ಸಮಕಾಲೀನ ವಿಷಯಗಳಿಗೆ ಪ್ರವೇಶಿಕೆಯಾಗುವಂತ, ಕಿರು ಅವಧಿಯಲ್ಲಿ ಓದಿ ಮುಗಿಸಬಹುದಾದ, ಅಂಗೈಯಗಲದ ಕಿರು ಹೊತ್ತಿಗೆಗಳನ್ನು ಋತುಮಾನ ತರಲಿಚ್ಛಿಸಿದೆ. ಈ ‘ಪ್ರಸ್ತುತ’ ಸರಣಿಯ ಮೊದಲ ಕೃತಿ ನೊಬೆಲ್ ವಿಜೇತ ದಂಪತಿ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡುಫ್ಲೋ ಅವರ ವಲಸೆಯ ಕುರಿತ ಚಿಂತನೆಗಳ “ನಿಂತ ನೆಲವೇ ಬಾಯ್ಬಿಟ್ಟಾಗ” .
ಟಿ. ಎಸ್. ವೇಣುಗೋಪಾಲ್ ಮತ್ತು ಶೈಲಜಾ ದಂಪತಿ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುರೋಪ್ ಮತ್ತು ಅಮೆರಿಕೆಯ ರಾಜಕಾರಣದಲ್ಲಿ ವಲಸೆ ಅನ್ನೋದು ಮುಖ್ಯ ವಿಷಯ. ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ರಾಜಕೀಯವಾಗಿ ಇಂದು ಇದರ ಪ್ರಭಾವ ವಿಪರೀತವಾಗಿದೆ. ಐರೋಪ್ಯ ದೇಶಗಳಲ್ಲಿನ ಮುಖ್ಯವಾಹಿನಿಯ ಪಕ್ಷಗಳಿಗೂ ಇದನ್ನು ನಿಭಾಯಿಸುವುದಕ್ಕೆ ಕಷ್ಟವಾಗುತ್ತಿದೆ. ಅವುಗಳು ಪ್ರತಿಪಾದಿಸುತ್ತಿರುವ ಉದಾರವಾದಿ ಪರಂಪರೆಯೇ ಬೇರೆ, ಅದು ಗಡಿಯಲ್ಲಿ ಕಾಣುತ್ತಿರುವ ಅಪಾಯವೇ ಬೇರೆ. ಅವೆರಡನ್ನು ಹೊಂದಿಸಿಕೊಂಡು ಹೋಗುವುದಕ್ಕೆ ಅವು ಹೆಣಗಾಡುತ್ತಿವೆ.
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅದರ ತೀವ್ರತೆ ಅಷ್ಟು ಇಲ್ಲ. ಆದರೂ ದಕ್ಷಿಣ ಆಫ್ರಿಕಾದಲ್ಲಿ ಜಿಂಬಾಬ್ವೆಯ ನಿರಾಶ್ರಿತರ ಮೇಲೆ ನಡೆಯುತ್ತಿರುವ ಕಾಳಗವಾಗಲಿ, ಬಾಂಗ್ಲಾದೇಶದಲ್ಲಿ ರೋಹಿಂಗ್ಯಾ ಬಿಕ್ಕಟ್ಟಾಗಲಿ, ಮತ್ತು ಭಾರತದಲ್ಲಿ ಅಸ್ಸಾಮಿನ ಪೌರತ್ವ ಮಸೂದೆಯಾಗಲಿ ಇವೆಲ್ಲಾ ಅದಕ್ಕೆ ಗುರಿಯಾದವರಿಗೆ ಆತಂಕಕಾರಿ ವಿಷಯಗಳೇ.
ಹಾಗಾದರೆ ನಿಜವಾಗಿಯೂ ಆತಂಕಕ್ಕೆ ಕಾರಣಗಳಿವೆಯೇ ? ಇತಿಹಾಸ ಮತ್ತು ಪ್ರಸ್ತುತ ಅಂಕಿಅಂಶಗಳು ನಿಜವಾಗಿಯೂ ಏನು ಹೇಳುತ್ತದೆ ? ಜಾಗತಿಕವಾಗಿ ಇರುವ ಈ ವಲಸೆ ಸಮಸ್ಯೆಯನ್ನು ನಾವು ನೋಡಬೇಕಿರುವುದು ಹೇಗೆ ? ಎಂಬೆಲ್ಲಾ ಪ್ರಶ್ನೆಗಳಿಗೆ ಪುಟ್ಟ ಕಿಟಕಿ ಈ ಕೃತಿ. ಕೊಳ್ಳಲು ಕೊಂಡಿ : https://store.ruthumana.com/product/ninta-nelave-baibittaga/
ಎಲ್ಲಾ ಪುಸ್ತಕದಂಗಡಿಯಲ್ಲೂ ಲಭ್ಯವಿರುತ್ತದೆ. ಇ ಪುಸ್ತಕ RUTHUMANA App ನಲ್ಲಿ ಲಭ್ಯ.
ಬೆಲೆ – ಮುದ್ರಿತ ಪುಸ್ತಕ : ರೂ. ೧೦೦ | ಇ ಪುಸ್ತಕ : ರೂ. ೫೦
0 ಪ್ರತಿಕ್ರಿಯೆಗಳು