**
ಕವಿ ದರ್ಶನ್ ಜಯಣ್ಣ ಅವರ ಹೊಸ ಕವನ ಸಂಕಲನ ‘ನಾನೊಬ್ಬ ನಾವಿಕ’ ಇದೇ ಭಾನುವಾರ ಬಿಡುಗಡೆಯಾಗುತ್ತಿದೆ.
ಈ ಕೃತಿಯ ಕುರಿತು ಕವಿ ಬರೆದ ಮಾತುಗಳು ಇಲ್ಲಿವೆ.
**
ಕವಿತೆ ಚಿಟ್ಟೆಯ ಹಾಗೆ. ಅದನ್ನು ಹಿಡಿವ ಮುನ್ನ ಕೊಂಚ ಸಪ್ಪಳ ಮಾಡಿದರೆ ಅದು ತಪ್ಪಿಸಿ ಹಾರಿ ಹೋಗುತ್ತದೆ. ಹಿಡಿದಾಗ ಕೈ ಬಿಗಿಯಾದರೆ ಚಿಟ್ಟೆ ನಲುಗಿ ಸಾಯುತ್ತದೆ. ಆದ್ದರಿಂದಲೇ ನಾಜೂಕಾಗಿ ಅದನ್ನು ಹಿಡಿಯುವುದು ಒಂದು ಕಲೆ. ಆಗ ಮಾತ್ರ ಚಿಟ್ಟೆಯ ನುಣುಪಾದ ಸ್ಪರ್ಶದಾನಂದ ನಮಗೆ ದೊರಕುವುದು. ಆ ಕ್ಷಣಭಂಗುರತೆಯನ್ನು ಅನುಭವಿಸಿ ಚಿಟ್ಟೆಯನ್ನು ಹಾರಲು ಬಿಟ್ಟುಬಿಡಬೇಕು. ಚಿಟ್ಟೆ ಎಂದಿನಂತೆ ಗರಿಬಿಚ್ಚಿ ಹಾರಬೇಕು. ನಾನು ಇಲ್ಲಿ ಮಾಡಿರುವ ಪ್ರಯತ್ನವೂ ಅದೇ ಆದರಲ್ಲಿ ನಾನೆಷ್ಟು ಯಶಸ್ವಿಯಾಗಿರುವೆ ಎಂದು ಹೇಳಲಾರೆ. ಆದರೆ ಒಂದಂತೂ ನಿಜ, ಚಿಟ್ಟೆಯ ನವಿರಾದ ರೆಕ್ಕೆಗಳ ಒಂದಷ್ಟು ಬಣ್ಣ ನನ್ನ ಬೆರಳುಗಳನ್ನು ಮೆತ್ತಿದೆ. ಅದನ್ನು ನಿಮಗೆ ದಾಟಿಸುವ ಪ್ರಾಮಾಣಿಕ ಪ್ರಯತ್ನವಷ್ಟೇ ನನ್ನದು.
**
0 ಪ್ರತಿಕ್ರಿಯೆಗಳು