’ಈ ಕನ್ನಡಿಗನಿಗೊಂದು ಶಭಾಷ್ ಹೇಳೋಣ’ – ಕೆ ಪುಟ್ಟಸ್ವಾಮಿ

1779971_10202830521997281_2107307600_n
ಕೆ ಪುಟ್ಟಸ್ವಾಮಿ 
ಜಗತ್ತಿನ ನಾಲ್ಕು ಶ್ರೇಷ್ಠ ಚಲನಚಿತ್ರೋತ್ಸವಗಳಲ್ಲಿ ಲೊಕಾರ್ನೋ ಚಲನಚಿತ್ರೋತ್ಸವವೂ ಒಂದು (ಉಳಿದ ಮೂರು ಉತ್ಸವಗಳೆಂದರೆ ಕಾನ್, ಬರ್ಲಿನ್ ಮತ್ತು ವೆನಿಸ್ ಚಲನಚಿತ್ರೋತ್ಸವಗಳು). ಸ್ವಿಟ್ಜರ್‍ಲ್ಯಾಂಡ್‍ನ ಲೊಕಾರ್ನೋ ಸಿಟಿಯಲ್ಲಿ 1946ರಿಂದ ಸತತವಾಗಿ ಪ್ರತಿವರ್ಷ ನಡೆಯುವ ಇಲ್ಲಿನ ಉತ್ಸದಲ್ಲಿ ಅನೇಕ ವಿಭಾಗಗಳಲ್ಲಿ ಸ್ಪರ್ಧೆಯಿರುತ್ತದೆ. ಯಾವುದೇ ವಿಭಾಗದಲ್ಲಿ ಪ್ರಶಸ್ತಿ ಪಡೆದರೆ ನಿಜಕ್ಕೂ ನಿರ್ದೇಶಕ ಮತ್ತೂ ಆ ಚಿತ್ರ ತಯಾರಿಸಿದ ನಾಡು ಹೆಮ್ಮೆ ಪಡಬೇಕಾದ ವಿಚಾರ.
ಈ ಬಾರಿ ಆಗಸ್ಟ್ 5ರಿಂದ 15ರವರೆಗೆ ನಡೆದ ಉತ್ಸವದಲ್ಲಿ Concorso Cineasti del Presente (Filmmakers of the present) Awards ವಿಭಾಗದಲ್ಲಿ ಅಂದರೆ ನಿರ್ದೇಶಕನ ಮೊದಲ ಅಥವಾ ಎರಡನೇ ಪ್ರಯತ್ನದ ಕಥಾಚಿತ್ರಕ್ಕೆ ಪ್ರಶಸ್ತಿ ನೀಡುವ ವಿಭಾಗದಲ್ಲಿ ರಾಮ್ ರೆಡ್ಡಿ ಎಂಬುವರು ನಿರ್ದೇಶಿಸಿದ ಚೊಚ್ಚಲಚಿತ್ರ ಕನ್ನಡ ಭಾಷೆಯ ‘ತಿಥಿ’ಗೆ ಲಭಿಸಿದೆ.
1
ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ಸುದ್ದಿಯಿದು. ಆಗಸ್ಟ್ ಹದಿನೈದರಂದು ಪ್ರಕಟವಾದ ಪ್ರಶಸ್ತಿಯ ಬಗ್ಗೆ ಟೈಂಸ್ ಆಫ್ ಇಂಡಿಯಾದ 17ನೇ ದಿನಾಂಕದ ಸಂಚಿಕೆಯ 3ನೇ ಪುಟದಲ್ಲಿ ಪ್ರಕಟವಾಗಿದೆ. ನಮ್ಮ ಕನ್ನಡ ಪತ್ರಿಕೆ – ವಾಹಿನಿಗಳಲ್ಲಿ ಸುದ್ದಿಯೇ ಇಲ್ಲ. ಕಳೆದ 8 ವರ್ಷಗಳಿಂದ ಭಾರತೀಯ ಚಿತ್ರಗಳಿಗೆ ಈ ಉತ್ಸವದಲ್ಲಿ ಪ್ರಶಸ್ತಿಗಳೇ ಬಂದಿರಲಿಲ್ಲ. ಕನ್ನಡ ಚಿತ್ರ ಆ ಬರವನ್ನು ನೀಗಿಸಿದೆ.
11900050_10206742065463423_2364233457045668439_n
ಈ ರಾಮ್ ರೆಡ್ಡಿ ಯಾರು ಎಂದು ನನಗೂ ಗೊತ್ತಿಲ್ಲ. ಲೊಕಾರ್ನೋ ಚಿತ್ರೋತ್ಸವದಲ್ಲಿ ಅವರ ತಿಥಿ” ಚಿತ್ರವು 8.8.2015ರಂದು ಪ್ರದರ್ಶನಗೊಂಡಿದೆ. ಆಗಸ್ಟ್ ಹದಿನೈದರಂದು ಪ್ರಶಸ್ತಿ ಪ್ರಕಟವಾಗಿದೆ. ಆದರೆ ಪ್ರಶಸ್ತಿ ಬಗ್ಗೆ ಓದಿದ ನಂತರ ಕನ್ನಡಿಗರಿಗೆ ಸಂಭ್ರಮಿಸುವ ಮನೋಭಾವ ಮರೆಯಾಗಿರುವ ಬಗ್ಗೆ ಬಹಳ ಖೇದವೆನಿಸುತ್ತದೆ. ಈ ರಾಷ್ಟ್ರೀಯ ಪತ್ರಿಕೆಗಳಿಗೆ ಅದು ಮುಖಪುಟದ ಸುದ್ದಿಯೆನಿಸಲಿಲ್ಲ. ಕನ್ನಡ ಪತ್ರಿಕೆ -ವಾಹಿನಿಗಳಿಗೆ ಅದು ಬಹು ಮುಖ್ಯ ಎನಿಸಲಿಲ್ಲ. ನಮ್ಮ ಚಲನಚಿತ್ರ ಅಕಾಡೆಮಿಯವರಿಗೆ ಈ ಸುದ್ದಿ ತಿಳಿದಂತಿಲ್ಲ. ಅದು ವಾಣಿಜ್ಯ ಮಂಡಳಿಯ ಶಾಖಾ ಮಠದಂತೆ ಕಾರ್ಯನಿರ್ವಹಿಸುವುದರಿಂ ಇಂಥ ಅಕಾಡೆಮಿಕ್ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಮುಖ್ಯಮಂತ್ರಿಯವರ ಗಮನಕ್ಕೆ ಇಂಥ ವಿಷಯಗಳನ್ನು ತಂದು ಅವರಿಂದ ಅಭಿನಂದಿಸುವಂತಹ ವ್ಯವಸ್ಥೆಯ ಅದಿಕಾರಶಾಹಿ ಕೂಡಯಿಲ್ಲದಿರುವುದು ವಿಷಾದದ ಸಂಗತಿ.ಇನ್ನು ವಾರ್ತಾ ಮಂತ್ರಿಯರಿಗೂ ಸುದ್ದಿ ತಿಳಿದಂತಿಲ್ಲ. ಆದರೆ ಕನ್ನಡಿಗರು – ಭಾರತೀಯರು ಹೆಮ್ಮೆ ಪಡುವಂತಹ ಸಾಧನೆ ಮಾಡಿರುವ ರಾಮ್ ರೆಡ್ಡಿಯವರಿಗೆ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸಬಯಸುತ್ತೇನೆ.ಮಂಡ್ಯ ಪರಿಸರದಲ್ಲಿ ಕಥೆಯನ್ನು ನಿರೂಪಿಸಿರುವ ರಾಮ್‍ ರೆಡ್ಡಿ ಅವರ ಚಿತ್ರ ನೋಡುವಾಸೆಯಿದೆ. ಬೇಗ ಕೈಗೂಡಲಿ.

‍ಲೇಖಕರು G

August 18, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

 1. ಜೆ.ವಿ.ಕಾರ್ಲೊ, ಹಾಸನ

  ತುಂಬಾ ಖುಷಿಯಾಯ್ತು. ಅಭಿನಂದನೆಗಳು ರಾಮ್ ರೆಡ್ಡಿಯವರೆ.

  ಪ್ರತಿಕ್ರಿಯೆ
 2. Kiran

  Hearty Congratulations and also thanks!
  Please make us proud again and again with your achievements and also have your work made available to interested viewers..

  ಪ್ರತಿಕ್ರಿಯೆ
 3. Gn Nagaraj

  ಬಹಳ ಸಂತೋಷ. ನಮ್ಮೆಲ್ಲರ ಗಮನಕ್ಕೆ ತಂದ ನಿಮಗೂ ವಂದನೆಗಳು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: