ಕಲಾವಿದ, ಕಲಾ ವಿಮರ್ಶಕ ಹಾಗೂ ಸ್ಥಿರ ಛಾಯಾಗ್ರಾಹಕರಾದ ಗಿರಿಧರ್ ರ ಖಾಸನೀಸ್ ಅವರ ಚೊಚ್ಚಲ ಕೃತಿ, ನವಕರ್ನಾಟಕ ಪ್ರಕಾಶನದ ಪ್ರಕಟಣೆ ‘ಎಲ್ಲಿಂದಲೋ ಹಾರಿ ಬಂದು’ ಕಥಾ ಸಂಕಲನ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.
ಗ್ಯಾಲರಿ ಸುಮುಖದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ ಜಿ ರಾಮಕೃಷ್ಣ, ಡಾ ವಿಜಯಾ, ಗ್ಯಾಲರಿ ಸುಮುಖದ ಮುಖ್ಯಸ್ಥರಾದ ಪ್ರಮೀಳಾ ಅವರು ಭಾಗವಹಿಸಿದ್ದರು. ಹಿರಿಯ ರಂಗಕರ್ಮಿ ಡಾ ನ ರತ್ನ ಅವರು ಉಪಸ್ಥಿತರಿದ್ದರು.
ಸಂಸ್ಕೃತಿ ಚಿಂತಕರಾದ ಎನ್ ವಿದ್ಯಾಶಂಕರ್ ಹಾಗೂ ಪತ್ರಕರ್ತ ಜಿ ಎನ್ ಮೋಹನ್ ಅವರು ಲೇಖಕ ಗಿರಿಧರ್ ಖಾಸನೀಸ್ ಅವರೊಂದಿಗೆ ಸಂವಾದ ನಡೆಸಿದರು.
ನವಕರ್ನಾಟಕ ಪ್ರಕಾಶನದ ಮುಖ್ಯಸ್ಥರಾದ ರಮೇಶ್ ಉಡುಪ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಖ್ಯಾತ ಛಾಯಾಗ್ರಾಹಕ ತಾಯಿ ಲೋಕೇಶ್ ಕಂಡಂತೆ ಕಾರ್ಯಕ್ರಮ ಹೀಗಿತ್ತು
0 ಪ್ರತಿಕ್ರಿಯೆಗಳು