‘ಇಡೀ ಅರೇಬಿಯಾದ ಸುಗಂಧ ದ್ರವ್ಯಗಳು ನನ್ನ ಕೈಗಳ ಕಲೆಯನ್ನು ಹೋಗಲಾಡಿಸಲಾರೆವೇ..’

ಶ್ರೀಜಾ ವಿ ಎನ್

ಜಿ ಎನ್ ಮೋಹನ್ 

‘ಇಡೀ ಅರೇಬಿಯಾದ ಸುಗಂಧ ದ್ರವ್ಯಗಳು ನನ್ನ ಕೈಗಳ ಕಲೆಯನ್ನು ಹೋಗಲಾಡಿಸಲಾರೆವೇ..’ ಎಂದು ಲೇಡಿ ಮ್ಯಾಕ್ಬೆತ್ ಅಧೋ ರಾತ್ರಿಯಲ್ಲಿ ಇನ್ನಿಲ್ಲದಂತೆ ನಿಟ್ಟುಸಿರಿಡುತ್ತಿದ್ದಳು. ನಿದ್ದೆಯಲ್ಲೇ ಹೆಜ್ಜೆ ಹಾಕುತ್ತಾ..

ಆಕೆಯ ಒಳಪ್ರಜ್ಞೆಯನ್ನು ಚುಚ್ಚುತ್ತಿದ್ದುದು ತಾನು ಮಾಡಿಸಿದ ಕೊಲೆ. ಒಂದು ಕೊಲೆ, ಅದಕ್ಕಾಗಿ ಇನ್ನೊಂದು ಕೊಲೆ.. ಅದನ್ನು ಮುಚ್ಚಿಡಲು ಮತ್ತೊಂದು ಕೊಲೆ.. ವ್ಯೂಹ ಅದನ್ನು ಮುಚ್ಚಿಡಲು ಮತ್ತೊಂದು ವ್ಯೂಹ, ಮಗದೊಂದು.. ಕೊನೆಗೆ ಉಳಿದದ್ದು ಕೈಯೆಲ್ಲಾ ರಕ್ತದ ಕಲೆಗಳಷ್ಟೇ..

ಅವಳು ತತ್ತರಿಸಿಹೋಗಿದ್ದಳು. ಆಕೆಯ ಕೃತ್ಯಗಳೇ ಕುಕ್ಕುವ ಕನಸುಗಳಾಗಿ ಎದ್ದು ಬರುತ್ತಿದ್ದವು. ತನ್ನ ಕೈನ ಕಲೆಗಳನ್ನೆಲ್ಲಾ ನಿವಾರಿಸಿಕೊಂಡು ಬಿಡಬೇಕು ಎನ್ನುವ ಆತುರ. ಅದಕ್ಕಾಗಿ ಒಂದು ಸುಗಂಧ ದ್ರವ್ಯ, ಅದಕ್ಕಿಂತಲೂ ಮಿಗಿಲಾದ ಸುಗಂಧ ದ್ರವ್ಯದಲ್ಲಿ ಕೈ ತೊಳೆಯಲಾರಂಭಿಸಿದಳು. ಆದರೆ ಅವಳಿಗೆ ಗೊತ್ತಾಗಿಹೋಯಿತು- ಇಡೀ ಅರೇಬಿಯಾದ ಸುಗಂಧ ದ್ರವ್ಯಗಳ್ಯಾವುದೂ ಅವಳ ಕಾಳ ಕೃತ್ಯಗಳ ಕಲೆಗಳನ್ನು ಹೋಗಲಾಡಿಸಲಾರದು ಎಂದು..

ಆ ಗಾಢ ರಾತ್ರಿಯ ಒಂಟಿತನದ, ಕರುಳು ಇರಿಯುವ ನಿಟ್ಟುಸಿರು ಜಗತ್ತಿನ ಎಲ್ಲಾ ಬಾಗಿಲುಗಳನ್ನೂ ತಟ್ಟುತ್ತಿದೆ. ಅಧಿಕಾರದ ಸುಲಭ ಏಣಿಯಾಗಿ ಕತ್ತಿ ಹಿಡಿದ ಕೈಗಳು ಹಾಗೂ ಮನಸ್ಸುಗಳನ್ನು ಕಾಡುತ್ತಿದೆ.

ಬೆಳ್ಳಂಬೆಳಗ್ಗೆ ಇದೆಲ್ಲವೂ ನನಗೆ ನೆನಪಾದದ್ದು ಅನೇಕ ದೇಶಗಳಲ್ಲಿ ರಾಯಭಾರಿಯಾಗಿದ್ದ, ವಿದೇಶಾಂಗ ಕಾರ್ಯದರ್ಶಿಯಾಗಿದ್ದ ನಿರುಪಮಾ ರಾವ್ ಅವರ ಒಂದು ಟ್ವೀಟ್ ನಿಂದ.

‘ಕರ್ಣಿ ಸೇನಾ’ಗೆ ಉನ್ಮಾದ. ಪದ್ಮಾವತಿ ಸಿನೆಮಾವನ್ನು ನಿಲ್ಲಿಸಿಯೇ ಸಿದ್ಧ ಎಂದು ಹೊರಟಿದೆ. ಸುಡುವ ಕೈಗಳಿಗೆ ಬೆಂಕಿ ಎಂದರೆ ಪ್ರೀತಿ. ಹಾಗಾಗಿ ಅವು ಹೃದಯವನ್ನು, ಮಿದುಳನ್ನು ಕಳೆದುಕೊಂಡಿದೆ. ಮಕ್ಕಳ ಶಾಲಾ ವಾಹನಗಳನ್ನೂ ಬಿಡದೆ ಸುಡಲು ಹೊರಟಿದ್ದಾರೆ. ಮಕ್ಕಳ ಕಣ್ಣಲ್ಲಿನ ಭಯ, ದನಿಯ ಆತಂಕ ಯಾವುದೂ ಅವರನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ

ಈ ಎಲ್ಲವೂ ಆಗುತ್ತಿರುವಾಗ ನಾಡಿನ ದೊರೆ ದಾವೋಸ್ ನಲ್ಲಿ ಭಾರತದ ಹಿರಿಮೆಯನ್ನು ಎತ್ತಿ ಮಾತನಾಡುತ್ತಿದ್ದಾರೆ. ಆಗಲೇ ನಿರುಪಮಾ ರಾವ್ ಕೇಳಿದ್ದು- ಈ ಇಡೀ ದಾವೋಸ್ ನ ಸುಗಂಧ ದ್ರವ್ಯಗಳು ನಮ್ಮ ಪ್ರಜಾಪ್ರಭುತ್ವಕ್ಕೆ ತಟ್ಟಿರುವ ಕಳಂಕದ ಕೆಟ್ಟ ವಾಸನೆಯನ್ನು ಅಡಗಿಸಲಾರವು.

“All the perfumes of Davos cannot mask the foul odour of caste prejudice, backwardness,hubris, and thuggery that stain our democracy. But when do we listen and learn? We are self-delusional if we think we’ve arrived at the global high table.”

‘ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರಿಗೊಂದೆ ಭಾರತ ಮಂದಿರ..’ ಎಂದುಕೊಂಡ ‘ನಾವು ಎಳೆಯರು ನಾವು ಗೆಳೆಯರು ಹೃದಯ ಬಾನಿನ ಚಂದಿರ’ವಾದ ಮಕ್ಕಳ ಚೀತ್ಕಾರ ನಿಮ್ಮನ್ನು ತಟ್ಟದೇ ಹೋದರೆ ನೀವು ಷೇಕ್ಸ್ಪಿಯರ್ ನ ನಾಟಕದ ಸಾಲುಗಳಿಗೆ ತೀರಾ ಹತ್ತಿರದಲ್ಲಿದ್ದೀರಿ ಎಂದೇ ಅರ್ಥ..

‍ಲೇಖಕರು avadhi

January 25, 2018

ನಿಮಗೆ ಇವೂ ಇಷ್ಟವಾಗಬಹುದು…

ಕೋಡಂಗಿಗೆ ಇನ್ನು ಕೆಲಸವಿಲ್ಲ…

ಕೋಡಂಗಿಗೆ ಇನ್ನು ಕೆಲಸವಿಲ್ಲ…

ಜಿ ಎನ್ ಮೋಹನ್  'ಕೋಡಂಗಿಗೆ ಇನ್ನು ಕೆಲಸವಿಲ್ಲ'- ನಾನು ಬರೆದ ಕವಿತೆ ಇದು. ಜಗತ್ತೇ ಕೋಡಂಗಿಗಳಂತೆ ಕುಣಿಯುವವರಿಂದ ತುಂಬಿ ಹೋದಾಗ...

ದೇವನೂರು ಎಂಬ ‘ಜೋತಮ್ಮ’

ದೇವನೂರು ಎಂಬ ‘ಜೋತಮ್ಮ’

ಜಿ ಎನ್ ಮೋಹನ್ ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ...

3 Comments

  1. Sudha ChidanandGowd

    ಲೇಡಿ ಮ್ಯಾಕ್ ಬೆತ್ ಸುಡುವ ಆತ್ಮಸಾಕ್ಷಿಗೆ ಉದಾಹರಣೆ. ಆತ್ಮಸಾಕ್ಷಿ ಉಳ್ಳವರು, ಪಾಪಪ್ರಜ್ಷ ಉಳ್ಳವರು ಕೈ ನೋಡಿಕೊಳ್ಳುತ್ತಿರುತ್ತಾರೆ… ಸ್ವಚ್ಛವಾಗಿದೆಯೇ ಎಂದು…
    ಇಲ್ಲದವರ ಕುರಿತು… ಹೇಳುವುದೇನಿದೆ..?

    Reply
  2. Mamatha

    ನಮಸ್ತೆ.
    ‘ಮಲೆನಾಡು ಡೈರಿ’ ಅಂಕಣಗಳು ಇನ್ನು ಬರೋದಿಲ್ವ?

    Reply
  3. nutana doshetty

    history repeats..
    entha marmaghata prashne..! kalvala..!

    Reply

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This