ಶಾಲಿನಿ ಭಂಡಾರಿ
ಈವತ್ತು ಧಾರವಾಡದ ಸಾಧನಕೇರಿಗೆ ಹೋಗಿದ್ದೆ ಅಂಬಿಕಾತನಯದತ್ತರ ಮನೆ ನೋಡೋಕೆ…
ದತ್ತಾತ್ರೆಯ ರಾಮಚಂದ್ರ ಬೇಂದ್ರೆ ಆಗಿದ್ರೂ ಅಮ್ಮನ ಹೆಸರು ಸೇರ್ಸ್ಕೊಂಡು ಅದನ್ನ ಕಾವ್ಯನಾಮ ಮಾಡ್ಕೊಂಡು ಬರೀತಿದ್ದಕ್ಕೆ ಅವ್ರಂದ್ರ ಒಂಥರಾ ಗೌರವ…
ಈವತ್ತು “ಹಾಡು~ಪಾಡು” ಓದಿ ಅವ್ರ ಜೀವ್ನದ ಬಗ್ಗೆ ತುಂಬಾ ವಿಷ್ಯ ಗೊತ್ತಾತು. ಬದುಕಿನ ಪಾಡುಗಳಿಗೆ ಅಲಂಕಾರ, ರೂಪಕ, ಕಾವ್ಯ ಶೈಲಿಯ ಬಣ್ಣಗಳನ್ನ ಚೆಲ್ಲಿ, ಲೇಖನಿಯಿಂದ ಮೆಲ್ಲಕ ಕೈಯಾಡಿಸಿ ಹಾಡು ಮಾಡೊ ರೀತಿ ನಂಗ ಮೋಡಿ ಮಾಡ್ತು…
ಜೀವನ್ದಾಗ ಹೆಚ್ಚಾಗಿ ಕಷ್ಟ ನೋಡಿರೊ ಬೇಂದ್ರೆ ಅಜ್ಜನ ಕಾವ್ಯಪ್ರೀತಿ ಭಾಳ ಇಷ್ಟ ಆತು.
ಆದರೆ ಕುಪ್ಪಳ್ಳಿಗೆ ಹೋದ್ರೆ ಅಲ್ಲಿ ಪುಟ್ಟಪ್ಪಜ್ಜ ಇದ್ದಾರೆ ಅನ್ಸತ್ತೆ, ಕವಿಶೈಲದ ಕಡೆ ಹೋದ್ರ ಅವ್ರು ನಡ್ದ ದಾರಿ ಉಸ್ರಾಡಿದ್ ಗಾಳಿ ಎಲ್ಲ ಅನುಭವಕ್ಕೆ ಬರತ್ತೆ. ಇಲ್ಲಿ ಹಂಗಾಗಲಿಲ್ಲ, ಯಾಕಂತ ಗೊತ್ತಿಲ್ಲ. ಲೈಬ್ರರೀಲಿ ಓದಿ ಪಕ್ದಾಗಿದ್ದ ಅವ್ರ ಮನಿ “ಶ್ರೀಮಾತ” ಕ್ಕೆ ಪುಸ್ತಕ ಖರೀದಿ ನೆಪ್ದಾಗ ಹೋದೆ,
ಪಡಸಾಲೇಲಿ ಮೆಣಸಿನಕಾಯಿ ಆರ್ಸ್ಕೊಂತ ಕುಂತಿದ್ದ ಮುದ್ಕಿ ನೋಡು ಬಾ ಅಂದ್ರು… ಒಳಗೆ ಅವ್ರ ಬಟ್ಟೆ ಬರೆ ಜೊತೆಗೆ ಸ್ವಲ್ಪ ವಸ್ತುಗಳಿದ್ವು… ಎರಡೇ ಕಾಲಂ ಇರೋ ಒಂದ್ ಗಾಜಿನ ಕಪಾಟಲ್ಲಿ ಪುಸ್ತಕ ಇದ್ವು, ಒಂದ್ ಪುಸ್ತಕ ತಗೊಂಡು ಕೊಡಿ ಅಂದೆ, ನೂರು ರುಪಾಯಿ ಕೊಟ್ಟು ಬರ್ಬೇಕು ಅನ್ಕೊಳ್ಳೊದ್ರಾಗ ಸಕ್ಕರಿ ತಗೊ ಅಂದ್ರು… ಅಲ್ಲೆ ಇದ್ದ ಸ್ಟೀಲ್ ಡಬ್ಯಾಗಿಂದ ಒಂದ್ ಚಮಚ ಸಕ್ರಿ ಬಾಯಿಗ್ ಹಾಕ್ಕೊಂಡು ಬಂದೆ,
ಏನೋ ಒಂಥರಾ ನೋವು, ಮೌನ ಇದೆ ಅಲ್ಲಿ. ನಂಗಷ್ಟ ಹಂಗನ್ಸ್ತೋ ಏನೋ ಗೊತ್ತಿಲ್ಲ , ಅದ್ರ ಹೊರಗ್ ಬರೋವಾಗ ಅವ್ರೇ ಬರ್ದಿದ್ “ನನ್ನ ಪಾಡು ನನಗಿರಲಿ, ಸವಿಯನಷ್ಟೇ ನೀಡುವೆ ನಿನಗೆ” ಸಾಲುಗಳು ನೆನ್ಪಾದ್ವು…
(ಸಾಲಿನ ಅಕ್ಷರ ಜೋಡಣೆ ಸ್ವಲ್ಪ ಬದಲಿ ಇರಬಹುದು, ಆದರೆ ಅರ್ಥ ಒಂದೆ)
ªÉÄÃqÀA ¤ÃªÀÅ ºÉýzÀÄÝ ¸Àj ¸ÁzsÀ£ÀPÉÃjUÉ ºÉÆÃzÀgÉ ºÁUÉ J¤¸ÀÄvÀÛzÉ.