ಇಮಾಮ್ ಗೋಡೆಕಾರ
ಗದಗ ಜಿಲ್ಲೆ ಗಜೇಂದ್ರಗಡದವರು, ಈಗ ಬಳ್ಳಾರಿಯಲ್ಲಿದ್ದಾರೆ. ಒಂದೂವರೆ ದಶಕದಿಂದ ರಾಜ್ಯದ ವಿವಿಧ ಚಾನೆಲ್ ಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿ, ಈಗ ಬಳ್ಳಾರಿಯ ಗಣಿನಾಡು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಆಗಿದ್ದಾರೆ, ಕವಿತೆ, ಕತೆ, ರುಬಾಯಿ ಮತ್ತು ಗಜಲ್ ಬರೆದಿದ್ದಾರೆ.
ನನ್ನ ಹುಚ್ಚಳನ್ನಾಗಿಸುವ ಯೋಜನೆ ನಿನ್ನದು, ಗೊತ್ತು ಬಿಡು ಸಖಾ
ಮಳ್ಳ ಕಣ್ಣೀರು ಸುರಿಸುವ ವಂಚನೆ ನಿನ್ನದು, ಗೊತ್ತು ಬಿಡು ಸಖಾ
ಸುಳ್ಳು ಹೇಳಿ ಕುಹಕ ನಗೆ ಬೀರುವೆ ಏಕೆ?
ಗಾಯಗೊಳಿಸಿ ಮುಲಾಮು ಸವರುವ ಯೋಜನೆ ನಿನ್ನದು, ಗೊತ್ತು ಬಿಡು ಸಖಾ
ಬೆಳೆಸಿಕೊಂಡ ಬಯಕೆಗಳಿಗೆ ಹೇಗೆ ಹೇಳಲಿ ಸಮಾಧಾನ?
ಒಳಗೆ ಸೈತಾನ ಹೊರಗೆ ಸಂತನಂತೆ ನಟಿಸುವ ನಟನೆ ನಿನ್ನದು, ಗೊತ್ತು ಬಿಡು ಸಖಾ
ಪ್ರೀತಿಯಿಂದ ನೀ ಹೆಣೆದ ಪಂಜರ ಹೇಗೆ ಮುರಿಯಲಿ ಹೇಳು?
ಒಳ್ಳೆತನವ ಪುಡಿಗಟ್ಟಿ ಸುಳ್ಳೆ ಸುಭುಗನಾಗುವ ಭಾವನೆ ನಿನ್ನದು, ಗೊತ್ತು ಬಿಡು ಸಖಾ
ಕೊಂದರೂ ನೀನೆಂದೂ ನನ್ನವನೇ ಇಮಾಮ್
ಕನಸುಗಳಿಗೆ ಬೆಂಕಿಯಿಟ್ಟು ಗುಲಾಬಿ ನೆಡುವ ಯೊಜನೆ ನಿನ್ನದು, ಗೊತ್ತು ಬಿಡು ಸಖಾ
0 ಪ್ರತಿಕ್ರಿಯೆಗಳು