ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – Tempest Project…

ಇವರು ರಂಗ ‘ಕಿರಣ’-

ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!.

ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು ‘ರಂಗ ಕೈರಳಿ’ ಹಿಡಿದು ಬಂದರು. ಆ ರಂಗ ಕೈರಳಿ ಎಲ್ಲರೂ ಕೇರಳದ ರಂಗಭೂಮಿಯ ಕುರಿತ ದಾಖಲೆ ಎಂದುಕೊಂಡಿದ್ದರೆ. ಅದು ನಿಜವೇ ಹೌದಾದರೂ ಅದು ಅದಕ್ಕಿಂತ ಹೆಚ್ಚಾಗಿ ಕಿರಣ್ ಭಟ್ ಅವರ ರಂಗ ಪ್ರೀತಿಯ ಬಗೆಗಿನ ದಾಖಲೆ.

ನಾನು ಕಿರಣ ಭಟ್ ಅವರ ಹೆಸರು ಕೇಳಿದ್ದು ರಂಗಭೂಮಿಗೆ ಥಳಕು ಹಾಕಿಕೊಂಡೇ. ಅಷ್ಟರ ಮಟ್ಟಿಗೆ ಕಿರಣ್ ಹಾಗೂ ರಂಗಭೂಮಿ ಒಂದೇ ನಾಣ್ಯದ ಎರಡು ಮುಖಗಳು.

ಮಕ್ಕಳ ಅಂತೆಯೇ ಹಿರಿಯರ ರಂಗಭೂಮಿಯಲ್ಲಿ ಅಪಾರ ಅನುಭವವಿದೆ. ಇಷ್ಟೇ ಆಗಿದ್ದರೆ ಕಿರಣ್ ಬಗ್ಗೆ ರಂಗ ಪ್ರಿಯರು ಮಾತನಾಡುತ್ತಿರಲಿಲವೇನೋ. ಅವರು ಪ್ರತೀ ರಂಗ ಉತ್ಸಾಹಿಗೂ ಕೊಟ್ಟ ಬೆಂಬಲ, ತಮ್ಮ ಜಿಲ್ಲೆಯಲ್ಲಿ, ಹೋದೆಡೆಯಲ್ಲಿ ಕಟ್ಟಿಕೊಂಡ ರಂಗ ಆವರಣ, ಪ್ರಯೋಗಗಳಿಗೆ ಕೊಟ್ಟ ಹೊಸ ಧಿಕ್ಕು ಎಲ್ಲವೂ ಕಿರಣರನ್ನು ‘ರಂಗ ಕಿರಣ’ವಾಗಿಸಿದೆ.

ಇವರ ಬೆನ್ನು ಬಿದ್ದು, ದಮ್ಮಯ್ಯಗುಡ್ಡೆ ಹಾಕಿ ಇವರ ಕೈಗೆ ಪೆನ್ನು ಹಿಡಿಸಿದ ಒಂದೇ ಕಾರಣಕ್ಕೆ ಇವರ ಏಕೈಕ ಕೃತಿ ರಂಗ ಕೈರಳಿ ಹೊರಬಂದಿತು. ಅದು ಅವರಿಗೆ ಹೆಸರು ತಂದುಕೊಟ್ಟಂತೆ ಕೇರಳದ ರಂಗಭೂಮಿಯನ್ನೂ ಕರ್ನಾಟಕದಲ್ಲಿ ಇನ್ನಿಲ್ಲದಂತೆ ಪ್ರಚುರಪಡಿಸಿತು.

ಈ ಕೃತಿಯ ನಿರೂಪಣಾ ಶೈಲಿ, ಅನುಭವ ಎಲ್ಲವೂ ಕನ್ನಡದ ಓದುಗರ ಕುತೂಹಲ ಕೆರಳಿಸಿದೆ. ಇವರ ಈ ಕೃತಿ ಪ್ರಕಟಿಸಲು ಕೈ ಹಚ್ಚಿದ ಕಾರಣಕ್ಕೆ ನಾನು ಅವರ ಜೊತೆಯಾಗಿ ಕೇರಳದ ಅಂತಾರಾಷ್ಟ್ರೀಯ ರಂಗ ಉತ್ಸವಕ್ಕೂ ಹೋಗಿ ಬಂದೆ. ಅಲ್ಲಿ ನಾವಿಬ್ಬರೂ ನೋಡಿದ, ನನಗೆ ನೋಡಲು ಕೊಡದೆ ತಾವೊಬ್ಬರೇ ಕೂತು ನೋಡಿದ ನಾಟಕಗಳ ಸರಣಿಯೇ ಈ ಬರಹ ಗುಚ್ಛ.

ಕೇರಳದ ಬೀದಿಗಳಲ್ಲಿ ಸುತ್ತುತ್ತಾ, ಅಲ್ಲಿನ ಗೊತ್ತಿಲ್ಲದ ಭಾಷೆಗೆ ಕಣ್ಣು ಬಿಡುತ್ತಾ, ಭಾಷೆ ಗೊತ್ತಿಲ್ಲದಿದ್ದರೂ ನಾಟಕದ ಒಳಮಿಡಿತಗಳನ್ನು ಅರ್ಥ ಮಾಡಿಕೊಂಡ, ಅಲ್ಲಿನ ರಂಗ ಉತ್ಸಾಹದ ಜೊತೆಗೆ ಸೇರಿ ಹೋದ ಎಲ್ಲದರ ನೋಟ ಇಲ್ಲಿದೆ.

ಕಿರಣ ಭಟ್ ತಮ್ಮ ಇಂದಿನ ಶೈಲಿಯಲ್ಲಿ ಬರೆದಿದ್ದಾರೆ. ಓದಿ

-ಜಿ ಎನ್ ಮೋಹನ್

ರಂಗ ಕೈರಳಿ‘ ಕೃತಿಯನ್ನು ಕೊಳ್ಳಲು –https://bit.ly/3zioQ5f ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

6

Production: Theatre des Bouffes du Nord, France

Director: Peter Brook and Marie-Helene Estienne

ಪೀಟರ್ ಬ್ರೂಕ್ ನ Tempest ನಾಟ್ಕ ಇಡಿಯ ನಾಟಕೋತ್ಸವದ ಹೈಲೈಟ್ ಅಂತ ಜೋರು ಪ್ರಚಾರದಲ್ಲಿತ್ತು. ಜನ ಅದನ್ನೇ ನೋಡೋಕೆ ಕಾಯ್ತಿದ್ರು. ಮೊದಲೇ ‘ಮಹಾಭಾರತ’ ನಾಟ್ಕದ ಮೂಲಕ ಭಾರತದಲ್ಲಿ ಹೆಸರು ಮಾಡಿದವ್ರು ಅವರು. ಬಹಳ ಚರ್ಚಿತರಾದವರೂ ಕೂಡ. ಹಾಗಾಗಿಯೇ ಈ ನಾಟ್ಕದ  ಬಗ್ಗೆ ತುಂಬ ಕುತೂಹಲವೂ ಇತ್ತು.

ಆದಕೇ ಉದ್ದದ ಕ್ಯೂ ಕೂಡ ಇತ್ತು. ಗಂಟೆಗಟ್ಲೇ ಕ್ಯೂ ನಿಂತು ಬೋರ್ ಆಗದ ಹಾಗೆ ಗೋಡೆಯ ಮೇಲೆ ಒಂದೆರಡು ಚಿತ್ರಪ್ರದರ್ಶನಗಳಿದ್ವು.

ಒಂದು ‘ಅರ್ಬನ್ ಸ್ಕೆಚ್ಚರ್ಸ್’ ಅನ್ನೋ ತಂಡದ್ದು. ಜಗತ್ತಿನಾದ್ಯಂತ ಹಬ್ಬಿಕೊಂಡಿರೋ ಈ ತಂಡ ತಾವು ಪ್ರಯಾಣ ಮಾಡಿದ ಸ್ಥಳಗಳ ಮೇಲಿನ ಪ್ರೀತಿಯಿಂದ ಆಯಾ ಸ್ಥಳಗಳ ಚಿತ್ರಗಳನ್ನ ಬಿಡಿಸಿ ಪ್ರದರ್ಶನ ಮಾಡ್ತದೆ. ಸದ್ಯ ತ್ರಿಷೂರಿನಲ್ಲೂ ಶುರುವಾಗಿರಯವ ‘ಸ್ಕೆಚ್ಚರ್ಸ್’ ನ ವಿಭಾಗ ಆಕ್ಟರ್ ಮುರಳಿ ಥಿಯೇಟರ್ ನ ಹೊರಗಡೆ ಇಂತ ಪ್ರದರ್ಶನ ಇಟ್ಟಿತ್ತು. ಕಾಗದದ ಮೇಲೆ ಜಲವರ್ಣದಿಂದ ರಚಿತವಾದ  ನಾಟಕೋತ್ಸವದ ಕ್ಯಾಂಪಸ್ ನ ಚಂದ ಚಂದ ಚಿತ್ರಗಳು ಪ್ರದರ್ಶನದಲ್ಲಿ ಇದ್ವು.

ಇನ್ನೊಂದು ಗುರುವಾಯೂರಿನ ‘ಮ್ಯೂರಲ್ ಅಕಾಡಮಿ’ ಯವರು ರಚಿಸಿದ ಗೋಡೆ ಮೇಲಿನ ತೈಲ ಚಿತ್ರಗಳ ಪ್ರದರ್ಶನ ‘ಬ್ಲಾಕ್ ಬಾಕ್ಸ್’ ಎನ್ನೋ ಸಣ್ಣ ಥಿಯೇಟರ್ ನ ಗೋಡೆಯ ಮೇಲೆ ತೈಲ ವರ್ಣಗಳಿಂದ ರಚಿತವಾದ ಚಿತ್ರಗಳಿವು. ಅಕಾಡಮಿಯ ವಿದ್ಯಾರ್ಥಿಗಳು ಇದರ ಕಲಾವಿದರು. ‘ಆಶ್ಚರ್ಯ ಚೂಡಾಮಣಿ’ಯ ಕಥೆಯನ್ನು ಆಧಾರವಾಗಿಟ್ಟುಕೊಂಡು ದೊಡ್ಡ ಗೋಡೆಯ ಮೇಲೆ ಹಲವಾರು ಚಿತ್ರಗಳನ್ನ ಬರೆದಿದ್ರು.

ಇವೆಲ್ಲ ನೋಡಿಕೊಂಡು ಒಳಗೆ ಹೋದ್ರೆ ಕಿಕ್ಕಿರಿದು ತುಂಬಿದ ಆಡಿಟೋರಿಯಂ. ಹಾಗಂತ ಇದು ಅದೇ ನಾಟ್ಕದ ಎರಡನೇ ಪ್ರದರ್ಶನ. (ಮುಖ್ಯ ನಾಟ್ಕಗಳೆಲ್ಲ ಎರಡೋ ಮೂರೋ ಪ್ರದರ್ಶನ ಕಾಣೋದು ಇಲ್ಲಿ ಮಾಮೂಲು.) ಸುಮಾರು ಎರಡು ಸಾವಿರ ಜನ ಅಲ್ಲಿದ್ರು.

ಖಿಜಟಠಿಜಣ ಅಂತೂ ನಮಗೆಲ್ಲ ಗೊತ್ತಿರೋ ಕಥೆಯೇ. ಸಮುದ್ರ ಮಧ್ಯದ ದ್ವೀಪ, ಪ್ರಾಸ್ಪೆರೋ, ಏರಿಯಲ್, ಕ್ಯಾಲಿಬಾನ್, ಅವರ ಮ್ಯಾಜಿಕ್. ಮ್ಯಾಜಿಕ್ ನಿಂದ ಸೃಷ್ಟಿಯಾಗೋ ಸುಂಟರಗಾಳಿ, ದ್ವೀಪಕ್ಕೆ ಬರೋ ನಾವೆ, ಮಿರಾಂಡಾ, ಫರ್ಡಿನಾಂಡ್, ಅವರ ಪ್ರೇಮ.. ಮದುವೆ. ಹೀಗೆ.

Peter Brook .

ಮತ್ತು Marie-Helene Estienne. (ಹಿಂದೆ ಮಹಾಬಾರತದಲ್ಲೂ ಒಟ್ಟಿಗೆ ಕೆಲಸ ಮಾಡಿದವರು) ವಿಮೋಚನೆ ಯನ್ನೇ ಎಳೆಯಾಗಿಟ್ಕೊಂಡು ನಾಟ್ಕ ಕಟ್ಟಿದಾರೆ. ಏರಿಯಲ್, ಕ್ಯಾಲಿಬನ್ ಗೂ ದಾಸ್ಯದಿಂದ ವಿಮೋಚನೆ ಬೇಕಿದೆ. ಪ್ರಾಸ್ಪೆರೋ ಗೂ ಕೂಡ. ತಮ್ಮನೊಂದಿಗೆ ಪ್ರತೀಕಾರ ತೀರಿಸ್ಕೊಳ್ಳೋದಕ್ಕೆ ಮ್ಯಾಜಿಕ್ ನನಿಂದ ಬಿರುಗಾಳಿಯನ್ನ ಆತ ಎಬ್ಬಿಸ್ತಾನೇನೋ ನಿಜ. ಆದ್ರೆ ಮುಂದೆ ಹೋದಂತೆಲ್ಲ ಘಟನೆಗಳು ಉಲ್ಟಾ ಹೋಡೀತವೆ. ಇಬ್ಬರು ಕುಡುಕರು ಮತ್ತು ಜೀತಗಾರ ಏನೆಲ್ಲ ಮಾಡಿಬಿಡ್ತಾರೆ. ಮಗಳು ಮಿರಾಂಡಾ ಆತನನ್ನು ಬಿಟ್ಟು ಅಳಿಯ ಫರ್ಡಿನಾಂಡ್ ನನ್ನ ಮದುವೆಯಾಗ್ತಾಳೆ. ಪ್ರಾಸ್ಪೆರೋ ತನ್ನ ವಿಮೋಚನೆಯ ಹಾದಿಗಳನ್ನ ಹುಡುಕ್ತಾನೆ. ಮ್ಯಾಜಿಕ್ ಬಿಡ್ತಾನೆ, ವೈರತ್ವ ತ್ಯಜಿಸ್ತಾನೆ..ಹೀಗೆ.

ನಮ್ಮಲ್ಲಿ ‘ಧಾಂ ಧೂಂ ಸುಂಟರಗಾಳಿ’ಯಾಗುವ Tempest ನಾಟ್ಕದ ನಿರೂಪಣೆಯೇ ಇಲ್ಲಿ ತುಂಬ ವಿಭಿನ್ನ. ಮೂಲತ: ಇದು ಫ್ರೆಂಚ್ ನಾಟ್ಕ. ತುಂಬ ಕೂಲ್. ಸರಳ. ನಿಧಾನ. ಇದಕ್ಕೆ ಕಾರಣಗಳನ್ನೂ ಬ್ರೂಕ್ ಹೇಳ್ತಾರೆ. ದೇವರು, ಮಂತ್ರ್ರ, ಮಾಟ, ಜಕ್ಕಿಣಿ ಯಂಥ ಪಾತ್ರಗಳಿಗೆ ಇಂಗ್ಲೀಷ್ ನಟರು ಒಗ್ಗಿಕೊಳ್ಳೋದು ಕಷ್ಟ. ಜಾನಪದ ಜಾತ್ರೆಗಳು, ಆಚರಣೆಗಳ ನಡುವೆ ಬೆಳೇದ ನಮಗೆ ಇದು ತುಂಬ ಸಹಜವಾಗುವಷ್ಟು ಅವರಿಗೆ ಆಗೋದಿಲ್ಲ. ಹಾಗಾಗಿಯೇ ಈ ಪ್ರಾಜೆಕ್ಟ್ ನಲ್ಲಿ ಅವರು ಇನ್ನೊಂದು ದಾರಿ ಹುಡುಕಿದ್ದಾರೆ. ಜಗತ್ತಿನ ಬೇರೆ ಬೇರೆ ದೇಶಗಳ ನಟ ನಟಿಯರನ್ನಿಟ್ಕೊಂಡು ಪ್ರಯತ್ನ ಮಾಡಿದ್ದಾರೆ. ಹಾಗೆಯೇ ತಮಗೆ ಬೇಕಾದಂಥ ಪರಿಣಮವನ್ನೂ ಪಡೆದಿದ್ದಾರೆ. ತುಂಬ ಸರಳವಾದ ರಂಗಸಜ್ಜಿಕೆ, ಸಂಗೀತ, ಅಭಿನಯ, ಕಾಸ್ಟ್ಯೂಮ್ ಗಳು. ಒಟ್ಟಾರೆ Tempestನ ಹೊಸ ಅನುಭವ.

‍ಲೇಖಕರು avadhi

April 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಾಮನಗರದತ್ತ.. ಕಾವ್ಯ ಯಾನ

ರಾಮನಗರದತ್ತ.. ಕಾವ್ಯ ಯಾನ

ಕಾವ್ಯ ಸಂಸ್ಕೃತಿ ಯಾನಜನರೆಡೆಗೆ ಕಾವ್ಯ ಮೂರನೇ ಕಾವ್ಯ ಯಾನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಲಬುರಗಿಯ ನನ್ನೆಲ್ಲ ಗೆಳೆಯರಿಗೆ ಧನ್ಯವಾದಗಳು...

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

-ಎಸ್. ಕೆ ಉಮೇಶ್ ** ಪೊರಕೆಯ ಹಾಡು ನಾಟಕ ಮೂರು ದಿನದಲ್ಲಿ ಉತ್ತರ ಕರ್ನಾಟಕದಲ್ಲಿ ನಾಲ್ಕು ಪ್ರದರ್ಶನಗಳು ಕಂಡಿವೆ. ನಾಲ್ಕನೇ ಪ್ರದರ್ಶನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This