ಅಪರ್ಣಾ ಹೆಗಡೆ ಇಟ್ಗುಳಿ
**
ತಾರೆಗಳ ತೋಟದಲಿ ನಗುವ ಚಂದಿರನಂದ
ತಾರೆ ತಾ ಬೆಳಗುವುದು ಹಗಲು ಜಗವ
ಕೆಂದಾವರೆಯ ಬಣ್ಣ ತಳೆದು ಇಳೆಗಿಳಿಯಲು
ಕನಸಿನಿರುಳು ಉಷೆಯ ಸೆರಗಿನಡಿ ಮರೆಯು
ನಕ್ಷತ್ರ ದಂಡೆಯನು ಕಟ್ಟಿ ನಿಶೆಯೂರಿನಲಿ
ಜಾರಿ ಉರುಳಿದ ಒಂದು ಮೊಗ್ಗಿನಂತೆ
ಉದಯದಲಿ ಅರಳಿ ಚೆಲುವ ಬೀರುತಲಿಹುದು
ಕಳೆವುದು ಪ್ರಭೆಯಿಂದ ಕತ್ತಲೆಯನು
ತಿಂಗಳಿನ ತೀರದಲಿ ತಂಗನಸ ಜೋಕಾಲಿ
ಕಟ್ಟಿ ಚಂದಿರ ತಾನು ತೂಗುತಿರಲು
ರಜನಿ ತೆಕ್ಕೆಯಲವಿತು ಕಿರಣದಂಬನು ಹೊದ್ದು
ಹಗಲು ತೂರುವ ತಾನು ಮೂಡಣದ ಬಿಲ್ಲಲಿ
0 ಪ್ರತಿಕ್ರಿಯೆಗಳು