
ಉದಯಕುಮಾರ ಹಬ್ಬು
ದ ಕ ಜಿಲ್ಲೆಯ ತಾಕೊಡೆ ಗ್ರಾಮದ ಪೋರಿ ೨೦ ವರ್ಷಗಳ ಹಿಂದೆ ಮದುವೆಯಾಗಿ ದೂರದ ಮುಂಬಯಿಗೆ ಬಂದಾಗ ಭಾಷೆ ಜನರು ಪರಿಸರ ರೀತಿರಿವಾಜುಗಳು ಸಂಪೂರ್ಣ ಅಪರಿಚಿತವಾಗಿದ್ದವಳು ಈಗ ಲೋಕಲ್ ಟ್ರೈನ್ ನಲ್ಲಿ ದಿನನಿತ್ಯ ಪ್ರಯಾಣ ಮಾಡಿ ಇಡಿ ಮುಂಬಯಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಮುಂಬಯಿಕಾರ್ತಿ ಆಗಿಬಿಟ್ಟಿದ್ದಾರೆ.
ಮುಂಬಯಿ ಲೋಕಲ್ ಟ್ರೈನ್ ನ ವಿಶ್ವದರ್ಶನ ಮಾಡಿಸಿ ನಮ್ಮಂತಹ ಮುಂಬಯಿ ಪರಿಚಯವಿರದವ ಓದುಗರಿಗೆ “ಆಮ್ಚಿ ಮುಂಬಯಿ” ಎಂಬ ಭಾವನೆ ಮೂಡುವಂತೆ ಮಾಡಿದ್ದಾರೆ. ಜಯಂತ ಕಾಯ್ಕಿಣಿ ಮುಂಬಯಿ ಒಂದು ಪಾರ್ಶ್ವದ ಬಗ್ಗೆ ಕವಿಯಾಗಿ ಕಥೆಗಳಲ್ಲಿ ಚಿತ್ರಿಸಿದ್ದರೆ ಮುಂಬಯಿ ನಿವಾಸಿಯಾಗಿ ಲೋಕಲ್ ಟ್ರೈನಿನಲ್ಲಿನ ಅಭೂತಪೂರ್ವ ಅನುಭವದ ಮೂಸೆಯಿಂದ ಅಷ್ಟಲ್ಲದೆ ಅನೇಕ ವರ್ಷಗಳ ವಾಸ್ತವ್ಯದ ಅನುಭವದಿಂದ ಲೋಕಜ್ಞಾನ ಅಪಾರವಾಗಿ ಪಡೆದು ಓದುಗರ ಮುಂದಿಟ್ಟಿದ್ದಾರೆ ಇನ್ನು ಮುಂದೆ ಮುಂಬಯಿಗೆ ಹೋಗುವವರಿಗೆ ಲೈಟ್ ಹೌಸಿನಂತೆ ದಾರಿ ದೀಪವಾಗಬಲ್ಲದು.
