ಇದೀಗ ‘ರಾಜಧಾನಿಯಲ್ಲಿ ನಿಲುವಂಗಿ’
ಸರ್ಕಾರಿ ನೌಕರಿಯಲ್ಲಿರುವವರು ಸಿಗುವ ಸಂಬಳದಲ್ಲಿ ಒಂದು ಸೈಟೋ, ಮನೆಯೋ ಮಾಡಿಕೊಂಡು ಚಿಕ್ಕದಾಗಿ ಚೊಕ್ಕದಾಗಿ ಬದುಕನ್ನ ನಡೆಸುತ್ತಾ ನೆಮ್ಮದಿಯಾಗಿ ರಿಟೈರ್ ಆದರೆ ಸಾಕಪ್ಪಾ ಅನ್ನುವವರೇ ಹೆಚ್ಚು. ಅದಕ್ಕೆ ಅಪವಾದವೆಂಬಂತೆ ಹಲವರು ಕಲೆ, ಸಾಹಿತ್ಯ, ಸಂಘಟನೆ ಹೀಗೆ ಹುಚ್ಚೊಂದನ್ನು ಹೆಗಲ ಮೇಲೆ ಹೊತ್ತು ಸದಾ ಕ್ರಿಯಾಶೀಲವಾಗಿ ವೃತ್ತಿ- ಪ್ರವೃತ್ತಿಗಳನ್ನ ಸಾಕಿಕೊಂಡು ಸಾಗುವುದರಲ್ಲೇ ನೆಮ್ಮದಿ ಎನ್ನುತ್ತಾರೆ.
ಅಂತವರ ಸಾಲಿಗೆ ಸೇರುವ ಸ್ನೇಹಿತ ನಮ್ಮ Ulivala Mohan Kumar ಜಿಲ್ಲೆಯೊಂದರ ಜವಾಬ್ದಾರಿಯುತ ತಹಸೀಲ್ದಾರ ಗಿರಿಯ ಜೊತೆ ಜೊತೆಗೇ ನಾಟಕದ ನಿರ್ದೇಶನವೆಂಬ ನವಿಲುಗರಿಯೊಂದನ್ನ ತಲೆಗೆ ಸಿಕ್ಕಿಸಿಕೊಂಡು, ಉಲಿವಾಲ ಸ್ಕೂಲ್ ಆಫ್ ಡ್ರಾಮ ಎಂಬ ಸಂಸ್ಥೆಯನ್ನ ಕಟ್ಟಿಕೊಂಡು, ಹಾಸನದಲ್ಲಿ ತಂಡವೊಂದನ್ನು ಒಟ್ಟುಗೂಡಿಸಿಕೊಂಡು ‘ ನಿಲುಂಗಿಯ ಕನಸು’ ಎಂಬ ಹಾಡ್ಲಹಳ್ಳಿ ನಾಗರಾಜ್ ರವರ ರೈತ ಬದುಕಿನ ಬವಣೆಯನ್ನು ಕಟ್ಟಿಕೊಡುವ ಚಂದನೆಯ ನಾಟಕವನ್ನು ಈಗಾಗಲೇ ಹಲವು ಬಾರಿ ಯಶಸ್ವಿ ಪ್ರದರ್ಶನ ಮಾಡಿ ಗೆದ್ದಿದ್ದಾರೆ.
ಇನ್ನೊಂದು ವಿಶೇಷ ಅಂದ್ರೆ ಇವರ ಹೆಜ್ಜೆಗೆ ಹೆಜ್ಜೆ ಜೋಡಿಸುವ ಇವರ ಮಗ Vishwas Ulivala. ಇವತ್ತಿನ ಯುವ ನಾಟಕಕಾರರಲ್ಲಿ ನಾವು ಹುಡುಕುವ ಎಲ್ಲ ಖೂಬಿಗಳನ್ನು ಹೊತ್ತ ವಿನಯವಂತ ಹುಡುಗ. ಈತನ ಪಾತ್ರ ಇವತ್ತಿನ ನಾಟಕದ ವಿಶೇಷತೆ. ಈ ಎಲ್ಲಾ ಅನುಭೂತಿಗಾಗಿ ಇವತ್ತು ಮತ್ತೆ ಕಲಾಗ್ರಾಮದಲ್ಲಿ ಸೇರೋಣ ಬನ್ನಿ.
-ದಯಾ ಗಂಗನಗಟ್ಟ
0 ಪ್ರತಿಕ್ರಿಯೆಗಳು