ಕನ್ನಡ ಭಾಷೆಯ ಚೆಂದ
ಕೆ. ಟಿ. ಗಟ್ಟಿ
ನಮ್ಮ ಕರ್ನಾಟಕ ರಾಜ್ಯದ ಎಂಎಲ್‍ಎಗಳು ಮತ್ತು ಎಂಪಿಗಳ ಭಾಷಣಗಳ ವರಸೆ ನೋಡಿದರೆ, ಅವರು ತಮ್ಮ ಸ್ಥಾನದ ಘನತೆ ಗಾಂಭಿರ್ಯಗಳನ್ನು ಆಮೂಲಾಗ್ರ ತೊರೆದಿರುವಂತೆ ಕಾಣುತ್ತದೆ. ಅಹಂಕಾರ, ಉಡಾಫೆ ತೋರಿಸದಿದ್ದರೆ ತಮ್ಮ ಮಾತಿನಲ್ಲಿ ಶಕ್ತಿ ಇಲ್ಲ ಎಂದು ಅವರು ನಂಬಿರುವಂತೆ ತೋರುತ್ತದೆ.
ಅವರು ಆಡುವ ಕನ್ನಡವನ್ನು ಕೇಳಿದರೆ, ಅವರು ತಮ್ಮ ಮುಖಕ್ಕೆ ತಾವೇ ಮಸಿ ಬಳಿದುಕೊಳ್ಳುತ್ತಿರುವಂತಿದೆ. ಅವರು ಶಾಲೆ-ಕಾಲೇಜುಗಳಲ್ಲಿ ಓದಿ ಕನ್ನಡ ಕಲಿತುಕೊಂಡವರಲ್ಲ, ಬಹುಶಃ ವಿದ್ಯಾವಂತರೇ ಅಲ್ಲ ಎಂದು ಅನಿಸುತ್ತದೆ.
ಮಾತು ಅಂದರೆ ಬರೀ ಗಂಟಲು ಮತ್ತು ನಾಲಿಗೆಯಿಂದ ಹೊರಡುವ ಶಬ್ಧಗಳಲ್ಲ, ಮಾತು ಮುತ್ತು ರತ್ನ, ವಜ್ರ ವೈಢೂರ್ಯಕ್ಕೆ ಸಮಾನ ಎಂದು ನಮಗೆಲ್ಲರಿಗೂ ಹಿರಿಯರಾದಂಥ ಜ್ಞಾನಿಗಳು ಹೇಳಿದ್ದಾರೆ. ಅದನ್ನೆಲ್ಲ ಇಂದಿನ ರಾಜಕಾರಣಿಗಳು ಮರೆತು ಮನಬಂದಂತೆ ಮಾತಾಡುತಿದ್ದಾರೆ.
ಈ ಕೆಟ್ಟ ಚಾಳಿ ಸಾಮಾನ್ಯ ರಾಜಕಾರಣಿಯ ನಾಲಿಗೆಯಿಂದ ಮಂತ್ರಿ ಮಹೋದಯರ ಮಾತ್ರವಲ್ಲ, ದೇಶದ ಮಹಾಪ್ರಧಾನಿಯ ನಾಲಿಗೆಯ ವರೆಗೂ ಹಬ್ಬಿಕೊಂಡಿದೆ. ಕನ್ನಡವನ್ನು ಪ್ರೀತಿಸುವವರು, ಕನ್ನಡ ಶ್ರೇಷ್ಠ ಭಾಷೆ ಎಂದು ನಂಬಿ ಕೊಂಡಾಡುವವರು ಹೊಲಸು ನಾಲಿಗೆಯಲ್ಲಿ ಹೊಲಸು ಹೊಲಸಾಗಿ ಕನ್ನಡ ಮಾತಾಡುವವರ ಮನಸ್ಸು ಶುದ್ಧವಾಗುವುದು ಹೇಗೆ ಎಂದು ಚಿಂತಿಸುತ್ತಿದ್ದಾರೆ.
ಇವತ್ತು ಚಿಕ್ಕ ಮಕ್ಕಳು ಕೂಡ ಕನ್ನಡ ಭಾಷೆಯಲ್ಲಿ ಎಷ್ಟು ಚೆನ್ನಾಗಿ ಮಾತಾಡುತ್ತಿದ್ದಾರೆ, ಎಷ್ಟು ಸುಂದರವಾಗಿ ಕನ್ನಡದ ಹಾಡುಗಳನ್ನು ಹಾಡುತ್ತಿದ್ದಾರೆ ಎಂದರೆ ಬಾಯಿಗೆ ಬಂದಂತೆ ನಾಲಿಗೆ ಹೊರಳಿಸುವ ರಾಜಕಾರಣಿಗಳಿಗೆ ನಾಚಿಕೆ ಹುಟ್ಟಬೇಕು.
ನಿಜವಾದ ಮಾತುಗಳು