ಕರಾವಳಿಗೆ ಮತ್ತೆ ಗಾಂಧಿ ಬಂದ..

ಚೀ ಜ ರಾಜೀವ

ಪ್ರಿಯ ಗಾಂಧಿ
ನಿನ್ನ ಮಗನಂತಿದ್ದ ದೇಸಾಯಿ

ಕಾರಾಗೃಹದಲ್ಲಿ ಸತ್ತಾಗ ಅಂದು

ಶವದ ಮೆರವಣಿಗೆಗೆ ನಿನ್ನವರು
ಹಾತೊರೆದರು

ಮಗನ ಅಂತಿಮ ಯಾತ್ರೆ

ಮಾಡಿದರೆ ತಪ್ಪೇನು ?

ಜನರಿಗೆ ಓಗೊಟ್ಟು ಒಪ್ಪಿದೆ ನೀನು

ಆದರೆ, ಸತ್ತ ಮಗ ಬರೀ ಮಗನಲ್ಲ

ಸ್ವಾತಂತ್ರ್ಯ ಹೋರಾಟಗಾರನೂ ಆಗಿದ್ದ

ನೆನಪಿಸಿತು ಬ್ರಿಟಿಷ್ ಸರಕಾರ

ಎಚ್ಚೆತ್ತು ನೀ ಹೇಳಿದೆ-

ಮಗನ ಶವ ಮುಂದಿಟ್ಟುಕೊಂಡು

ಸ್ವಾತಂತ್ರ್ಯದ ರಾಜಕೀಯ ಮಾಡಲಾರೆ !

ಪ್ರಿಯ ಗಾಂಧಿ

ನಿನ್ನ ಮೊಮ್ಮಗನಂಥ  ಕಬೀರ

ಕೋಮುವಾದದಲ್ಲಿ ಕರಗಿದಾಗ ಇಂದು

ಶವದ ಯಾತ್ರೆಗೆ ಮುಂದಾದರು ಮತ್ತದೆ  ಜನ

ಮಾಡಿದರೆ ತಪ್ಪೇನು

ನಡೆದರೆ  ಏನಾದೀತು ?

ಕಬೀರನ ಮನೆಯವರೂ ದ್ವಂದ್ವದಲ್ಲಿದ್ದರು

ಎಚ್ಚರಿಸಿತು ಸರಕಾರ-

ಕಬೀರ್ ಬರೀ ಕಬೀರ್ ಅಲ್ಲ

ನೆನಪಿಸಿತು ವಾತಾವರಣದ ಮತಾಂಧತೆಯ

ಎಚ್ಚೆತ್ತ ಕಬೀರನ ಕುಟುಂಬ ಘೋಷಿಸಿತು

ಶವ ಮುಂದಿಟ್ಟುಕೊಂಡು
ಕೋಮು ರಾಜಕೀಯ ಮಾಡಲಾರೆವು !

ಪ್ರಿಯ ಗಾಂಧಿ,

ಯಾರು ಹೇಳಿದರು ನೀ ಇಲ್ಲವೆಂದು?

ಕಬೀರನ ಮನೆಯವರ ಘೋಷಣೆಯಲ್ಲಿ ನೀನಿದ್ದೆ

ಮಗನ ಸಾವಿಗೆ ಪ್ರತೀಕಾರ ಸಲ್ಲದು
ಎಂಬ ಕುಟುಂಬ ಕಳಕಳಿಯಲ್ಲೂ ನೀನಿದ್ದೆ
ಹೆಣದೊಂದಿಗೆ ರಾಜಕೀಯ ಮಾಡಬಾರದು

ಎಂಬ ವಿವೇಕ ನಿನ್ನದೇ ಅಲ್ಲವೇ  ?

ಕಡೆಗೆ,

ಒಂದು ಕಣ್ಣಿಗೆ ಮತ್ತೊಂದು ಕಣ್ಣೇ

ಎಂಬ  ಪಶ್ಚಾತ್ತಾಪದ
ಸೊಲ್ಲಿನಲ್ಲೂ ನೀನೇ ಇದ್ದೆ !

ಅಂದು-ಇಂದು-ಎಂದೆಂದೂ

ನೀ ಇರುವೆ ಕಬೀರರ ನಡುವೆ

‍ಲೇಖಕರು avadhi

October 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Narasimha Murthy R

    ಭಾವಪೂಣ೯, ಅಥ೯ಪೂಣ೯ ಕವಿತೆ. ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: