ವಿಜಯಶ್ರೀ ಎಂ ಹಾಲಾಡಿ
**
ಬೆಟ್ಟಕ್ಕೊಂದು ರೋಡು ಮಾಡಿ
ಅಲ್ಲೇ ದೊಡ್ಡ ರೆಸಾರ್ಟ್ ಮಾಡಿ
ಎಷ್ಟೊಂದೆಲ್ಲ ಕುಣಿದು ಹಾರಿ
ಕೊನೆಗೂ ಏನಾಯ್ತು!
ಬೆಟ್ಟ ಜರಿದು ಬಿದ್ಹೋಯ್ತು!
ಅಗಲ ಅಗಲ ರಸ್ತೆ ಮಾಡಿ
ಬದಿಯ ಮರಗಳ ಕಡಿದು ಹಾಕಿ
ಹೊಂಡ ಗುಂಡಿ ತೋಡಿ ತೋಡಿ
ಕೊನೆಗೂ ಏನಾಯ್ತು!
ಊರಿಗೆ ಊರೇ ತೊಳೆದ್ಹೋಯ್ತು!
ಕಾಡನ್ನೆಲ್ಲ ಬರಿದು ಮಾಡಿ
ಜೀವಜಂತು ಕೊಂದು ಹಾಕಿ
ಅವುಗಳ ಮನೆಯ ನಾಶ ಮಾಡಿ
ಕೊನೆಗೂ ಏನಾಯ್ತು!
ಆನೆ ಹುಲಿಯು ಕರಡಿ ನವಿಲು
ಊರಿಗೆ ಬಂದಾಯ್ತು!
ಒಮ್ಮೆ ಕುಂತು ಒಮ್ಮೆ ನಿಂತು
ತಣ್ಣೀರಾದರು ತಣಿಸಿ ಕುಡಿದು
ಯೋಚನೆ ಮಾಡೋಣ
ಎಲ್ಲರ ಬದುಕಿಸಿ
ಎಲ್ಲರು ಬದುಕುತ
ನೆಮ್ಮದಿ ಹೊಂದೋಣ
0 ಪ್ರತಿಕ್ರಿಯೆಗಳು