ಮುಂಬಯಿಯ ಅವಸರದ ನಗರದ ಬದುಕಿನಲ್ಲಿ ಸೀಟು ಸಿಗದೆ ನಿಂತೆ ಪಯಣಿಸಬೇಕಾದ ಲೋಕಲ್ ಟ್ರೈನಿನಲ್ಲಿ ಅನಿತಾ ಪಡೆದ ಅನುಭವ ಅಪಾರ. ಅನುಭವಗಳನ್ನು ಸ್ವಾರಸ್ಯಕರ ಕಥಾನಕವಾಗಿ ಬೆಳೆಸಿ ಓದುಗರ ಆಸಕ್ತಿಯನ್ನು ಕೊನೆಯವರೆಗೂ ಉಳಿಸಿಕೊಳ್ಳುವ ಕುಸುರಿ ಕಲೆಗಾರಿಕೆ ಈ ಬರಹಗಳಲ್ಲಿದೆ ಮುಂಬಯಿ ಮತ್ತು ಮುಂಗಾರು ಮಳೆ ಮಳೆಯ ಸೊಗಸಾದ ನವಿರಾದ ಅನುಭವಗಳ ಸಂಕಥನ ಮುದ ನೀಡುತ್ತದೆ
೪೭ ಲೇಖನಗಳಿವೆ. ಎಲ್ಲ ಲೇಖನಗಳೂ ಅನುಭವಜನ್ಯ. ಶ್ರೇಷ್ಠ ಮಟ್ಟದ ಉಪಯುಕ್ತವಾದ ಬರಹಗಳು. ಯಾ ಪ್ರಬಂಧಗಳು. ಎಲ್ಲವೂ ಉದಯವಾಣಿ, ಹೊಸ ದಿಗಂತ, ತರಂಗ, ಮಲ್ಲ ದಂತಹ ಪತ್ರಿಕೆಗಳಲ್ಲಿ ಪ್ರಕಟವಾದ ಪ್ರಬಂಧಗಳೇನ
ಯಾರು ಬರಲಿ, ಹೋಗಲಿ ಬದುಕು ನಿಲ್ಲುವುದಿಲ್ಲ
ಲೇಖನದಲ್ಲಿ ಕನ್ನಡದ ಹುಡುಗಿಯೊಬ್ಬಳು ಪ್ರಿಯಕರನಿಂದ ದೂರ ಸರಿಸಲ್ಪಟ್ಟು ಅವಳು ಪ್ರಿಯಕರನಿಗೆ ತನ್ನನ್ನು ಅರ್ಥಮಾಡಿಕೊ ಎಂದು ಹೊರಗಿನ ಪರಿವೆಯಿಲ್ಲದೆ ಲೋಕಲ್ ಟ್ರೈನಿನಲ್ಲಿ ಪ್ರವಾಸ ಮಾಡುತ್ತಿದ್ದೇನೆಂಬ ಅರಿವಿಲ್ಲದೆ ಕಣ್ಣೀರು ಸುರಿಸುತ್ತಿದ್ದಾಗ ಅನಿತಾ ಅವರಿಗೆ ಸಮಾಧಾನದ ಮಾತಾಡಿ ಸಾಂತ್ವನ ನೀಡುತ್ತಾರೆ. ಇಂತಹ ಮಾನವೀಯ ಸನ್ನಿವೇಶ ಅನೇಕ ಇವೆ ಈ ಲೇಖನಗಳಲ್ಲಿ. ಪ್ರಾರಂಭದ ಅನನುಭವ ಮುಜುಗರ ಸಂಕೋಚ ಇವೆಲ್ಲವನ್ನೂ ಮುಂಬಯಿ ಹೋಗಲಾಡಿಸಿದೆ. ಮರಾಠಿ ಜನರ ಸಂಸ್ಕೃತಿಯ ಅಳವಾದ ಪರಿಚಯ ನಮಗಾಗುತ್ತದೆ. ಮುಂಬಯಿ ಯಾವ ಜಾತಿ ಮತ ಭೇದಗಳನ್ನು ಮಾಡದೆ ವಲಸೆ ಬಂದ ಎಲ್ಲರಿಗೂ ಅನ್ನದ ದಾರಿಯನ್ನು ತೋರಿಸುತ್ತಾರೆ. ಮಹಿಳೆ ಮುಂಬಯಿಯಲ್ಲಿ ನಿಜ ಸ್ವಾತಂತ್ರ್ಯ ವನ್ನು ಅನುಭವಿಸುತ್ತಾಳೆ
