‘ಈ ಹೊತ್ತಿಗೆ’ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ…

ಸಾಹಿತ್ಯ ಅಧ್ಯಯನಕ್ಕೊಂದು ಹೊಸ ರೂಪು ಕೊಟ್ಟ ‘ಈ ಹೊತ್ತಿಗೆ’ಯು ಕಥಾ ಪ್ರಕಾರಕ್ಕೆ ಮಾತ್ರವಲ್ಲದೆ, ಈ ವರ್ಷದಿಂದ ಕನ್ನಡದ ಮೂಲ ಸಾಹಿತ್ಯ ಪ್ರಕಾರವಾದ ಕಾವ್ಯಕ್ಕೂ ಪ್ರಶಸ್ತಿ ಕೊಡಲು ನಿರ್ಧರಿಸಿದೆ.

ಹೊತ್ತಿಗೆ ಪ್ರಶಸ್ತಿ’ಗಾಗಿ ಕನ್ನಡದ ಅಪ್ರಕಟಿತ ಕಥಾ ಸಂಕಲನಗಳನ್ನು ಮತ್ತು ಅಪ್ರಕಟಿತ ಕವನ ಸಂಕಲನಗಳನ್ನು ಆಹ್ವಾನಿಸುತ್ತಿದ್ದೇವೆ.

ಅಪ್ರಕಟಿತ ಕಥಾ ಸಂಕಲನಕ್ಕಾಗಿ ಮತ್ತು ಕವನ ಸಂಕಲನಕ್ಕಾಗಿ

 ತಲಾ 10,000 (ಹತ್ತು ಸಾವಿರ) ರೂಪಾಯಿ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ.

ನಿಯಮಗಳು :

1. ಅಪ್ರಕಟಿತ ಸಂಕಲನದಲ್ಲಿರುವ ಕಥೆಗಳು/ಕವನಗಳು ಸ್ವತಂತ್ರವಾಗಿರಬೇಕು. ಸಂಕಲನದಲ್ಲಿ ಕಡ್ಡಾಯವಾಗಿ ಅನುವಾದಿತ ಕಥೆ/ಕವನಗಳಿರಕೂಡದು.

2. ಕಥಾ ಸಂಕಲನವು 8ರಿಂದ 10 ಕಥೆಗಳನ್ನು ಒಳಗೊಂಡಿರಬೇಕು.

೩. ಕವನ ಸಂಕಲನವಾದರೆ 35-40 ಕವನಗಳನ್ನು ಒಳಗೊಂಡಿರಬೇಕು.

4. ಡಿಟಿಪಿ ಮಾಡಿಸಿ, ಬೈಂಡ್ ಮಾಡಿಸಿದ ಅಪ್ರಕಟಿತ ಸಂಕಲನದ ಮೂರು ಪ್ರತಿಗಳನ್ನು ಈ ಹೊತ್ತಿಗೆಯ ಅಂಚೆ ವಿಳಾಸಕ್ಕೆ ಕಳುಹಿಸಿಕೊಡಬೇಕು.

5. ಕವಿಗಳು / ಕಥೆಗಾರರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಸಂಕಲನದ ಹೆಸರು, ಸಂಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಬರೆದಿರಬೇಕು. ಸಂಕಲನದ ಯಾವುದೇ ಪುಟಗಳಲ್ಲಿ ಲೇಖಕರ ಹೆಸರು ಇರಕೂಡದು.

 6. ಪ್ರಶಸ್ತಿ ಘೋಷಣೆಯಾದ 30 ದಿನಗಳಲ್ಲಿ ಪ್ರಶಸ್ತಿ ಪಡೆದ ಸಂಕಲನವು ಮುದ್ರಣಗೊಳ್ಳಬೇಕು. ಕೃತಿ ಮುದ್ರಣಗೊಂಡರೆ ಮಾತ್ರ ಘೋಷಿತ ಬಹುಮಾನದ ಮೊತ್ತ ಹಾಗು ಪ್ರಶಸ್ತಿ ಫಲಕವು ಈ ಹೊತ್ತಿಗೆಯ ಹೊನಲು ಸಮಾರಂಭದಲ್ಲಿ ಸಲ್ಲುತ್ತದೆ.

7. ಪ್ರಶಸ್ತಿ ಪಡೆದ ಕೃತಿಯನ್ನು ಮುದ್ರಿಸುವಾಗ ಮುಖಪುಟ ಹಾಗು ಪುಸ್ತಕದ ಒಳ ಪುಟದಲ್ಲಿ ‘ಈ ಹೊತ್ತಿಗೆ (ಕಥಾ/ಕಾವ್ಯ) ಪ್ರಶಸ್ತಿ ವಿಜೇತ ಕೃತಿ’ ಎಂದು ಮುದ್ರಿಸಿರಬೇಕು.

ನಿಮ್ಮ ಅಪ್ರಕಟಿತ ಕಥಾ ಸಂಕಲನ, ಕವನ ಸಂಕಲನ ನಮಗೆ ತಲುಪಲು ಕೊನೆಯ ದಿನಾಂಕ : 05 ಜನವರಿ 2022

ಹಸ್ತಪ್ರತಿಗಳನ್ನು ಮರಳಿಸಲಾಗುವುದಿಲ್ಲವಾದ್ದರಿಂದ ನಿಮ್ಮ ಬಳಿ ಅದರ ಪ್ರತಿಯನ್ನು ಕಾಯ್ದಿರಿಸಿಕೊಳ್ಳಿ.
ಈ ಹೊತ್ತಿಗೆಯ ತೀರ್ಮಾನವೇ ಅಂತಿಮ.

2022ರ ಮಾರ್ಚಲ್ಲಿ ನಡೆಯುವ ಈ ಹೊತ್ತಿಗೆಯ ಹೊನಲು ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿಯನ್ನು ನೀಡಲಾಗುವುದು.

ಹಸ್ತಪ್ರತಿ ಕಳುಹಿಸಲು ವಿಳಾಸ :
ಈ ಹೊತ್ತಿಗೆ, #65 , ಮುಗುಳ್ನಗೆ, 3ನೇಯ ಅಡ್ಡರಸ್ತೆ ,
ಪಿ.ಎನ್.ಬಿ. ನಗರ, ದೊಡ್ಡಕಲ್ಲಸಂದ್ರ, ಕೋಣನಕುಂಟೆ,
ಬೆಂಗಳೂರು – 560062

ಸಂಪರ್ಕ ಸಂಖ್ಯೆ: 8861408585

‍ಲೇಖಕರು Admin

December 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: