ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ' ಘೋಷಿಸಲಾಗಿದ್ದು ಕೆ ಪಿ ಮೃತ್ಯುಂಜಯ, ಚೈತ್ರಾ ಶಿವಯೋಗಿಮಠ, ದಯಾ ಗಂಗನಘಟ್ಟ, ಸಂತೋಷಕುಮಾರ ಮೆಹಂದಳೆ, ಡಾ.ಮಿರ್ಜಾ ಬಷೀರ್, ಸುಚಿತ್ರಾ ಹೆಗಡೆ ಸೇರಿದಂತೆ 10 ಸಾಹಿತಿಗಳ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ಈ ಪ್ರತಿಷ್ಟಿತ ಪ್ರಶಸ್ತಿಗೆ ಈ ಬಾರಿ 22 ನೆಯ ವರ್ಷದ ಸಂಭ್ರಮ. ಈ ಸಾಲಿನಲ್ಲಿ ಸುಮಾರು 800 ಕೃತಿಗಳು ಸ್ಪರ್ಧೆಗೆ ಬಂದಿದ್ದು 5 ಪ್ರಶಸ್ತಿಯನ್ನು 10 ಸಾಹಿತಿಗಳು ಹಂಚಿಕೊಂಡಿದ್ದಾರೆ ಎಂದು ‘ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.









ಪ್ರಶಸ್ತಿ ವಿಜೇತರು- ಕೃತಿಗಳು
ಕೆ.ಪಿ.ಮೃತ್ಯುಂಜಯ ಅವರ ‘ಉಳಿದುಬಿಡು ಒಂದು ಬಿಂದುವಾಗಿ’ ಚೈತ್ರಾ ಶಿವಯೋಗಿಮಠ
ಅವರ ‘ಪೆಟ್ರಿಕೋರ್’ (ಕಾವ್ಯ), ದಯಾ ಗಂಗನಘಟ್ಟ ‘ಉಪ್ಪುಚ್ಚಿ ಮುಳ್ಳು’ ಕೃಷ್ಣನಾಯಕ
ಅವರ ‘ಕಾಂತಾಮಣಿಯ ಕನಸುಗಳು’ (ಕಥೆ), ಸಂತೋಷಕುಮಾರ ಮೆಹಂದಳೆ ಅವರ ‘ವೈಜಯಂತಿಪುರ’ ಡಾ.ಸಿ. ಚಂದ್ರಪ್ಪ
ಅವರ ‘ಅಶೋಕ’ (ಕಾದಂಬರಿ), ಡಾ.ಮಿರ್ಜಾ ಬಷೀರ್ ಅವರ ‘ಗಂಗೆ ಬಾರೆ ಗೌರಿ ಬಾರೆ’ ಮತ್ತು ಸುಚಿತ್ರಾ ಹೆಗಡೆ ಅವರ '
ಜಗವ ಸುತ್ತವ ಮಾಯೆ’ (ಸಂಕೀರ್ಣ), ನಾಗೇಶನಾಯಕ ಅವರ ಕಾಡುವ ಕವಿತೆ' ಡಾ.ಸ್ವಾಮಿರಾವ್ ಕುಲಕರ್ಣಿ
ಅವರ ‘ದಾಸ ಸಾಹಿತ್ಯ: ದೃಷ್ಟಿ-ಸೃಷ್ಟಿ’ ಕೃತಿಗಳನ್ನು ೨೩ ನೇ ವರ್ಷದ ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ತಲಾ ೫೦೦೦ ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಈ ನೆಲದ ಸಿರಿಧಾನ್ಯ ತೊಗರಿ ಬೇಳೆ ಒಳಗೊಂಡಿರುತ್ತದೆ. ಎಲ್ಲ ವಿಭಾಗದಲ್ಲಿ ಲೇಖಕರು ಪ್ರಶಸ್ತಿಯನ್ನು ಹಂಚಿಕೊಂಡಿದ್ದು, ಇದೇ ನವೆಂಬರ್ ೨೬ ರಂದು ಸಂಜೆ ೫.೩೦ಕ್ಕೆ ಸೇಡಮ್‌ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ
ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
0 ಪ್ರತಿಕ್ರಿಯೆಗಳು