೪೭ ಲೇಖನಗಳಲ್ಲಿ ನಗರ ಮತ್ತು ಹಳ್ಳಿ ಬದುಕಿನ ತುಲನೆಗಳನ್ನು ಮಾಡುತ್ತ ಹಲವು ಬಾರಿ ಊರಿನ ಬಗ್ಗೆ ನಾಸ್ಟಾಲ್ಜಿಕ್ ಆಗುತ್ತಾರೆ. ಹಳ್ಳಿಯ ಜನರ ಮುಗ್ಧತೆ ನಗರದ ಪುರುಸೊತ್ತಿಲ್ಲದ ಬದುಕು ಮನುಷ್ಯರನ್ನು ದುಡಿಯುವ ಯಂತ್ರವನ್ನಾಗಿ ಮಾಡಿದ್ದರೂ ಮುಂಬಯಿ ಕನ್ನಡ ಸಂಘ ಮಾತುಂಗದಲ್ಲಿದ್ದು ಅಲ್ಲಿ ನಡೆಯುವ ಸಾಹಿತ್ಯದ ಸಂಗೀತ ನಾಟಕ ಕಾರ್ಯಕ್ರಮಗಳು ಊರಿನ ನೆನಪನ್ನು ಗಟ್ಟಿಗೊಳಿಸುತ್ತವೆ ಮುಂಬಯಿ ಡಬ್ಬಾವಾಲಾರ ಗಾಥೆ ನಿಜಕ್ಕೂ ರೊಚಕವಾಗಿದೆ. ಪ್ರಿನ್ಸ್ ಚಾರ್ಲ್ಸ್ ಡಬ್ಬಾವಾಲಾರನ್ನು ಭೇಟಿಯಾಗಲು ಅವರು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಭೇಟಿಯಾದ ಕಥಾನಕ ನಿಜಕ್ಕೂ ಡಬ್ಬಾವಾಲರ ಬಗ್ಗೆ ಅಭಿಮಾನ ಮೂಡುತ್ತದೆ.

ಮುಂಬಯಿ ಊರಿನವರಿಗೆ ಹೇಗೆ ಕಾಣುತ್ತದೆ ಮುಂಬಯಿಯಿಂದ ಬಂದ ನೆಂಟರನ್ನು ನೋಡುವ ಬಗೆ ಸ್ವಾರಸ್ಯಕರವಾಗಿದೆ.
ಲೋಕಲ್ ಟ್ರೈನಿನ ಮಹಿಳಾ ಬೋಗಿಯ ಬಗ್ಗೆ ಅಲ್ಲಿನ ಸೃಷ್ಟಿಯಾದ ಗೆಳತಿಯರ ಬಗ್ಗೆ ಸ್ವಾರಸ್ಯಕರ ಸಂಕಥನಗಳಿವೆ
ಮುಂಬಯಿಯ ನಿತ್ಯ ಆಗು ಹೋಗುವ ನೆರೆ ಇರಲಿ ದೊಂಬಿ ಇರಲಿ ಅಂಗಡಿಗಳ ವ್ಯವಹಾರವಿರಲಿ ಈ ಎಲ್ಲ. ವಿಷಯಗಳನ್ನು ಸೂಕ್ಷ್ಮವಾಗಿ ನೋಡುವ ಕಣ್ಷುಗಳಿವೆ ಅನಿತಾರಿಗೆ ಮುಂಬಯಿ ಬದುಕು ಬದುಕಿನ ಬಗ್ಗೆ ಅನೇಕ ಒಳನೋಟಗಳನ್ನು ಕೊಡುವ ಒಳಗಣ್ಷುಗಳ ದರ್ಶನ ಈ ಬರಹಗಳಲ್ಲಿದೆ.
ಆಯ್ದ ವಿಷಯಗಳಿಗೆ ಅನುಭವದ ನೆಲೆಗಟ್ಟಿದ್ದು ಅದನ್ನು ಸ್ವಾರಸ್ಯಕರ ರೀತಿಯಲ್ಲಿ ನಿರೂಪಿಸುವ ಪ್ರತಿಭೆ ಅನಿತಾ ಅವರಲ್ಲಿದೆ
ಈ ಒಂದು ಉದಾಹರಣೆ ನೋಡಿ
” ಮನೆಯ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡೇ ಬೆಳಿಗ್ಗಿಂದ ಸಂಜೆಯವರೆಗೆ ದುಡಿದು ಮನೆಗೆ ಮರಳುವ ಮಹಿಳೆಯರನ್ನು ಕಂಡಾಗ ನಿಜಕ್ಕೂ ಹೆಮ್ಮೆಯೆನಿಸುವುದು. ಅದೂ ಕೂಡ ಮುಂಬಯಿ ಲೋಕಲ್ ಟ್ರೈನ್ ಪ್ರಯಾಣವೆಂದರೆ ಸುಲಭ ಸಾಧ್ಯವೆ? ನಿಲ್ದಾಣದಲ್ಲಿ ರೈಲು ನಿಲ್ಲುವುದಕ್ಕಿಂತ ಮುಂಚೆಯೇ ಸಲೀಸಾಗಿ ಹತ್ತಿ ಇಳಿಯುವ ಲಲನೆಯರನ್ನು ಕಂಡಾಗ, ಒಮ್ಮೆಗೆ ಎಲ್ಲಿ ಬಿದ್ದುಬಿಟ್ಟಾರೋ..! ಎಂದು ಮೈ ಜುಮ್ಮೆನಿಸಿದರೂ , ಅವರ ಧೈರ್ಯಕ್ಕೆ ಎನ್ನಲೇಬೇಕು! ತಾನಿರುವ ಪರಿಸರಕ್ಕೆ ತಕ್ಕಂತೆ ಹೊಂದಿಕೊಂಡು ನಡೆದರೆ ಮಾತ್ರ ಬದುಕು ಸುಗಮ. ಎಂಬ ನಾಣ್ನುಡಿಯನ್ನು ಮಹಿಳೆ ತನ್ನ ಬದುಕಿನಲ್ಲಿ ಎಷ್ಟು ಬೇಗ ಅಳವಡಿಸಿಕೊಳ್ಳುತ್ತಾಳೆ. ನಮ್ಮವರೆನ್ನುವ ಯಾರಿಗೂ ಅವಲಂಬಿತರಾಗದೆ ಯಾವುದೇ ಸಂದರ್ಭದಲ್ಲಿ ಎಂಥ ಕ್ಲಿಷ್ಟಕರ ಸನ್ನಿವೇಶಗಳನ್ನೂ ಎದುರಿಸುವಲ್ಲಿ ಶಕ್ತರಾಗಿರುತ್ತೇವೆ ಎಂಬುದಕ್ಕೆ ಮುಂಬಯಿ ಮಹಿಳೆಯರೇ ಜೀವಂತ ಸಾಕ್ಷಿ.” ಮುಂಬಯಿಯಲ್ಲಿ ಮಹಿಳೆಯ ಸ್ವಾತಂತ್ರ್ಯ ,” ಬರಹದಿಂದ.
ಪಿಕ್ ಪಾಕೆಟ್, ಬದಲಾಗುತ್ತಿರುವ ಫ್ಯಾಶನ್ ವಿನ್ಯಾಸ ಈ ಮುಂತಾದ ವಿಷಯಗಳೊಂದಿಗೆ ನನಗೆ ತುಂಬ ಇಷ್ಟವಾದ ಬರಹ “ಹಕ್ಕಿಗಳ ಜೊತೆಯಲ್ಲಿ ಸವಿ ರಾಗದ ಸಲ್ಲಾಪ” ಈ ಬರಹದಲ್ಲಿ ಅನಿತಾ ಹಕ್ಕಿಗಳೊಂದಿಗೆ ಗಾಢ ಸಂಬಂಧ ಬೆಳೆಸಿಕೊಂಡು ಪರಸ್ಪರ ಕಷ್ಟ ಸುಖ ಹಂಚಿಕೊಳ್ಳುವ ಸಂಗಾತಿಗಳಂತೆ ಕಾವ್ಯಮಯವಾಗಿ ನಿರೂಪಿಸಿದ್ದಾರೆ
ಪ್ರಬಂಧದ ಶೀರ್ಷಿಕೆಗಳೂ ತುಂಬ ಅರ್ಥಪೂರ್ಣ ಮತ್ತು ಸಟಕ್ಕನೆ ಮನಸೆಳೆಯುವಂಥವು
ಮುಂಬಯಿಂದ ಬಂದ ನೆಂಟರನ್ನು ನೋಡುವಾಗ ಹಳ್ಖಿಯವರಿಗೆ ಭ್ರಮನಿರಸನವಾಗುತ್ತದೆಯೊ ಏನೋ ಕಟಕಿ ವ್ಯಂಗ್ಯದ ತಮಾಷೆಯ ಮಾತುಗಳನ್ನು ಹರಿಬಿಡುತ್ತಾರೆ. ಯಾವಾಗ ವಾಪಸ್ಸು ಹೋಗ್ತೀಯಾ? ಏನ್ ತಂದಿದ್ದೀಯಾ? ಪಾರ್ಲೆ ಜಿನ ಅದನ್ನು ಮುಂಯಿಂದ ತರಬೇಕಿತ್ತಾ? ಈ ಮುಂತಾದ ಮಾತುಗಳು. ಮುಂಬಯಿ ಹುಡುಗಿಯರು ನಕಲಿ ಆಭರಣಗಳನ್ನೆ ಧರಿಸೋದು. ಇದನ್ನು ಕಂಡ ಊರವರು ಇವರು ದಿವಾಳಿಯಾಗಿದ್ದಾರೆ ಎಂದು ಕುಲುಕುಲು ನಗುತ್ತಾರೆ ಮುಂಬಯಿ ಲೋಕಲ್ ಟ್ರೈನಿನ ಅನುಭವ ಅವರೊಗಿಲ್ಲ
ಮುಂಬಯಿಯಲ್ಲಿ ಮನೆಯ ವಿಳಾಸ ಹುಡುಕೋದೇ ಒಂದು ಹರಸಾಹಸ. ಚಾಳು ಮನೆ ಹಾಗೂ ಕಟ್ಟಡದ ಮಾಳಿಗೆಯ ಮನದಯಂತಹ ಗೂಡುಗಳ ವ್ಯತ್ಯಾಸವನ್ನು ತುಂಬ ನವಿರಾಗಿ ಚಿತ್ರಿಸುತ್ತಾರೆ. ಮುಂಬಯಿಯಲ್ಲಿ ಆಚರಿಸುವ ನವರಾತ್ರಿ, ದೀಪಾವಳಿ ಊರಿನ. ಜಾನಪದ ಸಂಸ್ಕೃತಿಯ ಆಚರಣೆಗಿಂತ ಹೇಗೆಭಿನ್ನ ಎಂದು ಕರಾರುವಕ್ಕಾಗಿ ಬರೆಯುತ್ತಾದೆ.
ಕಾಯಕವೆ ಈ ನಗರದ ಲವಲವಿಕೆ ಕೊರೊನಾ ಲಾಕ್ ಡೌನ್ ಮುಂನಯಿಕಾರರನ್ನು ಮನೆಯಲ್ಲಿ ಕೆಲಸವಿಲ್ಲದೆ ಬಂಧಿಯನ್ನಾಗಿಸಿತು
ಈ ನಗರದಲ್ಲಿ ಇಂದಿಗೂ ಬಹುತೇಕ ಮಂದಿ ತಗಡು ಶೀಟು ಹೊದಿಸಿದ ಗೂಡಿನಂಥಹ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ದಿನವಿಡೀ ತಡರಾತ್ರಿಯವರೆಗೆ ದುಡಿದು ಬಂದು ರಾತ್ರಿ ಒಂದಿಷ್ಟು ಹೊತ್ತು ವಿಶ್ರಮಿಸುವುದಕ್ಕೆ ಮತ್ತೆ ಮನೆಯನ್ನುಅವಲಂಬಿಸುತ್ತಿದ್ದ ಇವರು ಲಾಕ್ ಡೌನ್ ಸಮಯದಲ್ಲಿ ಅಂಥ ಮನೆಗಳಲ್ಲಿ ಬೇಸಿಗೆಯ ವಿಪರೀತ ಧಗೆಯನ್ನು ಸಹಿಸಿಕೊಳ್ಳುತ್ತ ದಿನದ ಇಪ್ಪತ್ನಾಲ್ಕೂ ಗಂಟೆಯನ್ನೂ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿತ್ತು
ಮುಂಬೈ ನಗರವು ನಮ್ಮನ್ನು ಸಾಕಿ ಸಲಹುತ್ತಿರುವ ಮಾತೆ. ಈ ಅದ್ಭುತ ನಗರಕ್ಕೆ ಕಾಲಿಟ್ಟ ಮೇಲೆಯೇ, ‘ಮನುಷ್ಯ ಜಾತಿಯೊಂದೇ ಎನ್ನುವ ಸತ್ಯ ಅರಿವಾಗಿದ್ದು, ಇಲ್ಲಿ ಜಾತಿ ಮತ ಧರ್ಮಗಳ ಭೇದಗಳು ಮಮಸ್ಸುಗಳನ್ನು ಮೈಲಿಗೆಯಾಗಿಸುವುದಿಲ್ಲ ನಾವು ಹೇಗಿದ್ದರೂ ಸಮಾಜ ನಮ್ಮನ್ನು ಪ್ರಶ್ನೆ ಮಾಡುವುದಿಲ್ಲ ತಡರಾತ್ರಿಯಲ್ಲೂ ಮಹಿಳೆಯೊಬ್ಬಳು ನಿರ್ಭೀತಿಯಿಂದ ಓಡಾಡುತ್ತಾಳೆ ಎಂದರೆ ಅದು ಮುಂಬಯಿ ನಗರಿಯಲ್ಲಿ ಮಾತ್ರ” ಪುಟ ಸಂಖ್ಯೆ ೧೦೩
ಅನಿತಾರ ಜೀವನಪ್ರೇಮ, ಲವಲವಿಕೆ ಧನಾತ್ಮಕ ಜೀವನ್ಮುಖಿ ನಿಲುವು ಎಂತಹ ಕ್ಲಿಷ್ಟ ಪರಿಸ್ಥೊಯಿಯನ್ನು ನಿಭಾಯಿಸಿಕೊಂಡು ಹೋಗುವ ವಾಕಚಕ್ಯತೆ ಅವಳನ್ನು perfect woman ಆಗಿ ಮುಂಬಯಿ ರೂಪಿಸಿದೆ
ನಿತ್ಯದ ಪ್ರಯಾಣಿಕರ ಒಡನಾಟಗಳಲ್ಲಿ ಅನಿತಾ ನವನವೋನ್ಮೇಷಶಾಲಿನಿ ಪ್ರತಿಭಾ ಆಗಿ ಬದುಕನ್ನು ಅರ್ಥಪೂರ್ಣವಾಗಿ ಸಾರ್ಥಜವಾಗಿ ಕಳೆಯುತ್ತಿದ್ದಾರೆ. ಇದಕ್ಕೆ ಅವರು ಮುಂಬಯಿ ಬದುಕಿಗೆ ಋಣಿ.

ಟ್ರೈನ್ ಹತ್ತುವುದೂ ಒಂದು ಕೌಶಲ್ಯವನ್ನು ಬೇಡುತ್ತದೆ
“ಮುಂಬೈ ಲೋಕಲ್ ಟ್ರೈನಿನಲ್ಲಿ ಪ್ರಯಾಣಿಸುವುದೆಂದರೆ ಅದೇನು ಸುಲಭದ ವಿಷಯವೆ? ರೈಲು ಬರುವುದಕ್ಕೆ ಇನ್ನೇನು ಒಂದು ನಿಮಿಷ ಇದೆ ಎನ್ನುವಾಗ ಯುದ್ಧಕ್ಕೆ ಸನ್ನದ್ಧರಾಗಯವಂತೆ, ಸೀರೆ ಉಟ್ಟಿದ್ದರೆ ಸೆರಗನ್ನು ಎದುರಿಗೆ ತಂದುಕೊಳ್ಳಬೇಕು. ಕೈಯಲ್ಲಿರುವ ಬ್ಯಾಗನ್ನು ಮುಂದೆ ತಂದು ಎರಡೂ ಕೈಗಳಿಂದಲೂ ಬಿಗಿಯಾಗಿ ಹಿಡಿದಿಟ್ಟುಜೊಳ್ಳಬೇಕು ಹೆರಳುಗಳನ್ನು ಗಾಳಿಯಲ್ಲಿ ವಿಹರಿಸಲಿಕ್ಕೆ ಬಿಟ್ಟಿದ್ದೇ ಆದಲ್ಲಿ ಅಂಬೊಡೆ ಹಸಕಿಕೊಳ್ಳಬೇಕು ಇಲ್ಲವಾದರೆ ಮುಂದಕ್ಕೆ ತಂದುಕೊಳ್ಳಬೇಕು. ಆ ಮೇಲೆ ತೊಟ್ಟ ಚಪ್ಪಲಿ ಮೇಲೆ ಗಮನವಿರಬೇಕು. ಇಷ್ಟಾದ ಮೇಲೆ ರೈಲು ಬಂತು ಅಂತಿಟ್ಟುಕೊಳ್ಳಿ.ಹತ್ತುವಾಗ ಬಾಗಿಲ ಮಧ್ಯದ ಜಾಗದಲ್ಲಿ ನಿಂತುಕೊಳ್ಳಬಾರದು. ಯಾಕೆಂಧೆ ರೈಲ್ವೆಯಿಂದ ಇಳಿವವರ ರಭಸಕ್ಕೆ ಅವರೊಡನೆ ನಾವೂ ಕೊಚ್ಚಿಕೊಂಡು ಹೋದೇವು ! ಬಾಗಿಲ ಬದಿಯಲ್ಲಿ ನಿಂತು ಪ್ರಯಾಣಿಕರು ಇಳಿದಾಕ್ಚಣ ಹತ್ತಿಬಿಡಬೇಕು. ಏಕೆಂದರೆ ಅಲ್ಲಿ ಇಳಿದು ಹತ್ತುವುದಕ್ಕೆ ಇರುವುದು ಅರ್ಧನಿಮಿಷ ಕಾಲಾವಕಾಶ ಮಾತ್ರ. ಹತ್ತಿ ಇಳಿಯುವ ತರಾತುರಿಯಲ್ಲಿ ಯಾರಾದರೂ ಬಿದ್ದರೆ ಮೆಟ್ಟಿಕೊಂಡು ಹೋಗುತ್ತಾರೆಯೇ ವಿನಃ ಎತ್ತಿಕೊಂಡು ಉಪಚರಿಸುವುದಕ್ಕೆ ಹತ್ತಿರ ಬರುವವರು ಕಡಿಮೆ.ದೂರದಲ್ಲಿ ನಿಂತವರು ಕೂಡ ಬಿದ್ದವರನ್ನು ರಕ್ಷಣೆ ಮಾಡುವುದಕ್ಕಿಂತ ವಿಡಿಯೋ ಮಾಡಿ ವ್ಯಾಟ್ಸ್ಯಾಪಿನಲ್ಲಿ ಜಾಕಿ ಹೊಸ ಸುದ್ದಿಯನ್ನು ತಾನೇ ಮೊದಲು ನೀಡಿದ್ದೇ ಮಹಾ ಸಾಧನೆ ಎಂಬಂತೆ ಎಲ್ಲರಿಗೂ ಹಂಚುತ್ತಾನೆ.”
ಇನ್ನೂ ಅನೇಕ ಮಹತ್ವದ ವಿಷಯಗಳಿವೆ. ಓದಿ ತಿಳಿಯಿರಿ.
ಅನಿತಾ ನಿಮಗೆ ನಾನು ಆಭಾರಿ ಇಂತಹ ಪೊರ್ಲುದಾ ಬೂಕು ಕೊಟ್ಟು ನನಗೆ ಉಪಕಾರ ಮಾಡಿದ್ದೀರಿ.
ಒಟ್ಟಾರೆಯಾಗಿ ಮುಂಬಯಿ ದರ್ಶನ ನಮಗಾಗುತ್ತದೆ
ನನಗೂ ಲೋಕಲ್ ಟ್ರೈನಿನ ಪಯಣದ ಅನುಭವ ಬೇಕೆಂದೆನಿಸಿದೆ
ಅನಿತಾರ ಮನೆಗೆ ಒಮ್ಮೆ ಬಂದು ಒಂದು ವಾರ ಕಾಲ ನಿಲ್ಲುವೆ
ಅನುಮತಿ ಇದೆಯೆ ಅನಿತಾ?
0 ಪ್ರತಿಕ್ರಿಯೆಗಳು