ಇದೇ ತಿಂಗಳ ೨೭ನೇ ತಾರೀಖು ಭಾನುವಾರದಂದು, ಬೆಳಿಗ್ಗೆ ೧೦ಕ್ಕೆ ಈ ಹೊತ್ತಿಗೆಯ ವಾರ್ಷಿಕ ಸಮಾರಂಭ ‘ಹೊನಲು’ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ೨೦೨೧ ಹಾಗೂ ೨೦೨೨ರ ಸಾಲಿನ ಈ ಹೊತ್ತಿಗೆಯ ಕಥಾ ಮತ್ತು ಕಾವ್ಯ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಹಾಗೂ ಇತ್ತೀಚಿಗೆ ನಮ್ಮನ್ನಗಲಿದ ನಾಡಿನ ಸಾಹಿತ್ಯಲೋಕದ ಹಿರಿಯ ಚೇತನಗಳಾಗಿದ್ದ ಚಂಪಾ ಅವರಿಗೆ ಹಾಗೂ ಚೆನ್ನವೀರ ಕಣವಿ ಅವರಿಗೆ ನುಡಿನಮನ ಕಾರ್ಯಕ್ರಮವಿದೆ.
ಶ್ರೀಮತಿ. ವೇದವತಿ ಪ್ರಸನ್ನ ಅವರು ಚೆನ್ನವೀರ ಕಣವಿ ಮತ್ತು ಚಂಪಾ ಅವರ ಕವನಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಕಾರ್ಯಕ್ರಮ ಆರಂಭವಾಗುವುದು.
ಹಿರಿಯ ಕಥೆಗಾರ್ತಿ ಹಾಗೂ ಕಾದಂಬರಿಕಾರರಾದ ಶ್ರೀಮತಿ. ಜಯಶ್ರೀ ದೇಶಪಾಂಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ನಾಡಿನ ಹಿರಿಯ ಕವಿ, ನಾಟಕಕಾರರಾದ ಶ್ರೀಮತಿ. ಹೆಚ್. ಎಲ್ ಪುಷ್ಪಾ ಅವರು ಮುಖ್ಯ ಅಥಿತಿಗಳಾಗಿ ಪ್ರಶಸ್ತಿ ಪ್ರದಾನ ಮಾಡಲಿರುವರು.
ಕಳೆದ ವರ್ಷದ ಹಾಗೂ ಈ ವರ್ಷದ ಪ್ರಶಸ್ತಿ ವಿಜೇತ ಕೃತಿಗಳನ್ನು ಕವಿಗಳಾದ ಶ್ರೀಮತಿ. ಎನ್. ಸಂಧ್ಯಾರಾಣಿ, ಶ್ರೀ ಶ್ರೀಕಾಂತ ಉಡುಪ ಹಾಗೂ ಶ್ರೀಮತಿ. ನೂತನ್ ದೋಶೆಟ್ಟಿಯವರು ಪರಿಚಯಿಸಲಿದ್ದಾರೆ. ಪ್ರಶಸ್ತಿ ವಿಜೇತರಾದ ಶ್ರೀ ಅಕ್ಷಯ ಪಂಡಿತ್, ಡಾ. ಕೆ. ಷರೀಫಾ ಹಾಗೂ ಶ್ರೀಮತಿ. ಮಧುರಾಣಿ ಹೆಚ್. ಎಸ್ ಉಪಸ್ಥಿತರಿರುತ್ತಾರೆ.
‘ಚೆನ್ನವೀರ ಕಾವ್ಯ ಕಣವಿ’ ಗೋಷ್ಠಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಕಥೆಗಾರ ಹಾಗೂ ಪತ್ರಕರ್ತರಾದ ಶ್ರೀ. ದೇವು ಪತ್ತಾರ ಮತ್ತು ಸಾಹಿತಿ ಡಾ. ಹೆಚ್. ಎಸ್ ಸತ್ಯನಾರಾಯಣ ಅವರು ಆಗಮಿಸಲಿದ್ದು, ಶ್ರೀಮತಿ. ಇಂದಿರಾ ಶರಣ್ ಅವರು ಗೋಷ್ಠಿಯ ನಿರ್ವಹಣೆ ಮಾಡಲಿರುವರು. ಗೋಷ್ಠಿಯ ನಂತರ ಸಭಿಕರ ಸಂವಾದವಿರುತ್ತದೆ.
ಚಲನಚಿತ್ರ ನಿರ್ದೇಶಕ ಪ್ರವೀಣ್ ಕುಮಾರ ಜಿ ಹಾಗೂ ನಟಿ ಜಯಲಕ್ಷ್ಮಿ ಪಾಟೀಲ್ ಅವರು ೩೦ ನಿಮಿಷಗಳ ಚಂಪಾ ವಿರಚಿತ ‘ಅಪ್ಪ’ ಅಸಂಗತ ನಾಟಕ ವಾಚನ ಮಾಡಲಿದ್ದಾರೆ.
ಕನ್ನಡದ ಯುವಕವಿ, ಕತೆಗಾರ ಶ್ರೀ. ದಾದಾಪೀರ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಹಿತ್ಯಾಸಕ್ತರನ್ನು ಈ ಹೊತ್ತಿಗೆಯ ಬಳಗ ಆಹ್ವಾನಿಸುತ್ತಿದೆ.
ದಿನಾಂಕ: ೨೭ ಮಾರ್ಚ್ ೨೦೨೨, ಸಮಯ: ಬೆಳಗಿನ ೧೦ ಗಂಟೆಯಿಂದ ಮದ್ಯಾಹ್ನ ೧.೩೦ರವರೆಗೆ,
ಸ್ಥಳ: ಕಪ್ಪಣ್ಣ ಅಂಗಳ, ೧೪೧/೧, ಐಟಿಐ ಕಾಲನಿ, ೩೨ನೇ ಎ ಮುಖ್ಯರಸ್ತೆ, ಜೆಪಿ ನಗರ, ೧ನೇ ಹಂತ, ಬೆಂಗಳೂರು ೫೬೦೦೭೮
ಶುಭಾಶಯಗಳು