ಒಂದು ವಿಶೇಷ ಸ್ಪರ್ಶ ಅಥವಾ ಮಾನವೀಯ ಕ್ಷಣಗಳಿಗಾಗಿ ಕಾಯುತ್ತೇನೆ..

ಹೇಮಾ ಧ ಖುರ್ಸಾಪೂರ

**

ಪೋಟೋಗ್ರಫಿಗೆ ಹಲವು ಮಜಲುಗಳಿವೆ. ಅದರಲ್ಲಿ ಮುಂಚೂಣಿಯಲ್ಲಿರುವ Wildlife photographyಗೆ ಜೊತೆಯಾಗಿ ಬರುವಂಥವು Candid ಹಾಗೂ ಮಿಕ್ಕ ವಿಭಾಗಗಳು. Behavioural Dynamics ಗೆ ಸಂಬಂಧಿಸಿದ photography ಒಂದಿದೆ ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಇದು ಈ ವಿಭಾಗದಲ್ಲಿ ಅತ್ಯುತ್ತಮ ಕೆಲಸ ಮಾಡಿದ ಶೆರ್ರಿ ನಿಕೊಲ್‌ ಕುರಿತ ಲೇಖನ.

**

ಶೆರ್ರಿ ನಿಕೊಲ್‌ ಅವರನ್ನು ಸಂಬಂಧಗಳಿಗೆ ಹೇಳಿ ಮಾಡಿಸಿದ ಛಾಯಾಗ್ರಾಹಕಿ ಅನ್ನಬಹುದೇನೋ. ಮನೆಯಲ್ಲೇ ಇರಲಿ, ಹೊರಗಿನ ಆವರಣದಲ್ಲೇ ಆಗಿರಲಿ ಅವರ ಚಿತ್ರಗಳು ಪರಿಚಿತ ದೃಶ್ಯಗಳನ್ನೇ ಹೋಲುತ್ತವೆ. ಜೊತೆಗೆ behavioural dynamics ಕುರಿತ ಒಳಗಣ್ಣಿನ ನೋಟವನ್ನು ಹೊಂದಿರುತ್ತವೆ. ಅದರಲ್ಲೂ ನಿರ್ದಿಷ್ಟವಾಗಿ, ಆಂಗಿಕ ಭಾಷೆಯನ್ನು ಪತ್ತೆ ಹಚ್ಚುವಂತೆ. ಅವರ ಸಂಶೋಧನಾ ಚಿತ್ರಗಳು ಆಗಸ್ಟ್‌ 15ರಂದು ಫೊಟೋಬುಕ್‌ ಆಗಿ ಲೋಕಾರ್ಪಣೆಗೊಂಡಿದೆ. Hirmer ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. Simply Sherrie Nickol ಎಂಬ ಶೀರ್ಷಿಕೆ ಹೊಂದಿದ್ದು; ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ಬಾಲ್ಯದಿಂದ ವೃದ್ಧಾಪ್ಯದವರೆಗೆ, ಶೈಶವಾವಸ್ಥೆಯಿಂದ ಪ್ರೌಢಾವಸ್ಥೆಯವರೆಗೆ, ಬದುಕಿನ ಹಲವು ಮಜಲುಗಳನ್ನು ಅನ್ವೇಷಿಸುವ ಪ್ರಯತ್ನ ಇದಾಗಿದೆ. ಒಲವು, ಆಟ, ಸಂಕಟ, ಬಿಡುಬೀಸಾಗಿರುವಿಕೆ, ಎಲ್ಲಾ ಭಾವಗಳು ಒಟ್ಟಾಗಿ ಅಂತರ ಸಂಪರ್ಕವುಳ್ಳ ನಿರೂಪಣೆಯನ್ನು ವರ್ಣಚಿತ್ರಗಳು ಹಾಗೂ ಕಪ್ಪು, ಬಿಳುಪು ಚಿತ್ರಗಳ ನಡುವಿನ ಹೊಯ್ದಾಟಗಳಲ್ಲಿ ಹೇಳಲಾಗಿದೆ.

ಪಿಸಾದಲ್ಲಿ ಯುವ ಪ್ರೇಮಿಗಳು – ಶೆರ್ರಿ ನಿಕೊಲ್ ಅವರ ಅತ್ಯುತ್ತಮ ಛಾಯಾಚಿತ್ರಗಳಲ್ಲಿ ಒಂದು.

‘ಒಂದು ವಿಶೇಷ ಸ್ಪರ್ಶ ಅಥವಾ ಚುಂಬನದಂತಹ ಭಾವ ಔನ್ನತ್ಯದ, ಮಾನವೀಯ ಕ್ಷಣಗಳಿಗಾಗಿ ಕಾಯುತ್ತೇನೆ…’ ಪಿಸಾ, 1998, ಶೆರ್ರಿನಿಕೊಲ್

‘ಅವರೆಲ್ಲ ಹುಲ್ಲಿನ ಮೇಲೆ ಒರಗಿಕೊಂಡಿದ್ದರು. ಅದೊಂದು ಅಸಾಧಾರಣ ದೃಶ್ಯವಾಗಿತ್ತು – ಒಲವಿನ ಕೊಡುಕೊಳುವಿಕೆಯಲ್ಲಿ ಜೋಡಿಗಳು ಅದೆಷ್ಟು ತಲ್ಲೀನರಾಗಿದ್ದರೆಂದರೆ. ಚಿತ್ರ ತೆಗೆಯಲು ಓಡಾಡುತ್ತಿರುವುದೂ ಅವರ ಗಮನಕ್ಕೆ ಬರಲಿಲ್ಲ.’ ಹೊಸ ಸ್ಥಳಕ್ಕೆ ಕ್ಯಾಮೆರಾ ಇಲ್ಲದೆ ಹೋಗುವುದೇ ಇಲ್ಲ ನಾನು. ಅಪರಿಚಿತರ ನಡುವೆ ಏಕಾಂಗಿಯಾಗಿರಲಿ ಅಥವಾ ಅವರ ಕುಟುಂಬಗಳು ಅಥವಾ ಸ್ನೇಹಿತರೊಂದಿಗೆ ಜನ ಒಬ್ಬರಿಗೊಬ್ಬರು ಹೇಗೆ ಸಂಬಂಧ ಹೊಂದಿದ್ದಾರೆ ಎಂಬುದನ್ನು ಗಮನಿಸುತ್ತೇನೆ; ಅವರ ದೇಹದ ಭಾಷೆಯನ್ನು ಪರಿಶೀಲಿಸುತ್ತೇನೆ. ಒಂದು ವಿಶೇಷ ಸ್ಪರ್ಶ ಅಥವಾ ಚುಂಬನದಂತಹ ಭಾವ ಔನ್ನತ್ಯದ, ಮಾನವೀಯ ಕ್ಷಣಗಳಿಗಾಗಿ ಕಾಯುತ್ತೇನೆ.

ಯುವ ಪ್ರೇಮಿಗಳ ಈ ಚಿತ್ರ – ನಿಜವಾದ ಸುಂದರ ಕ್ಷಣ – 1998ರಲ್ಲಿ ಇಟಲಿಯ ಪಿಸಾದಲ್ಲಿ ತೆಗೆದ ಛಾಯಾಚಿತ್ರ. ಯುವ ಜೋಡಿಗಳು ಹುಲ್ಲಿನ ಮೇಲೆ ಒರಗಿಕೊಂಡಿದ್ದರು. ಅದೊಂದು ಅಸಾಧಾರಣ ದೃಶ್ಯವಾಗಿತ್ತು. ದೈನಿಕವನ್ನು ಮೀರಿದ ಅದ್ಭುತ ಕ್ಷಣವೊಂದನ್ನ ಸದಾ ಹುಡುಕುತ್ತಲೇ ಇರುತ್ತೇನೆ. ಆ ಗಳಿಗೆ, ಆ ಮನಸ್ಥಿತಿಯನ್ನು ಸೆರೆಹಿಡಿಯಲು ಇಷ್ಟಪಡುತ್ತೇನೆ. ಪ್ಯಾರಿಸ್‌ನ ಜಾರ್ಡಿನ್ ಡೆಸ್ ಪ್ಲಾಂಟೆಸ್‌ನಲ್ಲಿ ಸುಂದರವಾದ ಬಿಳಿ ಉಡುಪು ಧರಿಸಿದ್ದ ಪುಟ್ಟ ಹುಡುಗಿ ಆಟವಾಡುತ್ತಿದ್ದಳು. ಅವಳು ಕೆಸರಿನ ಕೊಚ್ಚೆಯಲ್ಲಿ ಬಿದ್ದಾಗ ತುಂಬಾ ಅಸಮಾಧಾನಗೊಂಡಿದ್ದಳು. ಸುತ್ತಲಿದ್ದವರೆಲ್ಲ ಅವಳನ್ನು ಸಮಾಧಾನಪಡಿಸಲು ಮತ್ತು ಅವಳ ಉಡುಪನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಅವರು ಅದೇ ಸಮಯದಲ್ಲಿ ನಗುತ್ತಿದ್ದರು. ಇದೊಂದು ಅತ್ಯುತ್ತಮ ಕ್ಲಿಕ್ ಆಗುತ್ತದೆ ಎನಿಸಿತು. ಎರಡು ವರ್ಷಗಳ ನಂತರ, ಪ್ಯಾರಿಸ್‌ಗೆ ಹಿಂತಿರುಗಿದಾಗ, ಅಮ್ಮನ ಮೂಲಕ ಆ ಪುಟ್ಟ ಹುಡುಗಿ, ಅವಳ ಅಮ್ಮನನ್ನು ಭೇಟಿಯಾಗಲು ಪ್ರಯತ್ನಿಸಿದೆ. ಆವತ್ತು ಕ್ಲಿಕ್ಕಿಸಿದ ಆ ಅದೃಷ್ಟದ ಕ್ಷಣದ ಪ್ರಿಂಟ್ ಕಾಪಿ ಅವರ ಕೈಗಿತ್ತೆ. ಇಬ್ಬರೂ ನಗಲು ಪ್ರಾರಂಭಿಸಿದರು.

ಕೋಟ್ ಮೈನೆಯಲ್ಲಿರುವ ಸಾರ್ವಜನಿಕ ಬೀಚ್‌ನಲ್ಲಿ, ಯಾರೋ ಎದ್ದುನಿಂತು ಕೂಗಿದರು, ನಂತರ ನನ್ನನ್ನು ಬೆನ್ನಟ್ಟಲು ಪ್ರಾರಂಭಿಸಿದರು. ಅದೃಷ್ಟವಶಾತ್, ಅವರಿಗಿಂತ younger and quicker ಆಗಿದ್ದಕ್ಕೆ ಬಚಾವಾದೆ!

ನನ್ನ ಮಗ ಟೀನೆಜಿಗೆ ಬರುವ ಹೊತ್ತಿಗೆ, Between-Teen ಸರಣಿ ಶುರುಮಾಡಿದೆ. ಅದು ಬಹುಶಃ 2000ನೇ ವರ್ಷ ಇರಬಹುದು, ಮಗನ ಮತ್ತು ಅವನ ಗೆಳೆಯರ ಫೋಟೋಗಳನ್ನು ತೆಗೆಯುತ್ತಿದ್ದೆ. ಆಮೇಲೆ, 14ರ ವಯಸಿನೊಳಗಿದ್ದ (ಅವರು ಹೆಚ್ಚು ಸ್ವ-ಪ್ರಜ್ಞೆಯುಳ್ಳವರಾಗುವ ಸಮಯ) ಗೆಳೆಯ/ಗೆಳಯತಿಯರ ಮಕ್ಕಳ ಫೋಟೋಗಳತ್ತ ಹೊರಳಿದೆ. ಮೊದಮೊದಲು, ನಾನು ಫೋಟೋಗಳನ್ನು ತೆಗೆಯುವ ಅವರ ಸ್ನೇಹಿತರ ಅಮ್ಮನಾಗಿದ್ದೆ. ಸಾಮಾನ್ಯವಾಗಿ ಅವರು ನನ್ನ ಬಗ್ಗೆ ಅಷ್ಟಾಗಿ ಗಮನಹರಿಸುತ್ತಿರಲಿಲ್ಲ, ಇದು ನನಗೆ ನಿಜಕ್ಕೂ ಸಿರಿ ಸಿಕ್ಕಂತಾಗಿತ್ತು. ನನ್ನ ಕೆಲಸವು candid ಮತ್ತು posed picture ಗಳೆರೆಡರ ಮಿಶ್ರಣವಾಗಿದೆ. ಕೆಲವೊಮ್ಮೆ ಸಾರ್ವಜನಿಕವಾಗಿ ಒಂದು ಗುಂಪಿನ ಛಾಯಾಚಿತ್ರ ತೆಗೆಯುವಾಗ, “ಗ್ರೂಪ್ ಶಾಟ್ ಮಾಡೋಣ,” ಎನ್ನುತ್ತೇನೆ. ಅವರು ಹಿಂದೆ ಮುಂದೆ ನೋಡುತ್ತಾರೆ. ನಂತರ, “ಸರಿ ಸರಿ… ನಾವು ಸಹಜವಾಗಿರೋಣ,” ಎನ್ನುತ್ತೇನೆ. ಹೆಚ್ಚಿನ ಜನರು ಸಕಾರಾತ್ಮಕ ಸ್ಪಂದಿಸುತ್ತಾರೆ. ಹೀಗೆ ಸಾರ್ವಜನಿಕವಾಗಿ ಫೋಟೋ ತೆಗೆಯುವಾಗ ಒಂದೇ ಸಲ ತುಸು ಕಿರಿಕಿರಿಯ ಅನುಭವ ಆಗಿದ್ದು. ಮೈನೆಯಲ್ಲಿರುವ ಸಾರ್ವಜನಿಕ ಕಡಲತೀರದಲ್ಲಿ ಸಾಕಷ್ಟು ಜನರಿದ್ದ ದೃಶ್ಯವನ್ನು ಫೋಟೋ ತೆಗೆಯುವಾಗ, ವಯಸ್ಸಾದ ವ್ಯಕ್ತಿಯೊಬ್ಬರು ಎದ್ದುನಿಂತು ನನ್ನನ್ನು ನಿಲ್ಲಿಸುವಂತೆ ಕೂಗಿದರು, ನಂತರ ಬೆನ್ನಟ್ಟಲು ಪ್ರಾರಂಭಿಸಿದರು. ಅದೃಷ್ಟವಶಾತ್, ಅವರಿಗಿಂತ younger and quicker ಆಗಿದ್ದಕ್ಕೆ ಬಚಾವಾದೆ!

ಛಾಯಾಗ್ರಹಣ ಅಧ್ಯಯನ ಮಾಡಿದ್ದು ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ. ಫೋಟೋಗಳನ್ನು ತೆಗೆಯಲು ಪ್ರಾರಂಭಿಸಿದಾಗ, ನನ್ನನ್ನು ನಾನು ಕಂಡುಕೊಂಡೆ ಎನ್ನುವ ಅನುಭವವಾಯಿತು. ನಂತರ, ನ್ಯೂಯಾರ್ಕ್‌ಗೆ ಹೋದೆ. ನಿಜ ಹೇಳಬೇಕೆಂದರೆ ವಿಶಾಲವಾದ, ವಿಚಿತ್ರವಾದ ಪರಿಸರದಲ್ಲಿ ‘ನಾನು ನಾನಾಗುವ’ ಪ್ರಕ್ರಿಯೆ ಒಂದು ರೀತಿ ಅನೇಕ ಭಾವಗಳ ಸಮ್ಮಿಶ್ರಣ. ಮುಂದೆ ಇಂಟರ್ ನ್ಯಾಷನಲ್ ಸೆಂಟರ್ ಆಫ್ ಫೋಟೋಗ್ರಫಿಯಲ್ಲಿ ತರಗತಿಗಳನ್ನು ತೆಗೆದುಕೊಂಡೆ. ಶೀಘ್ರದಲ್ಲೇ ನನ್ನ ದಾರಿಯನ್ನು ಹುಡುಕಲು ಪ್ರಾರಂಭಿಸಿದೆ. ಸ್ವಲ್ಪ ಸಮಯದವರೆಗೆ ಫೋಟೋ ಸಹಾಯಕಳಾಗಿ ಕೆಲಸ ಮಾಡಿದೆ, ನಂತರ ಸ್ವತಂತ್ರವಾಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಅಂತಿಮವಾಗಿ, ನ್ಯೂಯಾರ್ಕ್ ಸಿಟಿ ಬಿಸಿನೆಸ್ ಮ್ಯಾಗಜೀನ್‌ನಲ್ಲಿ ಸ್ಟಾಫ್ ಫೋಟೋಗ್ರಾಫರ್ ಆದೆ. ಇದು ಈ ಕ್ಷೇತ್ರದ ಅಪರೂಪದ ಸ್ಥಾನಗಳಲ್ಲಿ ಒಂದು! ಅಲ್ಲಿ ಆರು ವರ್ಷಗಳ ಕಾಲ ಕೆಲಸ ಮಾಡಿದೆ. ಅಲ್ಲಿ ನನಗೆ ಬೇಕಾದ ಎಲ್ಲ ಸ್ವಾತಂತ್ರ್ಯ ಲಭ್ಯವಿತ್ತು. ಅಲ್ಲಿಂದ ಬಿಟ್ಟ ಮೇಲೆ, ಸ್ವಂತ ಸ್ಟುಡಿಯೋ ತೆರೆದಿದ್ದೇನೆ, ವಾಣಿಜ್ಯ ಗ್ರಾಹಕರೊಂದಿಗೆ ಕೆಲಸ ಮಾಡಿದೆ ಜೊತೆಗೆ ಅಷ್ಟೇ ಕಲಾತ್ಮಕ ಕೆಲಸವನ್ನೂ ಮಾಡಿದ್ದೇನೆ. ದೀರ್ಘಕಾಲ ನಡೆಯುವ ಯೋಜನೆಗಳು ನನಗಿಷ್ಟ. Face to Face ಸರಣಿಯು ಮಹಿಳೆಯರ ಶಾಂತ ಸೌಂದರ್ಯ, ಘನತೆಯನ್ನು ಅನ್ವೇಷಿಸುತ್ತದೆ. “ನಿಮ್ಮ ಸ್ವಂತ ಮೇಕ್ಅಪ್ ತನ್ನಿ. ನೀವು ಅಸಾಧಾರಣವೆಂದು ಭಾವಿಸುವುದನ್ನು ಧರಿಸಿ. ಎನ್ನುತ್ತೇನೆ. ನನ್ನ ಕೆಲಸವನ್ನು ನಾನು ಪ್ರೀತಿಸುತ್ತೇನೆ.

**

ಶೆರ್ರಿ ನಿಕೊಲ್‌ ಪರಿಚಯ

ಶೆರ್ರಿ ನಿಕೊಲ್ ಒಬ್ಬ ಉತ್ತಮ ಕಲಾ ಛಾಯಾಗ್ರಾಹಕಿಯಾಗಿ. ಬೆಚ್ಚನೆಯ ಭಾವದ ಕ್ಷಣಗಳನ್ನು ಸರಿಯಾದ ಸಮಯದಲ್ಲಿ ಕ್ಲಿಕ್ಕಿಸುವ ಮೂಲಕ ಸಮಯ-ಜೀವನವನ್ನ ಒಂದೇ ಫ್ರೇಮಿನಲ್ಲಿ ಹಿಡಿದಿಡುತ್ತಾರೆ. ಹುಟ್ಟಿ ಬೆಳೆದಿದ್ದು ಅರ್ಕಾನ್ಸಾಸ್‌ನ ಓಸ್ಸಿಯೋಲಾದಲ್ಲಿ. ವಯಸ್ಕ ಜೀವನ ನಡೆಸಿದ್ದು ನ್ಯೂಯಾರ್ಕ್ ನಗರದಲ್ಲಿ. ಸಿನ್ಸಿನಾಟಿ ವಿಶ್ವವಿದ್ಯಾಲಯ ಹಾಗೂ ನ್ಯೂಯಾರ್ಕಿನ ಇಂಟರ್ ನ್ಯಾಷನಲ್ ಸೆಂಟರ್ ಆಫ್ ಫೋಟೋಗ್ರಫಿ ಅಧ್ಯಯನ. ಶೆರ್ರಿ ತೆಗೆದ ಛಾಯಾಚಿತ್ರಗಳು ಪ್ಯಾರಿಸ್‌ನಲ್ಲಿರುವ ಬಿಬ್ಲಿಯೊಥೆಕ್ ನ್ಯಾಷನಲ್ ಡೆ ಫ್ರಾನ್ಸ್‌ನ ಶಾಶ್ವತ ಸಂಗ್ರಹಣೆಯಲ್ಲಿ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಹಲವಾರು ಖಾಸಗಿ ಸಂಗ್ರಹಗಳಲ್ಲಿವೆ. ನ್ಯೂಯಾರ್ಕಿನ ಟೆಂಪಲ್ ಯೂನಿವರ್ಸಿಟಿ ಮತ್ತು ದಿ ನ್ಯಾಷನಲ್ ಆರ್ಟ್ಸ್ ಕ್ಲಬ್ನಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನೂ ಆಯೋಜಿಸಿದ್ದಾರೆ. ಷಟರ್‌ನ ಕ್ಲಿಕ್‌ನೊಂದಿಗೆ ನಿಕಟ ಹಾಗೂ ಆಳವಾದ ಕತೆಗಳನ್ನು ಹೇಳುವ ಕಲಾವಿದನ ಕೆಲಸವನ್ನು ಪರಿಚಯಿಸುವ ಶೆರ್ರಿ ನಿಕೊಲ್‌ ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ ಜನರು ಮತ್ತು ಅವರ ಪರಿಸರದ ನಡುವಿನ ಸಂಬಂಧಗಳನ್ನು ಕ್ಲಿಕ್ಕಿಸಲು ಹೆಚ್ಚು ಗಮನಹರಿಸಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಮಹಿಳೆಯರ ಜೀವನವನ್ನು ಫೋಟೋದಲ್ಲಿ ದಾಖಲಿಸುತ್ತ ಬಂದಿದ್ದಾರೆ.

‍ಲೇಖಕರು Admin MM

August 23, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: