ಇಲ್ಲಿದೆ ಜಯಲಕ್ಷ್ಮಿ ಪಾಟೀಲ್ 'ಟಾಪ್ ೧೦’

ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು.
ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ ಪ್ರಕಟವಾಗಿರಬಹುದು.
ಹಾಗೆ ನಮ್ಮ ಪ್ರಶ್ನೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಿ ನೀಡಿದ ಎಲ್ಲರೂ ಓದಿದ ಪುಸ್ತಕಗಳನ್ನು ನೋಡಿ ನಾವೂ ಬೆರಗಾಗಿದ್ದೇವೆ. ‘ಕುಮಾರವ್ಯಾಸ ಭಾರತ’ದಿಂದ ಆರಂಭಿಸಿ ದೇವನೂರರ ‘ಎದೆಗೆ ಬಿದ್ದ ಅಕ್ಷರ’ದವರೆಗೆ ಎಷ್ಟೋ ಕೃತಿಗಳು ಹರಡಿಕೊಂಡಿವೆ
ಈಗಾಗಲೇ ಓದಿದ್ದ ಕೃತಿಯನ್ನೇ ಮತ್ತೆ ಮತ್ತೆ ಓದುವಂತೆ ಮಾಡುವ ಶಕ್ತಿ ಯಾವುದು? ಅತ್ಯಂತ ಹಳೆಯ ಕೃತಿಗಳು ಇನ್ನೂ ನಮ್ಮನ್ನು ಕಾಡುತ್ತಿರುವುದೇಕೆ? ಎನ್ನುವ ಪ್ರಶ್ನೆಯನ್ನೂ ಈ ಪಟ್ಟಿ ಹುಟ್ಟು ಹಾಕುತ್ತದೆ. ನಮ್ಮ ಸಾಹಿತಿಗಳ ಓದಿನ ರೀತಿಯ ಬಗ್ಗೆಯೂ ಈ ಪಟ್ಟಿ ಒಂದು ಕಣ್ಣೋಟ ನೀಡುತ್ತದೆ.
ಕನ್ನಡ ಕೃತಿಗಳನ್ನು ಓದುತ್ತಿದ್ದವರು ಇದ್ದಕ್ಕಿದ್ದಂತೆ ವ್ರತ ಹಿಡಿದವರಂತೆ ಒಂದು ವರ್ಷ ಬರೀ ಇಂಗ್ಲಿಷ್ ಕೃತಿಗಳಿಗೆ ಹೊರಳಿಕೊಂಡುಬಿಡುತ್ತಾರೆ?. ಯಾಕೆ ಎಂದು ಕೇಳಿದರೆ ನಂಗೂ ಗೊತ್ತಿಲ್ಲ ಎನ್ನುವ ಉತ್ತರ. ಈಗ ಪುಸ್ತಕಗಳಂತೂ ಪುಂಖಾನುಪುಂಖವಾಗಿ ಹೊರಬರುತ್ತಿದೆ. ಹಾಗಿರುವಾಗ ಆ ರಾಶಿಯಲ್ಲಿ ಓದುಗರು ಹೆಕ್ಕಿಕೊಳ್ಳುವ ಕೃತಿಗಳು ಯಾವುದು ಎನ್ನುವುದೂ ಸಹಾ ಕುತೂಹಲಕರ ಸಂಗತಿ. ಅದಿರಲಿ ಇಂತಹ ಪುಸ್ತಕ ಮಾರುಕಟ್ಟೆಗೆ ಬಂದಿದೆ ಎಂದು ಗೊತ್ತಾಗುವ ಬಗೆ ಯಾವುದು?
ಓದಿದ ಎಷ್ಟೋ ಪುಸ್ತಕಗಳಲ್ಲಿ ಒಂದಿಷ್ಟು ಪುಸ್ತಕವೇ ಏಕೆ ಕಾಡುತ್ತದೆ ಎನ್ನುವ ಪ್ರಶ್ನೆಗಳನ್ನೂ ಈ ಪಟ್ಟಿ ಎತ್ತುತ್ತದೆ. ನೀವು ಓದಿದ ಟಾಪ್ ಟೆನ್ ಕೃತಿಯ ಪಟ್ಟಿ ಕೊಡಿ ಎಂದು ಕೇಳುವಾಗ ನಮ್ಮ ಗಮನವಿದ್ದದ್ದು ಓದಿನ ಹಸಿವಿರುವ ಅನೇಕಾನೇಕ ಮಂದಿಗೆ ಯಾವ ಪುಸ್ತಕ ಓದಬೇಕು ಎನ್ನುವ ಸೂಚನೆಯನ್ನು ಈ ಪಟ್ಟಿ ನೀಡಲಿ ಎಂದು. ಜೊತೆಗೆ ತಮ್ಮ ನೆಚ್ಚಿನ ಲೇಖಕರು ಏನು ಓದುತ್ತಿದ್ದಾರೆ ಎಂದು ತಿಳಿಯುವ ಕುತೂಹಲವನ್ನೂ ಇದು ತಣಿಸುತ್ತದೆ ಎಂದು.
ಅದರ ಜೊತೆಗೆ ಇದೂ.. ಎನ್ನುವಂತೆ ಈ ಪಟ್ಟಿ ಇನ್ನಷ್ಟು ಸಂಗತಿಗಳನ್ನು ಹೊರಗೆಡಹಿದೆ.
ಇಲ್ಲಿದೆ ಜಯಲಕ್ಷ್ಮಿ ಪಾಟೀಲ್ ಟಾಪ್ ೧೦


 
೧) ಚಿಕ್ಕವೀರ ರಾಜೇಂದ್ರ – ಲೇ. ಮಾಸ್ತಿ ವೆಂಕಟೇಶ್ ಐಯಂಗಾರ್

೨) ಕೆಲವು ಕಥಾನಕಗಳು -ಲೇ. ಕೆ.ವಿ.ತಿರುಮಲೇಶ್
೩) ಹೂ ಕಟ್ಟುವ ಕಾಯಕ – ಲೇ. ವೈದೇಹಿ
೪) ಪದ್ಮಪಾಣಿ – ಲೇ. ಕೆ.ಎನ್ ಗಣೇಶಯ್ಯ
೫) ಕಪಿಲಿಪಿಸಾರ – ಲೇ. ಕೆ.ಎನ್ ಗಣೇಶಯ್ಯ
೬) ಶಾಲಭಂಜಿಕೆ – ಲೇ. ಕೆ.ಎನ್.ಗಣೇಶಯ್ಯ

೭) ಎಚ್ಚೆಸ್ವಿ ಅನಾತ್ಮ ಕಥನ – ಲೇ. ಎಚ್ಚೆಸ್ವಿ
೮) ಕಮಲಾದಾಸ್ ಕತೆಗಳು – ಅನುವಾದ: ಕೆ.ಕೆ.ಗಂಗಾಧರನ್
 

೯) ಕಟ್ಟುಕಥೆಗಳು – ಲೇ. ಎಸ್. ಸುರೇಂದ್ರನಾಥ್
೧೦) ಹಲಗೆ ಬಳಪ – ಲೇ. ಜೋಗಿ

‍ಲೇಖಕರು G

January 11, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: