
ಮರಾಕಿನಿ ನಾರಾಯಣ ಮೂರ್ತಿ
ಮರಾಠೀ ಮೂಲದ “ಆನಂದಭಾವಿನಿ” ಯನ್ನು ಗಿರಿಜಾ ಶಾಸ್ತ್ರಿಯವರು ಕನ್ನಡಕ್ಕೆ, ಸುಧಾ ಆಡುಕಳ ರಂಗರೂಪಕ್ಕೆ, ಶ್ರೀಪಾದ ಭಟ್ಟರು ನಿರ್ದೇಶನ. ಆರಂಭದ ಒಂದೈದು ನಿಮಿಷ ಸ್ವಲ್ಪ ನಾಟಕೀಯವೆನಿಸಿದರೂ ಮತ್ತೆ ತುಂಬಾ ಸಹಜವಾದ, ಚಂದದ ಪ್ರಸ್ತುತಿ. ಮಾಮೂಲು ನಾಟಕಗಳಿಗಿಂತ ಸಂಭಾಷಣೆ ಆಪ್ತವೆಂದೆನಿಸಿತು.
ಮರದೊಂದಿಗಿನ ಹಾಡಿನ ದೃಶ್ಯ, ಹಡಗು ಪ್ರಯಾಣದ ಸಂದರ್ಭ, ಕೊನೆಯ ದೃಶ್ಯಗಳಂತೂ… ಆಹಾ.Vyasa Rao M N ಅವರ “ನಿನ್ನ ಕಂಗಳ ಕೊಳದಿ.. “ಮತ್ತು “ಯಾರು ಈ ಗಾರುಡಿಗ…” ಹಾಡುಗಳು. ಇದನ್ನು ಬರೆದವರು ಯಾರೆಂದು ಗೊತ್ತಿಲ್ಲ. (ಜಿ ಯಸ್ ಯಸ್ ಅಂತ Leelavathi HR ಹೇಳಿದ್ದಾರೆ) ಕನ್ನಡಕ್ಕೆ ತಂದ ಗಿರಿಜಾ ಶಾಸ್ತ್ರಿಯವರ ಉಪಸ್ಥಿತಿ, ಅವರ ಸಣ್ಣ ಭಾಷಣ ಪ್ಲಸ್ ಪಾಯಿಂಟ್.
ಹಾಗೆಯೇ ನೃತ್ಯ ನೆರವು ಮಾಡಿದ ಮಂಜುಳಾ ಸುಬ್ರಹ್ಮಣ್ಯ ಕೂಡಾ ಇದ್ದರು. ನಾಟಕದ ಬಳಿಕ ರಘುವಣ್ಣ ಕೇಳಿಕೊಂಡರೂ, ಸಿರಿ ಮತ್ತು ಸವಿತಕ್ಕ ಹಾಡಲೇಯಿಲ್ಲ. (ಮಂಗಳೂರಿನಲ್ಲಿ ಹಾಡಿದ್ದನ್ನು ಬರೆದು ಅಶೋಕವರ್ಧನರು ಆಸೆ ಹುಟ್ಟಿಸಿದ್ದರು) ನಿರಂಜನ ವಾನಳ್ಳಿಯವರ ಮನೆಗೆ ಆರೇಳು ಬೈಕಲ್ಲಿ ಆಶೋಕವರ್ಧನರ ನೇತೃತ್ವದಲ್ಲಿ ಮೂವತ್ತು + ವರ್ಷಗಳ ಹಿಂದೆ ಧಾಳಿಯಿಟ್ಚು ಒಂದು ರಾತ್ರಿ ಉಳ್ಕೊಂಡಿದ್ದು, ಅಪ್ಪೆಮಿಡಿ ಕರಡಿಗೆಯನ್ನು ದಾಕ್ಷಿಣ್ಯರಹಿತರಾಗಿ ಖಾಲಿ ಮಾಡಿದ್ದನ್ನು ಸವಿತಕ್ಕನಲ್ಲಿ ಊದಿದೆ ರಘುನಾಥ್ ಮತ್ತು ಗಿರಿಜಾ ಶಾಸ್ತ್ರಿಯವರಲ್ಲಿ ಬರೀ ಎರಡು ನಿಮಿಷ ಮಾತಾಡಲಾಯಿತಷ್ಟೆ. ಅವರು ಬರುವುದು ಗೊತ್ತಿದ್ದರೆ ಬೇಗ ಹೋಗಬಹುದಿತ್ತು.

ಮಧ್ಯಾಹ್ನ ಮದುವೆಯಂಗವಾದ ಕಾರ್ಯಕ್ರಮದಲ್ಲಿ ಸಿಕ್ಕಿದ ರಘುವಣ್ಣನಲ್ಲಿ ಇಲ್ಲಿ ಊಟ ಮಾಡಿದ ಮೇಲೆ ನಿಮ್ಮಲ್ಲಿ ರಾತ್ರಿ ಹೇಗೆ ಅಂದಿದ್ದಕ್ಕೆ, ಸ್ವಲ್ಪ ಕಡಿಮೆ ಮಾಡಿ ಅಂತ ಹೇಳಿದರೂ, ನಮಗೆ ಅಪರೂಪವಾದ ಶೇಂಗಾ ಹೋಳಿಗೆಯನ್ನು ತಿನ್ನದಿರಲು ಹೇಗೆ ಸಾಧ್ಯ. (ಅವರ ಮಾತಿಗೆ ಬೆಲೆಕೊಟ್ಟು ಒಂದೇ ತಿಂದದ್ದು. ರಾಜಾಜಿಯವರ ಜಿಲೇಬಿ ಪ್ರಕರಣದಂತೆ, ಗವರ್ನರ್ರ ಗಾಡಿಯಂತಾಗಲಿಲ್ಲ) ಇನ್ನು ಕಾಡಿಗೆ ಪ್ರವೇಶ, ಡಿಸೆಂಬರಲ್ಲಿ ನೀನಾಸಂ ನಾಟಕಗಳಿಗೆ.
ನಾಟಕದ ಪಟಗಳನ್ನು ಸಿರಿ ವಾನಳ್ಳಿಯ ವಾಲಿಂದ ಕದಿಯಲಾಗಿದೆ.



0 ಪ್ರತಿಕ್ರಿಯೆಗಳು