ಜಿಮ್ ಕಾರ್ಬೆಟು ಕಾಡು ಹೊಕ್ಕ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ ಆಧುನಿಕ ಜಿಮ್ ಕಾರ್ಬೆಟ್ ಎನಿಸಿಕೊಳ್ಳಲು ಹೋಗಿ ಮಾಡಿದ್ದೇನು? ಅನ್ನೋದನ್ನು ಕನ್ನಡದ ಖ್ಯಾತ ಬರಹಗಾರ ಕೆ.ಟಿ. ಗಟ್ಟಿ ಕಂಡ ಒಂದು ವಾರೆ ನೋಟ ಇಲ್ಲಿದೆ..
ಕೆ. ಟಿ. ಗಟ್ಟಿ
ಗದ್ಯ-ಪದ್ಯ ಲೇಖನ ರೂಪಕ
**
ಉತ್ತರ ಭಾರತದ ಘೋರಾರಣ್ಯದೊಳಗಿನ ಗುಹೆಯೊಂದರಲ್ಲಿ ವಾಸವಾಗಿತ್ತು ಬಹಳ ಕಾಲದಿಂದ ಒಂದು ಘೋರ ವ್ಯಾಘ್ರ
ಮನುಷ್ಯರನ್ನು ಕೊಂದು ತಿನ್ನುವುದೊಂದೇ ಆಗಿತ್ತು ಅದರ ಕರ್ಮ ಮತ್ತು ಧರ್ಮ.
ವರ್ಷಗಳೆಷ್ಟು ಕಳೆದರೂ ಯಾರಿಂದಲೂ ಕೊಲ್ಲಲು ಆಗಲಿಲ್ಲ ಮಾನವ ಭಕ್ಷಕ ಹುಲಿಯನ್ನು
ಒಂದು ದಿನ ಜಿಮ್ ಕಾರ್ಬೆಟು ಕೊಂದನಾ ನರಭಕ್ಷಕ ಹುಲಿಯನ್ನ
ನಲಿದಾಡಿದರು ಭೂಮಿಯ ಮೇಲೆ ನಾಗರಿಕ ಜನ ಜಾತಿ
ಜಿಮ್ ಕಾರ್ಬೆಟ್ ಎಲ್ಲಿ ಎಂದು ಹುಡುಕಿದರು ಜನ ‘ಎಷ್ಟು ಹುಡುಕಿರೂ ಯಾರ ಯಾರ ಕಣ್ಣಿಗೂ ಕಾಣಿಸಲಿಲ್ಲ ಜಿಮ್ ಕಾರ್ಬೆಟ್ ಎಂಬ ಅಪೂರ್ವ ಮಾನವ
ಕಳೆಯಿತೊಂದು ಸಂವತ್ಸರ
ಒಂದು ದಿನ ನಡು ರಾತ್ರಿಯ ಕತ್ತಲಲ್ಲಿ ಆಗಾಶದಿಂದೊಂದು ಗಗನ ವಾಹಿನಿಯಲ್ಲಿ ಭೂಮಿಗಿಳಿದು ಬಂತು ಒಂದು ಅನನ್ಯ ವಿಕಾರ ಸುಂದರ ಮಾನವ ರೂಪ.
ಯಾರು ಯಾರು ಎಂದು ಕೇಳಿದರು ಜನ
ಭೂಮಿಯೇ ನಡುತ್ತಿದೆ ಎಂಬಂತೆ ಜನ ನಡುಗಿದರು
ಜನರ ನಡುಕದ ನಡುವೆ ಘೋಷಿಸಿದ ವಿಕಾರ ಸುಂದರ ಮಾನವ
ಎಲ್ಲರೂ ಕೇಳಿ, ಎಲ್ಲರೂ ತಿಳಿದುಕೊಳ್ಳಿ
ನಾನು ಜಿಮ್ ಕಾರ್ಬೆಟನ ಎರಡನೆಯ ಜನ್ಮ
ಎಲ್ಲರೂ ನನ್ನನ್ನು ಪೂಜಿಸತಕ್ಕದ್ದು ಎಂದಿತು ವಿಕಾರ ಸುಂದರ ಮಾನವ ರೂಪ
ಜನ ಹಿಂದೆ ಮುಂದೆ ನೋಡದೆ ವಿಕಾರ ಸುಂದರನ ಕಾಲಿಗೆ ಬಿದ್ದು ವಂದಿಸಿದರು ಕೆಲವರು ಆತನ ಕಾಲ ಮೇಲೆ ಬಿದ್ದು ಹೊರಳಾಡಿದರು
ಧೈರ್ಯ ಮಾಡಿ ಕೆಲವರು ಕೇಳಿದರು: ತಾವೇಕೆ ಈ ದರಿದ್ರ ಸುಂದರ ದೇಶಕ್ಕೆ ಬಂದಿರಿ?
ಆಗ ಘೋಷಿಸಿದ: ವಿಕಾರ ಸುಂದರ ಮಾನವ:
ಕಿವಿ ನನಗೆ ಕೊಟ್ಟು ಕೇಳಿ:
ನಾನು ಬಂದಿದ್ದೇನೆ:
ಯಾಕೆ ಗೊತ್ತಾ? ಈ ಭಾರತ ಭೂಮಿಯನ್ನು ಸಂಪೂರ್ಣ ಹೊಸದಾಗಿಸುತ್ತೇನೆ.
ಭಾರತದಲ್ಲಿ ಏನಾಗಲಿದೆ ನೋಡಿ: ಕಣ್ಣು ತೆರೆದು ನೋಡಿ
ನೀವು ನೋಡುತ್ತಿರುವ ಹಾಗೆಯೇ ಇಡೀ ದೇಶ ಸ್ವರ್ಗ ಸದೃಶ ಆಗಲಿದೆ. ಎಲ್ಲರೂ ಒಂದೇ ದನಿಯಲ್ಲಿ ಘೋಷಿಸಿ ಅಚ್ಛಾ ದಿನ್ ಆಯೆಗಾ
ಬಡತನವನ್ನು ಸಂಪೂರ್ಣ ಅಳಿಸಿ ಹಾಕುತ್ತೇನೆ. ದೇಶದಲ್ಲಿ ಶ್ರೀಮಂತರು ಮಾತ್ರ ಇರುತ್ತಾರೆ.
ಪ್ರಜೆಗಳ ಪ್ರಭುತ್ವದ ಅಗತ್ಯ ಇರುವುದಿಲ್ಲ. ಭ್ರಷ್ಟಾಚಾರದ ಸುಳಿವು ಇರುವುದಿಲ್ಲ.
ದೇಶದ ತುಂಬ ಸುಂದರವಾದ ಮನೆಗಳು, ಸುಂದರವಾದ ಅಂಗಡಿಗಳು, ವಾಹನಗಳು ಮಾತ್ರ ಇರುತ್ತವೆ.
ಎಲ್ಲೆಲ್ಲೂ ಮಾಲುಗಳು ಎಂಬ ಸ್ವರ್ಗೀಯ ಕಟ್ಟಡಗಳು ಮಾತ್ರ ಇರುತ್ತವೆ
ಎಲ್ಲರೂ ಭೂಮಿಯುದ್ದಗಲಕ್ಕೆ ಕೇಳುವಂತೆ ಗಂಟಲು ಹರಿದುಕೊಂಡು ಕೂಗಿಕೊಂಡರು “ಅಚ್ಚಾ ದಿನ್ ಆಯೆಗಾ”
0 ಪ್ರತಿಕ್ರಿಯೆಗಳು