ಕತೆಯೇ ಹೀರೋ ಆಗಿರುವ ‘ಹದಿನೇಳೆಂಟು’ ಸಿನೆಮಾ..

ಪೂರ್ಣಿಮಾ ಮಾಳಗಿಮನಿ

**

ಒಂದು ಸಿನಿಮಾವಾಗಲಿ, ಒಂದು ಪುಸ್ತಕವಾಗಲಿ, ಇತರ ಎಲ್ಲಾ ಜಾಹೀರಾತು, ಅಬ್ಬರದ ಪ್ರಚಾರಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗುವುದು word of mouth marketing ನಿಂದ ಎನ್ನುವುದನ್ನು ಈ ಸಿನಿಮಾ ಮತ್ತೆ ಸಾಬೀತು ಮಾಡಿದೆ. ನಮ್ಮ ಅನುಭೂತಿಗೆ ನಿಲುಕುವ ಕತೆಗಳ ಕುರಿತು ಮಾತನಾಡಲೇಬೇಕು, ಎಲ್ಲಾದರೂ ಶೇರ್ ಮಾಡಬೇಕು ಅನಿಸುವಂತೆ ಮಾಡುವ ವಿಶಿಷ್ಟ ನಿರೂಪಣೆ ಇಲ್ಲಿದೆ. ವೀಕ್ಷಕರಿಗೆ ಯಾವುದೇ ಒಂದು ಘನವಾದ ಮೆಸೇಜ್ ಕೊಡುವ ಉದ್ದೇಶದಿಂದ ಅಥವಾ preachy ಅನಿಸುವಂತೆ ಬರೆದ script ಗಿಂತ, ಇರುವ ವಿಚಾರಗಳನ್ನು ಪ್ರಾಮಾಣಿಕವಾಗಿ ತೋರಿಸುವ narrative ನನಗೆ ಹೆಚ್ಚು ಇಷ್ಟವಾಗುತ್ತದೆ. ಅದರಿಂದ take home ಏನಿದೆಯೋ ಅದನ್ನು ನಮ್ಮ ಇತಿಮಿತಿಯೊಳಗೆ ನಾವೇ ಗ್ರಹಿಸಲು ಬಿಡುವುದು ಹೆಚ್ಚು ಸೂಕ್ತ. ಈ ಎರಡೂ ದೃಷ್ಟಿಯಿಂದ ನೋಡಿದಾಗ ಕತೆಯೇ ಹೀರೋ ಆಗಿರುವ ‘ಹದಿನೇಳೆಂಟು’ ಸಿನಿಮಾ ಇಷ್ಟವಾಯ್ತು.

ಮೊದಲ ಕಾಲು ಭಾಗ ನೋಡಿದಾಗ, ಇದೂ ಒಂದು ಸೆಕ್ಸ್ ವಿಡಿಯೋ ಲೀಕ್ ಆಗುವ, ಅದರ ನಂತರದ ಮಾಮೂಲು ಕತೆಯೇನೋ ಅನಿಸಿತ್ತು. (ಈ ವಸ್ತು ಕುರಿತು ಬಹಳ ಹಿಂದೆ ಬಂದಿದ್ದ ‘ಮಸಾನ್’ ಎನ್ನುವ ಹಿಂದಿ ಸಿನಿಮಾ ನೆನಪಾಯ್ತು). ಆದರೆ ನೋಡುತ್ತಾ ನೋಡುತ್ತಾ ಕತೆ ತೆಗೆದುಕೊಳ್ಳುವ ತಿರುವುಗಳು ಕುತೂಹಲ ಮತ್ತು ಅಚ್ಚರಿ ಹುಟ್ಟಿಸುತ್ತವೆ. ಒಂದು ಅನಿರೀಕ್ಷಿತ ಘಟನೆಯ ಸುತ್ತ, ಏನೆಲ್ಲಾ ಇರಬಹುದು, ಗೊತ್ತಿದ್ದೋ, ಗೊತ್ತಿಲ್ಲದೆಯೋ ಯಾರೆಲ್ಲಾ involve ಆಗಬಹುದು, ಯಾವುದೋ ಒಂದು ಕ್ಷಣದಲ್ಲಿ ಹೊಣೆ ಹೊತ್ತವರು/ ಜವಾಬ್ದಾರರು, (ಇಲ್ಲಿ ಕಾಲೇಜಿನವರು) casual ಆಗಿ ತೆಗೆದುಕೊಳ್ಳುವ ನಿರ್ಧಾರಗಳು ಹೇಗೆ ಕಂಟಕಗಳಾಗಬಹುದು ಎನ್ನುವುದನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ. crisis ಎನ್ನುವಂತಹ ಸಂದರ್ಭಗಳಲ್ಲಿ ಬೆನ್ನು ತೋರಿಸುವವರು ಇರುತ್ತಾರೆ, ಜೊತೆಗೇ ಇದ್ದಕ್ಕಿದ್ದಂಗೆ ಧೈರ್ಯಶಾಲಿಗಳಾಗಿ ಅದರ ಲಾಭ ಪಡೆಯಲು ಮುನ್ನುಗ್ಗುವವರೂ ಇರುತ್ತಾರೆ. ಮಾರ್ಗ ಮಧ್ಯದಲ್ಲಿ ಕೈ ಬಿಡುವ ಆದರ್ಶಗಳು, ಬದಲಿಸುವ ನಿಲುವುಗಳು, ಬದುಕಿನ ಮೌಲ್ಯಗಳನ್ನು ಅಲುಗಾಡಿಸುವ ನಂಬಿಕೆಗಳು, ವ್ಯವಸ್ಥೆಗೆ ಹೆದರಿ ಮಾಡಿಕೊಳ್ಳುವ ಸಂಧಾನಗಳು, ಕಡೆಗೆ ವ್ಯವಸ್ಥೆಯೊಳಗಿನವರೂ ಅನುಭವಿಸುವ ಒತ್ತಡ, ಅಸಹಾಯಕತೆ, ಇತರರಿಗೆ ಕೇಡು ಬಯಸುವ ಮನಸ್ಥಿತಿಯವರಲ್ಲದಿದ್ದರೂ ಸಹಾಯ ಮಾಡಲು ಹಿಂಜರಿಕೆ, ಎಲ್ಲವೂ ಅನೂಹ್ಯವಾಗಿ ಮೂಡಿಬಂದಿವೆ.

ಅದ್ಭುತವಾದ ಪಾತ್ರ ಪೋಷಣೆಯಿಂದ ಕತೆ ಬಹಳ convincing ಆಗಿದೆ. ಎಷ್ಟೇ ಒಳ್ಳೆಯ ಕತೆಯಿದ್ದರೂ, ಸಿನಿಮಾ ಮಾಡಲು ಹೊರಟಾಗ ಧೈರ್ಯದಿಂದ ದುಡ್ಡು ಹೂಡಲು ಮುಂದಾಗುವವರು ವಿರಳವಾಗಿರುವುದರಿಂದ, ಇದು low budget ಸಿನಿಮಾದಂತೆ ಅನಿಸುತ್ತದೆ. ಅಥವಾ ಒಳ್ಳೆಯ ನಟ ನಟಿಯರನ್ನು ಹಾಕಿಕೊಂಡು ಮಾಡಿದ್ದರೆ, ಕೆಲವೆಡೆ ಡಾಕ್ಯುಮೆಂಟರಿ feel ಬರುತ್ತಿರಲಿಲ್ಲ ಅನಿಸಿತು. ಅದರ ಹೊರತಾಗಿಯೂ, ಅತ್ಯುತ್ತಮ script ನಿಂದ ಈ ಸಿನಿಮಾ ಬಹಳ ಇಷ್ಟವಾಯಿತು. YouTube ನಲ್ಲಿದೆ, ನೋಡಿ. ಇಷ್ಟವಾದರೆ ಟಿಕೆಟ್ ಹಣ ಪಾವತಿಸಿ, ಈ ತಂಡವನ್ನು support ಮಾಡುವ ಅವಕಾಶವೂ ಇದೆ. ‘ಹದಿನೇಳೆಂಟು’ ಸಿನಿಮಾದ ಇಡೀ ತಂಡಕ್ಕೆ ಅಭಿನಂದನೆಗಳು.

‍ಲೇಖಕರು Admin MM

August 26, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: