ವಿಜಯಲಕ್ಷ್ಮಿ ಸತ್ಯಮೂರ್ತಿ ಹಾಗೂ ಬಾಲಾಜಿ ರಾವ್ ಎನ್ ಅವರ ನೇತೃತ್ವದ ‘ಸೌರಭ ಫೌಂಡೇಷನ್’ ನ ಉದ್ಘಾಟನಾ ಕಾರ್ಯಕ್ರಮ ಬೆಂಗಳೂರಿನಲ್ಲಿ ಜರುಗಿತು.
ಶಾಸನ ತಜ್ಞೆ, ಭಾಷಾಂತರ ನಿರ್ದೇಶನಾಲಯದ ಉಪ ನಿರ್ದೇಶಕರಾದ ಡಾ ಸ್ಮಿತಾ ರೆಡ್ಡಿ ಅವರು ಉದ್ಘಾಟಿಸಿದರು. ಖ್ಯಾತ ಸಂಗೀತ ನಿರ್ದೇಶಕರಾದ ಡಾ ಜಯಶ್ರೀ ಅರವಿಂದ್ ಅವರು ಲಾಂಛನವನ್ನು ಬಿಡುಗಡೆ ಮಾಡಿದರು.
ಖ್ಯಾತ ಗಾಯಕರಾದ ಶಶಿಧರ ಕೋಟೆ ಅವರು ಶೀರ್ಷಿಕೆ ಗೀತೆ ಅನಾವರಣ ಮಾಡಿದರು, ಪತ್ರಕರ್ತ ಜಿ ಎನ್ ಮೋಹನ್ ಅವರು ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಸಮಗ್ರ ಕವನ ಸಂಕಲನ ‘ಭ್ರಮರ ಬಂಧು’ ಕೃತಿಯನ್ನು ಬಿಡುಗಡೆ ಮಾಡಿದರು.
ಖ್ಯಾತ ಅಂಕಣ ಬರಹಗಾರರಾದ ಎಸ್ ಷಡಕ್ಷರಿ. ಹಿರಿಯ ಸಾಹಿತಿ ದೊಡ್ಡರಂಗೇಗೌಡ ಅವರು ಮುಖ್ಯ ಅತಿಥಿಗಳಾಗಿದ್ದರು. ರಂಗಾಯಣದ ವಿಶ್ರಾಂತ ನಿರ್ದೇಶಕರಾದ ಡಾ ಬಿ ವಿ ರಾಜಾರಾಂ ಅವರು ಅಧ್ಯಕ್ಷತೆ ವಹಿಸಿದ್ದರು.
ಪ್ರಣತಿ ಪ್ರಾರ್ಥನಾ ಗೀತೆ ಹಾಡಿದರು. ಹೇಮಶ್ರೀ ಗೀತಗಾಯನ ನಡೆಸಿಕೊಟ್ಟರು. ವಿಮಲಾ ಎಸ್ ಸ್ವಾಗತಿಸಿದರು, ಜಯಶ್ರೀ ರಾಜು ವಂದಿಸಿದರು. ಪ್ರವೀಣಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.

ಛಾಯಾಗ್ರಾಹಕ ವೆಂಕಟೇಶ ಮೂರ್ತಿ ಅವರು ಕಂಡಂತೆ ಕಾರ್ಯಕ್ರಮ ಹೀಗಿತ್ತು-













0 ಪ್ರತಿಕ್ರಿಯೆಗಳು