ಪರಮೇಶ್ವರ ಗುರುಸ್ವಾಮಿ ಕಾಲಂ
ನೆಗೆಟಿವ್ ಲೋಕ
“ಇವುಗಳನ್ನ ಡೆವಲಪ್ ಮಾಡಿ ಸಣ್ಣ ಫೋಟೋಗಳನ್ನ ಪ್ರಿಂಟ್ ಮಾಡು. ನೆಗೆಟೀವ್ಸ್ ನಿನ್ನ ಹತ್ತಿರವೇ ಇರಲಿ. ಕೆಲವನ್ನ ಎನ್ಲಾರ್ಜ್ ಮಾಡಬೇಕು. ನೋಡಿ ಹೇಳುತ್ತೇನೆ.” ಎಂದದ್ದು ನನ್ನ ಮೇಷ್ಟ್ರು . ಮೈಸೂರಿನ ಕ್ಯಾಂಪಸ್ಸಿನಲ್ಲಿ.
ಜೋಬಿನಿಂದ ಅವರು ಮೊದಲು ಹೊರತೆಗೆದಿದ್ದು ನಾಲ್ಕು ಫಿಲ್ಮ್ ರೋಲ್ ಗಳನ್ನ.. ನಾನು ಅವಾಕ್ಕಾಗಿ ನಿಂತಿದ್ದೆ. ಅದಕ್ಕೇ ಅವರು ಅನಂತಮೂರ್ತಿ . ಜಗತ್ತಿನ ಅನಂತವೂ ಇವರಿಗೆ ಗೊತ್ತಿರದೇ ಇರಲು ಸಾಧ್ಯವಿಲ್ಲ ಎನ್ನುವಂತೆ ಅವರು ಸಾಹಿತ್ಯ ಮಾತ್ರವಲ್ಲ ತಂತ್ರಜ್ಞಾನಕ್ಕೂ ಅಪ್ಡೇಟ್ ಆಗುತ್ತಿದ್ದರು.
ನಾಲ್ಕು ಫಿಲಂ ರೋಲ್ ಕೊಟ್ಟು ಅವರು ಹೋಗಿಬಿದಬಹುದಿತ್ತು. ಏಕೆಂದರೆ ಅವರು ಮೇಷ್ಟ್ರು . ಬೇರೆ ಅನೇಕರು ಹಾಗೆ ಮಾಡಿದ್ದೂ ಉಂಟು. ಅದರಇವರು ಹೆಸರಿಗೆ ಮಾತ್ರ ಮೇಷ್ಟ್ರು. ಕ್ಲಾಸ್ ರೂಂ ನಲ್ಲಾಗಲೀ, ಹೊರಗಡೆ ಆಗಲೇ ಮುಗುಳ್ನಕ್ಕು, ಹೆಗಲ ಮೇಲೆ ಕೈ ಹಾಕಿ ನಮ್ಮೆಲ್ಲರಾ ಜೊತೆ ಹರಟುತ್ತಿದ್ದರು. ಈ ಕಾರಣಕ್ಕಾಗೆ ನಮಗೆ ಎಂತಹವರನ್ನೂಪ್ರಶ್ನಿಸುವ, ರೋಚ್ಚಿಗೆಲಿಸುವ ಆತ್ಮವಿಶ್ವಾಸವಿತ್ತು. ಅದು ಅನಂತಮೂರ್ತಿಯವರನ್ನೂ ಬಿಡುತ್ತಿರಲಿಲ್ಲ. ಕ್ಲಾಸ್ ನಲ್ಲಿ ಸಾಕಷ್ಟು ಟೀಕೆ ಮಾಡುತ್ತಿದ್ದೆವು ಅನಂತಮೂರ್ತಿ ಆಗ ಎಷ್ಟು ಚೆನ್ನಾಗಿ ನಗುತ್ತಿದ್ದರೆಂದರೆ ಆಹಾ ನಾನು ಹೇಳಿಕೊಟ್ಟದ್ದು ಸಾರ್ಥಕವಾಯಿತು ಎನ್ನುವಂತೆ
ರೋಲ್ ಕೈನಲ್ಲಿ ಹಿಡಿದು ನಿಂತಿದ್ದ ನನ್ನತ್ತ ಜೋಬಿನಿಂದ ಪರ್ಸ್ ತೆಗೆದು ಆ ಕೆಲಸಕ್ಕೆ ಕೊಡಬೇಕಾದ್ದಕ್ಕಿಂತ ಹೆಚ್ಚೇ ಹಣ ಕೊಟ್ಟರು. ಸೊಂಟದಿಂದ ಭುಜದವರೆಗೆ ನಾಗರ ಹೆಡೆಯಂತೆ ತುಸುವೇ ತೊನೆಯುತ್ತ ತಲೆಯನ್ನು ಸ್ಪ್ರಿಂಗ್ ನಂತೆ ಕುಣಿಸಿ ಅವರ charismatic trade mark ನಗೆಯನ್ನು ಸೂಸಿದ್ದರು.
ಮಾಡಿ ಕೊಟ್ಟೆ, ನೆಗೆಟೀವ್ ನೋಡಿದಾಗ ಅನಿಸಿತು ಹೌದಲ್ಲಾ ಇವರು ನೆಗೆಟಿವ್ ಅಲ್ಲ, ಪಾಸಿಟಿವ್.
The most liked article of Mr Paramesvara Guruswamy