ವಿಕ್ರಮ್ ಕಾಂತಿಕೆರೆ
**
ಕಣ್ಣೂರು ವಿಶ್ವವಿದ್ಯಾಲಯದ ಬಹುಭಾಷಾ ಅಧ್ಯಯನ ಕೇಂದ್ರ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತು ಕೃತಿಕಾರ ವಿಕ್ರಮ್ ಕಾಂತಿಕೆರೆ ಅವರು ಬರೆದ ಕಿರು ಬರಹ ಇಲ್ಲಿದೆ.
**
‘ಗಿಳಿವಿಂಡು’ ಹೊರಬಂತು. ಇದು ಗೋವಿಂದ ಪೈ ಅವರ ಗಿಳಿವಿಂಡು ಅಲ್ಲ, ಬಹುಭಾಷೆಗಳ ನಾಡು ಹಾಗೂ ಬಹುಭಾಷಾ ಪಂಡಿತ ಗೋವಿಂದ ಪೈ ಅವರಿಗೆ ಗೌರವ ಸಲ್ಲಿಸಿ ಕಣ್ಣೂರು ವಿಶ್ವವಿದ್ಯಾಲಯದ ಬಹುಭಾಷಾ ಅಧ್ಯಯನ ಕೇಂದ್ರ ಪ್ರಕಟಿಸಿದ ಮಲಯಾಳಂ ಕಾವ್ಯ ಸಂಕಲನ. 70 ಕನ್ನಡ ಮತ್ತು 11 ತುಳು ಕವಿತೆಗಳ ಮಲಯಾಳಂ ಅನುವಾದದ ಕೃತಿ. ಕುವೆಂಪು, ದ.ರಾ.ಬೇಂದ್ರೆ, ಗೊವಿಂದ ಪೈ, ಕೆ.ಎಸ್.ನ, ಡಿವಿಜಿ ಸೇರಿದಂತೆ ಕನ್ನಡದ ಪ್ರಖ್ಯಾತ ಕವಿಗಳ ಕವಿತೆಗಳ ಜೊತೆಯಲ್ಲಿ ನಾನು ಅನುವಾದ ಮಾಡಿದ ಹೊಸ ತಲೆಮಾರಿನ ಕವಿಗಳ ಕೆಲವು ಕವಿತೆಗಳೂ ಇವೆ.
ಉತ್ತರ ಕರ್ನಾಟಕ, ಹಳೆ ಮೈಸೂರು ಹಾಗೂ ಕರಾವಳಿ ಕರ್ನಾಟಕದ ಭಾಗದವರ ಸಾಹಿತ್ಯವನ್ನು ನಾನು ಅನುವಾದಕ್ಕೆ ಆಯ್ಕೆ ಮಾಡಿಕೊಂಡಿದ್ದೆ. ಬಿಡುವು ಮಾಡಿಕೊಳ್ಳುವುದು ಕಡುಕಷ್ಟ ಎಂಬ ಪರಿಸ್ಥಿತಿಯಲ್ಲೂ ಭಾಷಾಂತರ ಕಾರ್ಯಕ್ಕೆ ಒತ್ತಾಸೆಯಾಗಿ ನಿಂತ ಬಹುಭಾಷಾ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎ.ಎಂ.ಶ್ರೀಧರನ್ ಅವರಿಗೂ ಸಂಪಾದಕ ಮಂಡಳಿಗೂ ವಿಶ್ವಾಸವಿರಿಸಿ ಕವಿತೆಗಳನ್ನು ‘ಪ್ರಯೋಗಕ್ಕೆ ಒಡ್ಡಿದ’ ಕನ್ನಡದ ಒಲವಿನ ಕವಿಗಳಿಗೂ ಹೃದಯ ತುಂಬಿದ ವಂದನೆಗಳು. ಇದು ಬಹುಭಾಷಾ ಅಧ್ಯಯನ ಕೇಂದ್ರ ಪ್ರಕಟಿಸಿದ ಮೊದಲ ಕೃತಿಯೂ ಹೌದು.
0 Comments