ಡಾ ಸರಜೂ ಕಾಟ್ಕರ್
ವಿದ್ಯಾಗುರುಗಳಾದ ಡಾ ಎಂ ಎಂ ಕಲಬುರ್ಗಿ ಅವರು ಭೌತಿಕವಾಗಿ ನಮ್ಮಿಂದ ಅಗಲಿ ಏಳು ವರ್ಷಗಳಾದವು. ಏಳು ವರ್ಷಗಳ ಹಿಂದೆ ಅವರು ಹಂತಕನ ಗುಂಡಿಗೆ ಬಲಿಯಾಗಿದ್ದರು.
ಅವರಿಗೆ ಗೌರವ ಸಲ್ಲಿಸಲು ಬೆಳಗಾವಿಯಿಂದ ನಾನು, ಲೇಖಕ ಮಿತ್ರರಾದ ಡಾ ರಾಮಕೃಷ್ಣ ಮರಾಠೆ ಹಾಗೂ ಡಾ ಎ ಬಿ ಘಾಟಗೆ (ಇವರೂ ಗುರುಗಳ ಶಿಷ್ಯಂದಿರು), ಹಾವೇರಿಯಿಂದ ಕವಿ ಸತೀಶ್ ಕುಲಕರ್ಣಿ (ಈತ ಗುರುಗಳ ಮಾನಸ ಶಿಷ್ಯ), ಬೆಳಗಾವಿಯ ಡಾ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಅಧ್ಯಕ್ಷ ಹಾಗೂ ಸುಪ್ರಸಿದ್ಧ ಕಾದಂಬರಿಕಾರ ಡಾ ರಾಘವೇಂದ್ರ ಪಾಟೀಲ ಹಾಗೂ ಬೆಳಗಾವಿಯ ಬಸವರಾಜ ಕಟ್ಟೀಮನಿ ಟ್ರಸ್ಟ್ ಅಧ್ಯಕ್ಷ ಹಾಗೂ ಪ್ರಸಿದ್ಧ ಕಥೆಗಾರ ಹಾಗೂ ಕಾದಂಬರಿಕಾರ ಡಾ ಮಲ್ಲಿಕಾರ್ಜುನ ಹಿರೇಮಠ ಅವರುಗಳು ಧಾರವಾಡದಲ್ಲಿರುವ ಕಲಬುರ್ಗಿ ಸರ್ ಮನೆಗೆ ಹೋಗಿದ್ದೆವು.
ಉಮಕ್ಕ ಸ್ವಲ್ಪ ದಣಿದವರಂತೆ ಕಂಡರು.ಇತ್ತೀಚಿಗೆ ಅವರು ಕೋರ್ಟಿನಲ್ಲಿ ಗುರುಗಳ ಹಂತಕರನ್ನು ಗುರುತಿಸಿದ್ದರ ಬಗ್ಗೆ ವಿವರಿಸಿದರು.
ಹಂತಕರಿಗೆ ಯಾವಾಗ ಶಿಕ್ಷೆಯಾಗುತ್ತದೆಯೋ ಆ ನ್ಯಾಯ ದೇವತೆಗೇ ಗೊತ್ತು.
ಗುರುಗಳಿಲ್ಲದೆ ಕನ್ನಡದ ವೈಚಾರಿಕ ಕ್ಷೇತ್ರ ದಲ್ಲಿ ಒಂದು ರೀತಿಯ ಪೊಳ್ಳು ನಿರ್ಮಾಣವಾದಂತಾಗಿದೆ.
0 ಪ್ರತಿಕ್ರಿಯೆಗಳು