ಕವಿಯ ತೋಟಕ್ಕೆ ಬೆಂಕಿ…

ಉಗಮ ಶ್ರೀನಿವಾಸ್

ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ.

ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್ ತಡವುವಂತಾಗಬೇಕು ಎಂಬುದು ನಮ್ಮ ಆಶಯ.

ಇಲ್ಲಿನ ಬರಹ ನಮ್ಮ ತಾಣದ ಅಧಿಕೃತ ನಿಲುವಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ನೋಟವನ್ನು ರೂಪಿಸಲು ಇಲ್ಲಿ ಚರ್ಚೆಗೆ ತೆರೆದಿಡಲಾಗಿದೆ.

ನಾನೊಬ್ಬ ‘ಕಾಡಂಚಿನ ರೈತ’ ನೆಂದು ಪರಿಚಯಿಸಿಕೊಳ್ಳುವ ನಮ್ಮೆಲ್ಲರ ಪ್ರೀತಿಯ ಮೇಸ್ಟ್ರು ‘ಸಿದ್ಧಗಂಗಯ್ಯ ಹೊಲತಾಳು’ ಅವರ ‘ಕುರಂಕೋಟೆ’ ಬುಡದಲ್ಲಿರುವ ‘ಹೊಲತಾಳು’ ಎಂಬ ಗ್ರಾಮದಲ್ಲಿರುವ ತೋಟಕ್ಕೆ ಹೋಗುವುದೆಂದರೆ ಎಂಥದ್ದೂ ಖುಷಿ. ತಮ್ಮ 5 ಎಕರೆ ಜಾಗದಲ್ಲಿ ಮಾವು, ಬಾಳೆ, ತೆಂಗು, ಶ್ರೀಗಂಧ ಹೀಗೆ ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಇವರ ತೋಟದ ಸನಿಹದಲ್ಲೇ ಇರುವ ‘ತಲಪರಿಕೆ’ಗಳು.‌ ತೋಟದ ಹಿಂಬದಿಯಲ್ಲಿ ಕಣ್ಣು ಹಾಯಿಸಿದ್ದಷ್ಟು ಎತ್ತರಕ್ಕೆ ನಿಂತಿರುವ ಬೆಟ್ಟಗಳು. ಸ್ವತಃ ಮೇಷ್ಟ್ರೇ ತಮ್ಮ ಅಧ್ಯಾಪಕ ವೃತ್ತಿಯಿಂದ ನಿವೃತ್ತಿ ಬಳಿಕ ತೋಟವನ್ನು ಅಸ್ಥೆಯಿಂದ ಜೋಪಾನ ಮಾಡಿದ್ದರು.‌ ನನ್ನ ಅನೇಕ ಸ್ನೇಹಿತರನ್ನು ಇವರ ತೋಟಕ್ಕೆ ಕರೆದುಕೊಂಡು ಹೋಗಿದ್ದೇನೆ.

ನಾನು ಕೂಡ ಇವರ ತೋಟಕ್ಕೆ ಹಲವಾರು ಬಾರಿ ಹೋಗಿದ್ದೇನೆ. ತೋಟದಲ್ಲೇ ವಿಚಾರ ಸಂಕಿರಣ ಸೇರಿದಂತೆ ನಾಟಕ, ಸಂಗೀತಕ್ಕಾಗಿ ಪುಟ್ಟ ಕಟ್ಟಡವನ್ನು ನಿರ್ಮಿಸಿದ್ದಾರೆ. ಇಲ್ಲೇ ಇರುವ ‘ಪ್ರೊಫೆಸರ್ ಅಡ್ಡ’ದಲ್ಲಿ ಕುಳಿತು ಅವರ ತರೆಸಿಕೊಟ್ಟ ಹಳ್ಳಿ ಊಟವನ್ನು ಸವೆದಿದ್ದೇವೆ. ಇವರ ತೋಟದಲ್ಲಿ‌ ಇಡೀ ರಾತ್ರಿ ‘ಮೈಲಾರಲಿಂಗನ ಪದ’ವನ್ನು ಓದಿದ್ದೇವೆ. ನಾನೇ ಬಿತ್ತಿದ್ದ ಬಿತ್ತನೆ ಬೀಜಗಳು ಗಿಡವಾಗಿದ್ದವು. ತಮ್ಮ ತೋಟವನ್ನೇ ಕೇಂದ್ರವಾಗಿಟ್ಟುಕೊಂಡು ‘ಸುವರ್ಣಮುಖಿ’ ಸೇರಿದಂತೆ ಮೂರು ಕೃತಿಗಳನ್ನು ರಚಿಸಿದ್ದಾರೆ.

ಒಂದು ಕಡೆ ‘ಸಿದ್ದರಬೆಟ್ಟ, ಇನ್ನೊಂದು ಕಡೆ ‘ದೊಡ್ಡಕಾಯಪ್ಪ’ ದೇವಸ್ಥಾನ ಅದರ ಸಮೀಪವೆ ಇವರ ತೋಟ. ಯಾರೋ ಬೆಟ್ಟಕ್ಕೆ ಬೆಂಕಿ ಹಾಕಿದ್ದಾರೆ. ಬೆಂಕಿಯ ಜ್ವಾಲೆ ವ್ಯಾಪಿಸಿ ಇವರ ತೋಟವನ್ನು ಆಹುತಿ ತೆಗೆದುಕೊಂಡಿದೆ. ತೆಂಗು, ಮಾವು, ಶ್ರೀಗಂಧ, ನಿಂಬೆ ಸೇರಿ 300 ಕ್ಕೂ ಹೆಚ್ಚು ಮರಗಳು ಕರಕಲಾಗಿದೆ. ಸ್ವತಃ ‘ಸಿದ್ಧಗಂಗಯ್ಯ ಹೊಲತಾಳು’ ಅವರಂತೂ ಬೆಟ್ಟಕ್ಕೆ ಬೆಂಕಿ ಹಾಕಿದರೆ ಏನೆಲ್ಲ‌ ತೊಂದರೆಯಾಗುತ್ತದೆ ಎಂದು ಕರಪತ್ರ ಹಂಚಿ ಜಾಗೃತಿ ಮೂಡಿಸುತ್ತಿದ್ದರು. ಆದರೆ ಯಾರದ್ದೋ ಬೇಜವಾಬ್ದಾರಿಯಿಂದ ಇವರ ತೋಟ ನಾಶವಾಗಿದೆ.

‍ಲೇಖಕರು avadhi

March 2, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: