ಕವಿಯ ವಿರುದ್ಧದ ದೂರು ಖಂಡನೀಯ..

ಜನವರಿ 9 ರಂದು ಆನೆಗುಂದಿ ಉತ್ಸವದ ಕವಿಗೋಷ್ಠಿಯಲ್ಲಿ ಕೊಪ್ಪಳದ ಸಿರಾಜ್ ಬಿಸರಳ್ಳಿ ಅವರು `ನಿನ್ನ ದಾಖಲೆ ಯಾವಾಗ ನೀಡುತ್ತೀ? ಎನ್ನುವ ಪದ್ಯ ಓದಿದ್ದಾರೆ.

ಈ ದೇಶದ ಸಂವಿಧಾನದ ಕಲಂ 14 ರ ಸಮಾನತೆಯ ಆಶಯಕ್ಕೆ ವಿರುದ್ಧವಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶವಾಸಿಯಾಗಿ ತನ್ನ ವಿರೋಧವನ್ನು ಅಭಿವ್ಯಕ್ತಿಸಿದ್ದಾರೆ. ಇದನ್ನು ವಿರೋಧಿಸಿ ಬಿಜೆಪಿಯ ಕೊಪ್ಪಳ ನಗರ ಘಟಕವು ಜನವರಿ 15 ರಂದು ಕೊಪ್ಪಳದ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಕೇಂದ್ರ ಸರಕಾರದ ಯೋಜನೆ, ಪ್ರಧಾನಮಂತ್ರಿ, ಸ್ವಾತಂತ್ರ್ಯ ಹೋರಾಟಗಾರರಿಗೆ, ಹಿಂಧೂ ಧರ್ಮಕ್ಕೆ ಅವಮಾನಿಸಿದ್ದಾಗಿ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

ಈ ದೂರಿನನ್ವಯ ಜಿಲ್ಲಾಧಿಕಾರಿಗಳು ಕಾರಣ ಕೇಳಿ ಕವಿಗೆ ನೋಟಿಸ್ ಜಾರಿ ಮಾಡಿರುತ್ತಾರೆ. ಕವಿಯು ಈ ನೋಟಿಸಿಗೆ ತನ್ನ ಪ್ರತಿಕ್ರಿಯೆ ನೀಡುವ ಮೊದಲೆ ಜನವರಿ 24 ರ ರಾತ್ರಿ ಗಂಗಾವತಿ ಪೋಲಿಸ್ ಸ್ಟೇಷನ್ನಿನಲ್ಲಿ ಎಫ್.ಐ.ಆರ್ ಕೂಡ ದಾಖಲಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಹಾಗಾಗಿ ನಾವುಗಳು ಖಂಡಿಸುತ್ತೇವೆ.

ಕಾವ್ಯ ಎಲ್ಲಾ ಕಾಲಕ್ಕೂ ಎದೆಯ ದನಿಯಾಗಿ ಮಾತನಾಡಿದೆ. ಯಾವುದೇ ಕವಿ ಅಥವಾ ಕವಯಿತ್ರಿ ತನ್ನ ಕಾಲದ ಒಳಗಿನ ಬಿಕ್ಕಟ್ಟುಗಳಿಂದಲೇ ಮೈಪಡೆಯುತ್ತಾರೆ. ಹೀಗೆ ಜಗತ್ತಿನ ಎಲ್ಲಾ ಬಿಕ್ಕಟ್ಟುಗಳ ಕಾಲದಲ್ಲಿಯೂ ಅಲ್ಲಿಯದೇ ಕವಿಗಳು ತಮ್ಮದೇ ನುಡಿಗಟ್ಟುಗಳಲ್ಲಿ ಕಾವ್ಯ ಕಟ್ಟಿದ್ದಾರೆ. ಇದೀಗ ಸಿಎಎ/ಎನ್.ಆರ್.ಸಿ ವಿರುದ್ಧವೂ ದೇಶವ್ಯಾಪಿ ಕಾವ್ಯ ಹುಟ್ಟಿದೆ. ಈ ನೆಲೆಯಲ್ಲಿ ಸಿರಾಜ್ ಅವರ ಕವಿತೆ ಈ ಕಾಲದ ಬಿಕ್ಕಟ್ಟುಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಪ್ರಶ್ನಿಸಿದ್ದಾರೆ. ಅಲ್ಲಿ ಯಾವುದೇ ಪಕ್ಷ, ನಿರ್ದಿಷ್ಠ ವ್ಯಕ್ತಿ ಎನ್ನುವುದಕ್ಕಿಂತ ಇದು ಸಾಂಕೇತಿಕವಾಗಿದೆ.

ಪ್ರಜಾಪ್ರಭುತ್ವದ ಸರಕಾರದಲ್ಲಿ ಕವಿಯೊಬ್ಬ ತನ್ನ ಆಳುವ ಸರಕಾರದ ನೀತಿಗಳನ್ನೂ, ಆಳುವ ಪ್ರಭುವನ್ನು ಪ್ರಶ್ನಿಸುವುದು ಸಂವಿಧಾನಿಕ ಹಕ್ಕು. ಅಂತೆಯೇ ಪ್ರಜಾಪ್ರಭುತ್ವದ ಸೌಂದರ್ಯ. ಹಾಗಾಗಿ ಸಿರಾಜ್ ಅವರ ಕವಿತೆ ದೇಶದ ನಾಗರೀಕರು ಕೇಳುವ ಪ್ರಶ್ನೆಯನ್ನು ಪ್ರಾತಿನಿಧಿಕವಾಗಿ ಕೇಳಿದ್ದಾರೆ. ಇದೊಂದು ಸಮೂಹದ ಪ್ರಶ್ನೆ. ಈ ಕೇಸ್ ದಾಖಲಿಸುವುದಾದರೆ ಈ ದೇಶದ ಶೇ 99% ಪ್ರಜಾಪ್ರಭುತ್ವವಾದಿಗಳ ವಿರುದ್ಧ ದಾಖಲಿಸಿಕೊಳ್ಳಬೇಕಿದೆ.

ಕವಿತೆಯನ್ನು ವಾಚ್ಯವಾಗಿ ಅರ್ಥಮಾಡಿಕೊಂಡು ದೂರು ಕಾಖಲಿಸಿದ ಕ್ರಮವನ್ನು ನಾವು ಖಂಡಿಸುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರದ ವಿರುದ್ಧದ ದುರುದ್ದೇಶಪೂರಿತ ದೂರನ್ನು ಕೈಬಿಡಬೇಕೆಂದು ವಿನಂತಿಸುತ್ತೇವೆ.

-ವಿಜಯಮ್ಮ ಸುಕನ್ಯಾ ಮಾರುತಿ ವಸುಂಧರಾ ಭೂಪತಿ ಎಲ್.ಸಿ.ಸುಮಿತ್ರ ಕೆ.ಶರೀಫಾ ಎಮ್.ಎಸ್.ಆಶಾದೇವಿ ಕೆ.ನೀಲಾ ಮೀನಾಕ್ಷಿ ಬಾಳಿ ಪಿ.ಭಾರತೀದೇವಿ ಎಸ್.ಜಿ.ಸಿದ್ಧರಾಮಯ್ಯ ದಿನೇಶ್ ಅಮಿನಮಟ್ಟು ಎನ್.ಎಸ್.ಶಂಕರ ಪುರುಷೋತ್ತಮ ಬಿಳಿಮಲೆ ಪಿಚ್ಚಳ್ಳಿ ಶ್ರೀನಿವಾಸ ಬಸವರಾಜು ಅನಂತ ನಾಯಕ ಬಿ.ಶ್ರೀನಿವಾಸ ಹಸನ್ ನಯೀಂ ಸುರಕೋಡ ಬಿ.ಪೀರಬಾಷ ಎ.ಎಸ್.ಪ್ರಭಾಕರ ಶಶಿ ಸಂಪಳ್ಳಿ ಎಂ.ಡಿ.ಒಕ್ಕುಂದ ಪ್ರಭು ಖಾನಾಪುರೆ ಆರ್.ಕೆ.ಹುಡುಗಿ ವಡ್ಡಗೆರೆ ನಾಗರಾಜಯ್ಯ ಬಿ.ಶ್ರೀಪಾದ ಭಟ್ ಆರಿಫ್ ರಾಜಾ ರಝಾಕ್ ಉಸ್ತಾದ್ ಅಕ್ಷತಾ ಹುಂಚದಕಟ್ಟೆ ಅರುಣ್ ಜೋಳದಕೂಡ್ಲಿಗಿ ಸಹಯಾನ, ಕೆರೆಕೋಣ., ಎನ್.ರವಿಕುಮಾರ್ ಟೆಲೆಕ್ಸ್

ಹೆಚ್ಚಿನ ಓದಿಗೆ- ಆನೆಗೊಂದಿ ಉತ್ಸವಕ್ಕೆ ಕವಿತೆಯ ಶಾಕ್

‍ಲೇಖಕರು avadhi

January 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ramesh patil

    ಅಭಿವ್ಯಕ್ತಿ ಸ್ವಾತಂತ್ಯದ ಮುಖವಾಡ ಹೊತ್ತ ಬೈಗುಳಗಳಿಗೆ ಕವಿತೆ ಎನ್ನಲಾಗುತ್ತಿದೆ.
    ರಮೇಶ ಪಾಟೀಲ ಕಲಬುರಗಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: