ಕನ್ನಡ ಸಿನಿಮಾಗಳ ವೈಜ್ಞಾನಿಕತೆ, ವೈಚಾರಿಕತೆ…

ಕೃಷ್ಣ ಪ್ರಸಾದ್

ನನ್ನ ಸಿನಿಮಾಸಕ್ತಿಯ ಪರಿಚಯ ಇರುವ ಗೆಳೆಯ ನಾಗೇಶ್ ಅರಳುಕುಪ್ಪೆ ಈ ವಿಷಯದ ಮೇಲೆ ಮಾತನಾಡಲು ಕೇಳುತ್ತಲೇ ಇದ್ದ. ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ವೈಚಾರಿಕತೆ ಎಲ್ಲಿದೆ? ಸುಮ್ಮನೆ ಇರು ಅದರ ಬಗ್ಗೆ ಮಾತಾಡೋಕ್ಕೆ ವಿಷಯವೇ ಇಲ್ಲಾ ಅಂತ ಹೇಳಿ ಅವನ ಮನವಿ ತಳ್ಳಿ ಹಾಕ್ತಾನೆ ಇದ್ದೆ. ಆದ್ರೆ ಒಂದು ದಿನ ಪ್ರಯತ್ನ ಮಾಡಿಯೇ ಬಿಡೋಣ ಅಂತ ನಿರ್ಧರಿಸಿ ಆಯ್ತು ಮಾರಾಯ ಅಂದೆ.

ಕನ್ನಡ ಒಂದೇ ಅಲ್ಲಾ, ಭಾರತದ ಯಾವ ಭಾಷೆಯ ಚಿತ್ರರಂಗದಲ್ಲೂ ದುರ್ಬಿನು ಹಾಕಿಕೊಂಡು ಹುಡುಕಿದರೂ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸುವ 1% ಸಿನಿಮಾಗಳು ಬಂದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಾತನಾಡಲು ಎಲ್ಲಿಂದ ಪ್ರಾರಂಭ ಮಾಡಬೇಕು ಅಂತ ಯೋಚಿಸ್ತಾ ಕುಳಿತಿದ್ದಾಗ ಮೊದಲು ಜ್ಞಾಪಕಕ್ಕೆ ಬಂದಿದ್ದು ಅಣ್ಣಾವ್ರ ಬಂಗಾರದ ಮನುಷ್ಯ ಸಿನಿಮಾ. ಬಂಗಾರದ ಮನುಷ್ಯ ಕನ್ನಡದ ನೋಡಲೇಬೇಕಾದ ನೂರು ಚಿತ್ರಗಳಲ್ಲಿ ಒಂದು.

ಬಹುಶಃ ಬಂಗಾರದ ಮನುಷ್ಯ ಸಿನಿಮಾ ನೋಡಿಲ್ಲದ ಕನ್ನಡಿಗರು ಸಿಗುವುದು ಕಷ್ಟ. ಬಂಗಾರದ ಮನುಷ್ಯ ಸಿನಿಮಾ ಬಿಡುಗಡೆ ಆದ ಸಂದರ್ಭದಲ್ಲಿ ಯುವಕರು ಪಟ್ಟಣ ತೊರೆದು ವ್ಯವಸಾಯ ಮಾಡಲು ಹಳ್ಳಿಗಳಿಗೆ ತೆರಳಿದ ಸಾಕಷ್ಟು ಉದಾಹರಣೆ ಇದೆ.ಸಾಮಾಜಿಕವಾಗಿ ಒಳ್ಳೆಯ ಪರಿಣಾಮ ಬೀರಿದ ಈ ಸಿನಿಮಾದಲ್ಲೂ ಅವೈಜ್ಞಾನಿಕವಾದ ದೃಶ್ಯ ಇದೆ. ಅದು ಕೆಂಪು ಸೀರೆ ಉಟ್ಟು ನಡೆದು ಬರುತ್ತಿದ್ದ ಭಾರತಿ ಮೇಲೆ ಗೂಳಿ ಅಟ್ಟಿಸಿಕೊಂಡು ಬರುವ ದೃಶ್ಯ.ವಾಸ್ತವವಾಗಿ ಗೂಳಿಯ ವರ್ತನೆ ಮೇಲೆ ಕೆಂಪು ಬಣ್ಣವು ಪ್ರಭಾವ ಬೀರುವುದಿಲ್ಲ. Bulls are colourblind.

ಅಕಾಡೆಮಿಕ್ ಆಗಿ ಪ್ರೆಸೆಂಟ್ ಮಾಡಲು ಹೋಗದೆ (ಬಂದ್ರೆ ತಾನೆ ಮಾಡೋಕ್ಕಾಗೋದು) random ಆಗಿ ಮಾತಾಡ್ತಾ ಹೋದೆ.
ಎರಡನೇ ಸಿನಿಮಾ ಜ್ಞಾಪಕಕ್ಕೆ ಬಂದಿದ್ದು ಕನ್ನಡದ ಮತ್ತೊಂದು ಅತ್ಯಂತ ಜನಪ್ರಿಯ ಸಿನಿಮಾ ಆಪ್ತಮಿತ್ರ. ಸ್ವತಃ ಒಬ್ಬ ಮನೋವೈದ್ಯ ಸೌಂದರ್ಯಳ ಸಮಸ್ಯೆ ಬಗೆಹರಿಸಲು ಮಾಟ, ಮಂತ್ರ ಮಾಡುವವನ ಮೊರೆ ಹೋಗುವುದು.

ಸಾಮಾನ್ಯವಾಗಿ ಎಲ್ಲರೂ ನೋಡಿರಬಹುದಾದ ಜನಪ್ರಿಯ ಚಿತ್ರಗಳನ್ನೇ ಹೆಸರಿಸ್ತಾ ಹೋದೆ. ಹಾಗೆ ಮಾತಿನ ಮದ್ಯೆ ಬಂದು ಹೋದ ಇನ್ನೊಂದು ಸಿನಿಮಾ ಇತ್ತೀಚಿಗೆ ಬಿಡುಗಡೆ ಆದ ಕಾಂತಾರ. ಇನ್ನು ಹೊಡೆದಾಟದ ಎಲ್ಲಾ ದೃಶ್ಯಗಳು against ಗ್ರಾವಿಟಿ.

ಸದ್ಯಕ್ಕೆ ಜಗತ್ತಿನ ಎತ್ತರದ ಕಟ್ಟಡ ಬುರ್ಜ್ ಖಾಲಿಫದ ಎತ್ತರ 830m. ಅದರ ಮುಂದೆ ನಮ್ಮ ಬೆಂಗಳೂರಿನ ಎತ್ತರದ ಕಟ್ಟಡ ಕೇವಲ 153m ಅದು ಮಂತ್ರಿ pinnacle. ಉದಾಹರಣೆಗೆ ಈ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ ಸಿನಿಮಾಗಳಲ್ಲಿ ಚಿತ್ರೀತವಾಗುವ ಬಗೆಯನ್ನು ಊಹಿಸಿಕೊಳ್ಳಿ. ಸ್ಲೋ ಮೋಶನ್ ನಲ್ಲಿ ಬೀಳೋದು, ಎಲ್ಲೆಯೋ ಇದ್ದ ಹೀರೋ ಓಡಿಬಂದು ರಕ್ಷಿಸೋದು. ಇಷ್ಟೆಲ್ಲಾ ಆಗೋದನ್ನ ಕನಿಷ್ಟ ಎರಡು ನಿಮಿಷ ತೋರಿಸ್ತಾರೆ. ಆದ್ರೆ 150m ಕಟ್ಟಡದಿಂದ ಬೀಳಲು ಕೇವಲ ಐದುವರೆ ಸೆಕೆಂಡ್ ಹಿಡಿಯುತ್ತೆ ಅಷ್ಟೇ. ಹೀಗೆ ಕೆಲವು ಉದಾಹರಣೆ ಕೊಡ್ತಾ ಮುಕ್ಕಾಲು ಗಂಟೆ ಮಾತಾಡ್ತಾ ಹೋದೆ.

ಆರ್ಟಿಕಲ್ 51A/h ನಲ್ಲಿ ಹೇಳಿರುವ ಹಾಗೆ ವೈಜ್ಞಾನಿಕ ಮನೋಭಾವ ಬೆಳೆಸುವ ಚಲನಚಿತ್ರಗಳೂ ಬಂದೇ ಇಲ್ವಾ? ಬಂದಿದೆ. ಅವು ಬೆರಳೆಣಿಕೆಯಷ್ಟು ಮಾತ್ರ.ಅದರಲ್ಲಿ ಉದಾಹರಿಸಬಹುದಾದ ಒಂದು ಸಿನಿಮಾ ಕಾಡಿನ ಬೆಂಕಿ. ಬೇರೆ ಕೆಲವು ಸಿನಿಮಾಗಳನ್ನು ಗುರುತಿಸಿದ್ದೇನೆ.ಅದನ್ನು ಈಗ ಹೆಸರಿಸಲು ಹೋಗುವುದಿಲ್ಲ. ನೀವೂ ಗುರುತಿಸಿ ಸಹಕರಿಸಿದರೆ ಚರ್ಚೆ ಮಾಡೋಣ. Social rationalism against social conservatism ವಿಷಯ ಇಟ್ಕೊಂಡು ಕೆಲವು ಸಿನಿಮಾಗಳನ್ನು ಗುರುತಿಸಿದೆ. ಅದರಲ್ಲಿ ಪ್ರಮುಖವಾದ ಕೆಲವು ಉತ್ತಮ ಚಿತ್ರಗಳನ್ನು ಹೆಸರಿಸಿ ಮುಗಿಸುತ್ತೇನೆ. ನಾಂದಿ, ಉಯ್ಯಾಲೆ, ಸುಬ್ಬಾಶಾಸ್ತ್ರಿ, ಸಂಸ್ಕಾರ, ಉದ್ಭವ, ಅನುಭವ, ಅನಂತನ ಅವಾಂತರ, ಅವಸ್ಥೆ…

Now it is your turn.

‍ಲೇಖಕರು avadhi

February 8, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: