ಇವರ ಹೆಸರು ನೆನಪಿರಲು ಸಾಧ್ಯವಿಲ್ಲ!

r g halli nagaraj

ಆರ್ ಜಿ ಹಳ್ಳಿ ನಾಗರಾಜ್ 

birds

janapragati#‎90ರ‬ ಪತ್ರಕರ್ತ ಕಲ್ಲೆ ಶಿವೋತ್ತಮರಾವ್
😊 ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಲ್ಲಿ ಅತಿ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್ . ಈಚಿನ ಪೀಳಿಗೆಗೆ ಇವರ ಹೆಸರು ನೆನಪಿರಲು ಸಾಧ್ಯವಿಲ್ಲ! ಬದಲಾದ ಕಾಲಘಟ್ಟದಲ್ಲಿ ಅವರ ಆಲೋಚನೆ ಹಳೆಯದಾದಂತೆ ಅವರಿಗೂ ವಯಸ್ಸಾಯಿತು. ನೇರ ನಿಷ್ಠುರ ಪ್ರಾಮಾಣಿಕ ವ್ಯಕ್ತಿ ಕಲ್ಲೆ.

‪#‎ಜನಪ್ರಗತಿ‬ ವಾರ ಪತ್ರಿಕೆ ಮೂಲಕ ವೈಚಾರಿಕ ಹಾಗೂ ಪ್ರಗತಿಪರ ನಿಲುವು ಪ್ರತಿಪಾದಿಸುತ್ತಾ ಬಂದವರು. ನನ್ನಂಥ ಯುವ ಬರಹಗಾರರನ್ನು ಹುರಿದುಂಬಿಸಿ ಬರೆಯಲು ಅವತ್ತು ಪ್ರೋತ್ಸಾಹ ನೀಡಿದವರು. ನನ್ನ ಮೊದಲ ಕತೆ ಪ್ರಕಟವಾದದ್ದೇ ಜನಪ್ರಗತಿ ವಾರಪತ್ರಿಕೆಯಲ್ಲಿ.

‪#‎ವಿಚಾರವಾದಿ‬ೆರಿಯಾರ್ ಅವರ ಬದುಕು ಬರಹ ಪರಿಚಯವಾದದ್ದೇ ಅವರ ಪತ್ರಿಕೆಯಿಂದ. ವೇಮಣ್ಣ ಅವರು ಪೆರಿಯಾರ್ ಬಗ್ಗೆ ಅಲ್ಲಿ ಬರೆಯುತ್ತಿದ್ದರು. ೧೯೯೬ರಲ್ಲಿ ನಾನು ಚಲನಚಿತ್ರ ಬರಹಗಳನ್ನು, ಲೇಖನಗಳನ್ನು ಆ ಪತ್ರಿಕೆಗೆ ಬರೆಯುತ್ತಿದ್ದೆ . ಖರ್ಚಿಗೆ ಹಣ ನೀಡುತ್ತಿದ್ದ ಕಷ್ಟ ಸುಖ ಹಂಚಿಕೊಳ್ಳುತ್ತಿದ್ದ ಮಾನವೀಯ ವ್ಯಕ್ತಿ ಕಲ್ಲೆ. ಆಗ ಡಾ. ರಾಜಕುಮಾರ್ ಅವರಿಗೆ ಫಾಲ್ಕೆ ಪ್ರಶಸ್ತಿ ಬಂದಾಗ ನನ್ನಿಂದ ಲೇಖನ ಬರೆಯಿಸಿದ್ದರು.

ಅವರು ದೇವರಾಜ ಅರಸು, ಇಂದಿರಾ ಗಾಂಧಿ ಅವರ ಬಗ್ಗೆ ಅಭಿಮಾನದಿಂದ ಬರೆಯುತ್ತಿದ್ದರು. ಶೂದ್ರ ಬರಹಗಾರಿಗೆ ವೇದಿಕೆ ಕೊಟ್ಟು ಬೆಳೆಸಿದ್ದರು. ಅವರಷ್ಟು ರಾಜಕಾರಣ ತಿಳಿದ ಮತ್ತೊಬ್ಬರನ್ನು ಕಂಡದ್ದು “ಪ್ರಪಂಚ”ದ ಪಾಟೀಲ ಪುಟ್ಟಪ್ಪ ಅವರಲ್ಲಿ.

ಬಹು ತಡವಾಗಿ ಸರ್ಕಾರ ಅವರ ಮಾಧ್ಯಮ ಸೇವೆ ಗುರ್ತಿಸಿದೆ. ಹಿಂದಿನ ಸರ್ಕಾರಗಳು ನಿರ್ಲಕ್ಷ್ಯ ತೋರಿದ್ದವು. ಈಗಲಾದರೂ ಕೊಟ್ಟರಲ್ಲ…. ಸಂತೊಷ. ಸಿಎಂ ಸಿದ್ದರಾಮಯ್ಯ, ಸಚಿವೆ ಉಮಾಶ್ರೀ ಅವರಿಗೆ ಧನ್ಯವಾದ.

ಕಲ್ಲೆ ಶಿವೋತ್ತಮರಾವ್  ಅವರಿಗೆ ಅಭಿನಂದನೆ.

‍ಲೇಖಕರು admin

November 1, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: