ರಾಜಕುಮಾರ ಮಡಿವಾಳರ
ಏನಾದರು….
ಬೇಸರ ಆದಾಗ, ಮನಸು ತಹಬಂದಿಗೆ ಬರಲು ನನಗೆ ಯಾವತ್ತೂ ಪುಸ್ತಕಗಳೇ ಸಂತೈಸುವ ಮೆಚ್ಚಿನ ದೇವರು.
ಒಂದು “ಬೈಠ್ ” ಅಂತಾರಲ್ಲ ಹಾಗೆ, ಅಷ್ಟೇ ಸಮಯದಲ್ಲಿ ಓದಿಸಿಕೊಂಡು ಹೋಯ್ತು, ಲೇಖಕರ ಧ್ವನಿಯಾಗಿ ನಮ್ಮ ಸುನೀತಕ್ಕ ಹೇಳಿದ ಒಂದು ಪೇಜ್ ಕೂಡ ಇಲ್ಲಿ ಹಾಕಿದ್ದೇನೆ, ನಾವೇ ಅವರ Number 1 Fans..( ತಂದೆನಾ ಹೀರೊ ಅಂತಾರೆ ತುಂಬ ಜನ, ತಂದೆಯ ಅಭಿಮಾನಿಗಳು ನಾವು ಅನ್ನೊದು ನನ್ನ ಪಾಲಿಗಂತು ಖುಷಿಯ ಸಂಗತಿ)
ನನ್ನಲ್ಲಿ, ನನ್ನ ಬರಹಗಳಲ್ಲಿ ಇವತ್ತಿಗೂ ನನ್ನ ಅಪ್ಪನ Fan ಆಗಿನೆ ನಾನಿರೋದು, ನಾನು ” ಅಣ” ಅನಂತಸ್ವಾಮಿ ಅವರ ಹಾಡು ಕೇಳಿದ್ದೆ, ಆದರೆ ರಾಜು ಅನಂತಸ್ವಾಮಿಯವರ ಮೂಲಕ ನಾನು ಅನಂತಸ್ವಾಮಿಯವರನ್ನ ಕಂಡಿದ್ದು, ಈಗ
“ಸೋನೆ ಪೆ ಸುಹಾಗ್” ಅನ್ನುವ ಹಾಗೆ ಸುನೀತಕ್ಕ
“ನನ್ನ ಅಣ” ಕೈಗಿಟ್ಟಿದ್ದಾರೆ.
ನಿಮ್ಮ ದಿನದ..
ಇಪ್ಪತ್ತನಾಲ್ಕು ಗಂಟೆಗಳಲ್ಲಿ ಒಂದೇ ಒಂದು ತಾಸು ಬೇಡುವ, ನಂತರ ಉಳಿದ ಸಮಯವನ್ನು ಪ್ರಸನ್ನ ಆಗಿಸುವ ಪುಸ್ತಕ, ಓದಲೇ ಬೇಕಾದ ಪುಸ್ತಕ, ಅಷ್ಟು ಅವರ ಅನುಭವಗಳಲ್ಲಿ, ನೆನಪುಗಳಲ್ಲಿ ನಮ್ಮವೂ ನುಸುಳಿ ಬಂದ ಸುಯೋಗದನುಭವ..
ಅಂದ ಹಾಗೆ ಈಗ ಬೇಸರ ಮುಗಿದಿದೆ, ಎಂಥದೋ ಹಾಯ್ ಮನಸು! ಥ್ಯಾಂಕ್ಯೂ “ಅಣ”.
ನಾನು ಓದಿದೆ, ಸರದಿ ನಿಮ್ಮದು.
ಈ ಪುಸ್ತಕ ಕೊಳ್ಳಲು- ಇಲ್ಲಿ ಕ್ಲಿಕ್ಕಿಸಿ
0 ಪ್ರತಿಕ್ರಿಯೆಗಳು