ಡಾ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ವತಿಯಿಂದ ಇತ್ತೀಚಿಗೆ ಕುಪ್ಪಳಿಯಲ್ಲಿ ಸಮಕಾಲೀನ ವಿಷಯಗಳ ಬಗ್ಗೆ ಕಮ್ಮಟ ಹಮ್ಮಿಕೊಳ್ಳಲಾಗಿತ್ತು. ಡಾ ಕೆ ವಿ ನಾರಾಯಣ್ ಅವರ ಸಂಚಾಲಕತ್ವದಲ್ಲಿ ನಡೆದ ಈ ಕಮ್ಮಟಕ್ಕೆ ನಾಡಿನ ಮೂಲೆ ಮೂಲೆಯಿಂದ ಉತ್ಸಾಹಿ ಓದುಗರು ಬಂದಿದ್ದರು.
ಕನ್ನಡಪ್ರಭದ ಪತ್ರಕರ್ತ ಸಹ್ಯಾದ್ರಿ ನಾಗರಾಜ್ ತಾವು ಮಾಡಿಕೊಂಡ ನೋಟ್ಸ್ ಅಲ್ಲದೇ ಕ್ಯಾಮರಾವನ್ನೂ ಬಗಲಿಗೆ ಹಾಕಿಕೊಂಡು ಹೋದ ಪರಿಣಾಮದಿಂದ ಸಿಕ್ಕದ್ದು ಇಲ್ಲಿದೆ.
ಕುಪ್ಪಳಿಗೆ ಕುಪ್ಪಳಿಯೇ ಮಂಜು ಹೊತ್ತು ಮಲಗಿತ್ತು. ಅಂದ ಹಾಗೆ ಸಹ್ಯಾದ್ರಿ ನಾಗರಾಜ್ ಹೋಗುವೆನು ನಾ ನನ್ನ ಒಲುಮೆಯ ನಾಡಿಗೆ ಎನ್ನುವಂತೆ ಹೆಜ್ಜೆ ಹಾಕಿಯೇ ಬಿಟ್ಟರು
ಕವಿಯೂರಿನಲ್ಲಿ , ಕವಿಗಾಗಿ ಕಾಯುತ್ತಿವೆ ಮೋಡಗಳು
ಆ ಮೂವರಲ್ಲಿ ಮಂಜು ಯಾರು ? 🙂
ಮೋಡವು ಮೈ ತುಂಬಿಧಾಗ
ಹರೆಯವು ಆ ಅವಧಿಗಾಗಿ ಕಾಯುವಾಗ
ನಮ್ಮ ಆತ್ಮೀಯ ಬರಹಗಾರ ಯಾರಿಗಾಗಿ ಕಾಯುತ ಕುಳಿತಿರುವನು ಹೇಳಿ
ಅದುವೇ ಕವಿ ಸಮಯ