಮೈಸೂರು, ರಂಗವಲ್ಲಿ ಮೈಸೂರು, ಸಹಜ ಸೀಡ್ಸ್, ಅಭಿರುಚಿ ಪ್ರಕಾಶನ, ದೇಸಿ ರಂಗ, ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್.

‍ಲೇಖಕರು Admin

December 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: