ಎಡೆಯೂರು ಪಲ್ಲವಿ ಓದಿದ ‘ಚಮತ್ಕಾರಿ ಚಾಕ್ಲೇಟು’

ಎಡೆಯೂರು ಪಲ್ಲವಿ 

ಮಕ್ಕಳ ಬಗ್ಗೆ ಅಪಾರ ಕಾಳಜಿ, ಪ್ರೀತಿ, ಸಹನೆಯುಳ್ಳವರು ಸೋಮು ಕುದರಿಹಾಳ ಸದಾ ಮಕ್ಕಳ ಶ್ರೇಯೋಭಿಲಾಷೆಯ ಕ್ಯಾನ್ವಾಸಿನಲ್ಲಿ ಸೂಕ್ಷ್ಮವಾಗಿ ಚಿಂತಿಸುವವರು. ಮಕ್ಕಳ ಸಾಹಿತ್ಯ ಬರವಣಿಗೆಗಿಂತ ಬದುಕು ಮುಖ್ಯ ಎಂದು ನಂಬಿದ ಅವರ ‘ಚಮತ್ಕಾರಿ ಚಾಕ್ಲೇಟು’ ಮೊದಲ ಮಕ್ಕಳ ಕಥಾ ಸಂಕಲನದಲ್ಲಿ ಒಟ್ಟು ಹದಿನೆಂಟು ಚಾಕಲೇಟ್‌ಗಳನ್ನು ಕಾಣಬಹುದು. ಒಂದಕ್ಕಿಂತ ಒಂದು ವಿಭಿನ್ನತೆಯ ಲಾಲಿತ್ಯದಲ್ಲಿ ಕೂಡಿದ ಕೆಲವು ಮತ್ತೆ ಮತ್ತೆ ಸವಿಯಬೇಕು ಎನಿಸುವಂತವು. ತನ್ನ ಸರಳ ಭಾಷೆ, ನೇರ ನಿರೂಪಣೆಯಿಂದ ಮಕ್ಕಳ ಮನೋಲೋಕದಲ್ಲಿ ಸುಲಭವಾಗಿಯೇ ಸಂಚರಿಸುವಂತವು. 

ಕಥೆ ಹೇಳುವ ಪರಂಪರೆಯಲ್ಲಿ ಸದಾ ಸ್ಥಾನ ಗಿಟ್ಟಿಸುವ ‘ಕಾಗಕ್ಕ ಗುಬ್ಬಕ್ಕ’ನ ಅಪ್ಡೇಟೆಡ್ ಕತೆಯಿಂದ ಈ ಸಂಕಲನ ಓದಿಗೆ ತೆರೆದುಕೊಳ್ಳುತ್ತದೆ. ಕೊರೊನ ಸೃಷ್ಟಿಸಿದ ಅವಾಂತರದಲ್ಲಿ ಶಿಕ್ಷಣ ಇಲಾಖೆಯು ಹೊರತಾಗಿಲ್ಲ. ಕಲಿಕೆಯಲ್ಲೂ ಹಲವಾರು ಮಾರ್ಪಾಡು ಮಾಡಿಕೊಂಡ ಮಕ್ಕಳ ಆನ್ ಲೈನ್ ಕ್ಲಾಸ್‌, ಬಳಕೆಯ ಪರೋಕ್ಷದಲ್ಲಿ ಉಂಟಾದ ಮೊಬೈಲ್‌, ಇಂಟರ್‌ನೆಟ್‌ನ ವಿಪರೀತ ಬಳಕೆ, ವ್ಯಸನದ ಬಗ್ಗೆ ಅಪ್‌ಡೇಟೆಡ್‌ ಆಗಿಯೇ ತಿಳಿಸುತ್ತದೆ. 

‘ನಾನು ಹೆಚ್ಚಾ? ನೀನು ಹೆಚ್ಚಾ?’ ಮಾದರಿಯ ಹಲವಾರು ಕಥೆಗಳು ಈ ಹಿಂದೆಯೇ ಹುಟ್ಟಿ ಜನಜನಿತವಾಗಿ ನಮ್ಮನ್ನು ತಲುಪಿದ್ದರು ಇಲ್ಲಿನ ‘ಯಾರು ಹೆಚ್ಚು’ ಕಥೆ, ದಿನನಿತ್ಯ ಮಕ್ಕಳು ಬಳಸುವ, ಅವರ ಸಖ್ಯದಲ್ಲೇ ತಿರುಗುವ ವಸ್ತುಗಳ ಹಂದರದೊಳಗೆ ಮತನಾಡುವ ಈ ಕತೆ ವಿನೋದದಿಂದ ಕೂಡಿದ ಪುಟ್ಟ ಕಥೆಯಾಗಿದೆ. ಮಾತ್ರವಲ್ಲ ಮಕ್ಕಳ ಗಮನ ಸೆಳೆಯುವುದರಲ್ಲೇ ಹಿಂದೆ ಸರಿಯಲಾರದು. 

ನೀತಿ ಕಥೆಗಳಿಗಿಂತ ಹೆಚ್ಚಾಗಿ ಇಲ್ಲಿನ ಅನೇಕ ಕಥೆಗಳು ವಿನೋದ, ಜಾಣ್ಮೆಯನ್ನು ಒಳಗಿಟ್ಟುಕೊಂಡಿರುವಂತಹವು ಹಾಗೂ ಪ್ರಸ್ತುತ ಬದುಕಿನ ಸನ್ನಿವೇಶಗಳನ್ನು ಎದುರುಗೊಂಡು ಕಚಗುಳಿ ಇಡುತ್ತದಾದರೂ ಕೆಲವು ಇನ್ನೊಂದಿಷ್ಟು ವಿಸ್ತಾರವನ್ನು ಬಯಸುತ್ತದೆ. ಕಥೆ ಎಂದರೆ ಕೇವಲ ಒಂದು ಸನ್ನಿವೇಶವನ್ನೋ, ಘಟನೆಯನ್ನೋ, ನೀತಿ ಮಾದರಿಯದನ್ನೋ ಸೇವ್ ಮಾಡುವುದಲ್ಲ. ಇವೆಲ್ಲವುದನ್ನು ಮೀರಿ ಯೋಚಿಸುವಂತ ಕಥೆ ‘ಮಾಮಾ ಗಿಲಿಮಇ ಎಲ್ಲಿ?’. ದೊಡ್ಡವರ ಮನಸ್ಸಿನಲ್ಲಿಯೂ ತಣ್ಣನೆಯ ಭಾವ ಹರಿಸುತ್ತಲೇ ಒಂದು ಸುಪ್ತ ಪ್ರಜ್ಞೆಯನ್ನು ಬೆಳೆಸುತ್ತದೆ.

ಆ ಪ್ರಜ್ಞೆ ಯಾವುದೆಂದು ತಿಳಿಯಲು ನೀವು ಪುಸ್ತಕವನ್ನ ಎಡತಾಕಬೇಕು. ಮಕ್ಕಳು ಮಾತ್ರವಲ್ಲ ದೊಡ್ಡವರೂ ಸಹ ಓದಬಹುದಾದ ಪುಸ್ತಕ ಇದೆಂದು ಹೇಳುತ್ತಾ ಈ ಸೋಮು ಮೇಷ್ಟ್ರ ಮುಂದಿನ ಮಕ್ಕಳ ಕಥಾ ಸಂಕಲನ ಇನ್ನಷ್ಟು ಚಮತ್ಕಾರ ಮಾಡಲಿ ಹಾಗೂ ಮಕ್ಕಳ ಪುಸ್ತಕದ ಬ್ಯಾಗಿನೊಳಗೆ ಚಾಕಲೇಟಿನಂತೆ  ಬಂದು ಸೇರಿ ಅವರ ಕಥಾ ಓದಿನ ಹರವನ್ನು, ರುಚಿಯನ್ನು ಮತ್ತಷ್ಟು ಹೆಚ್ಚಿಸುವಂತಿರಲಿ. 

ಹಾಗೆಯೇ ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿರುವ ನೂತನ ಬರಹಗಾರರು (ನನ್ನನ್ನೂ ಸೇರಿದಂತೆ) ಸೋಮು ಅವರ ಮಾತುಗಳಾದ “ಕುಲಾವಿ ಹೆಣೆಯುವ ಕಸರತ್ತು” ಬರಹವನ್ನು ಓದಲೇಬೇಕು. ಇದು ನಮ್ಮನ್ನು ನಾವು ರಚನಾ ಪ್ರಜ್ಞೆಯೊಳಗೆ ಪ್ರಶ್ನಿಸಿಕೊಳ್ಳುವ ಹಾಗೂ ಹುರಿಗೊಳಿಸಿಕೊಳ್ಳುವ ಪ್ರಕ್ರಿಯೆಯಷ್ಟೆ.

‍ಲೇಖಕರು Admin

August 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: