ಹಿರಿಯ ಕಾದಂಬರಿಕಾರ, ವೈಚಾರಿಕ ಬರಹಗಾರ, ಬಾನುಲಿಗೆ ಸಾಕಷ್ಟು ಬಾನುಲಿ ನಾಟಕ/ಧಾರಾವಾಹಿಗಳನ್ನು ನೀಡಿದ್ದ ಕೆ.ಟಿ.ಗಟ್ಟಿ ನಿಧನ….
ಹೈಸ್ಕೂಲ್ ದಿನಗಳಿಂದಲೇ ಅವರ ಬರಹಗಳ ಅಭಿಮಾನಿ ಆಗಿದ್ದೆ. ಮುಂದೊಂದು ದಿನ ಅವರೇ ಬರೆದ “ತಾಳಮದ್ದಳೆ” ಧಾರಾವಾಹಿಯಲ್ಲಿ ಸೂರ್ಯ ಎಂಬ ಪಾತ್ರ ನಿರ್ವಹಿಸುವ ಅವಕಾಶವನ್ನು ನಿರ್ದೇಶಕ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಅವರು ನೀಡಿದ್ರು. ಆ ಧಾರಾವಾಹಿ ಆಲಿಸಿ ಖುಷಿಪಟ್ಟು ಅವರೇ ನಂಬರ್ ಕೇಳಿ ಕರೆ ಮಾಡಿ ಅಭಿನಂದಿಸಿದ್ದು ಇಂದಿಗೂ ರೋಚಕ ಅನುಭವ. ಕೆಲ ವರ್ಷಗಳ ಬಳಿಕ ಅವರದ್ದೇ ರಚನೆಯ “ಕೆಂಪು ಕಳವೆ” ಧಾರಾವಾಹಿಯ ಮಾದನ ಪಾತ್ರ ನಿರ್ವಹಿಸಲೂ ಅವಕಾಶ ಸಿಕ್ಕಿತು…
ಇಷ್ಟದ ಬರಹಗಾರರ ಭೇಟಿ ಎಲ್ರಿಗೂ ಕನಸಾಗಿರ್ತದೆ. ಆದರೆ ಅವರದ್ದೇ ಬರಹದ ಪಾತ್ರವಾವಾಗಿ ಅಭಿನಯಿಸುವ ಮೂಲಕ ಅವರ ಭೇಟಿ ಸಾಧ್ಯ ಆದದ್ದು ಅವಿಸ್ಮರಣೀಯ. ಬಾನುಲಿಯಲ್ಲಿ ಅವರನ್ನು ಭೇಟಿ ಆಗಿದ್ದು, ಅವರ ಮನೆಗೆ ಹೋದದ್ದೆಲ್ಲ ಈಗ ನೆನಪುಗಳು… ಚಿಂತನೆಗಳನ್ನು ಹುಟ್ಟುಹಾಕುವ ಓರ್ವ ಹಿರಿಯ ಬರಹಗಾರರನ್ನು ಕಳೆದುಕೊಂಡಿದ್ದೇವೆ…..
-ಕೃಷ್ಣ ಮೋಹನ ತಲೆಂಗಳ
0 ಪ್ರತಿಕ್ರಿಯೆಗಳು