ಆಧುನಿಕತೆಯ ಸ್ಪರ್ಶದೊಂದಿಗೆ ಒಕ್ಕಲಿಗ ಮುದ್ದಣ್ಣ…

ಮಹಾಂತೇಶ ನವಲಕಲ್

ಶಿವಸಂಚಾರ ಸಾಣೆಹಳ್ಳಿ ತಂಡ ಪರಮಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಶ್ರಮದ ಬಲದಿಂದ ಕಟ್ಟಿದ ನಾಟಕ ತಂಡ. ಅದು ಅನೇಕ ವರ್ಷಗಳಿಂದ ಈ ನಾಡಿನಲ್ಲಿ ನಾಟಕಗಳ ಮುಖಾಂತರ ವೈಚಾರಿಕತೆಯ ಹೊಸತು ಹರಡುತ್ತಿದೆ.
ಛಾಯಾ ಭಾರ್ಗವಿಯವರು ನಿರ್ದೇಶಿಸಿದ ಒಕ್ಕಲಿಗ ಮುದ್ದಣ್ಣ ಈಗ ಶಿವಸಂಚಾರ ನಾಟಕ-೨೦೨೧-೨೨ರಲ್ಲಿ ಪ್ರಮುಖ ನಾಟಕವಾಗಿ ಸಂಚಾರದಲಿ ಪಾಲ್ಗೊಂಡಿದೆ. ಇದನ್ನು ಬರೆದವರು, ಚಂದ್ರಶೇಖರ ತಾಳ್ಯ ಅವರು.

ಒಕ್ಕಲಿಗ ಮುದ್ದಣ್ಣ ಹನ್ನೆರಡನೆಯ ಶತಮಾನದಲ್ಲಿ ಶರಣಗಣದಲಿ ಒಕ್ಕಲಿಗ ಕಾಯಕ ಮಾಡುತ್ತಿದ್ದ ಒಬ್ಬ ಶರಣ. ಈತನ ಹೆಂಡತಿ ದಾನಮ್ಮ. ಸುಮಾರು ದಿನಗಳ ಕಾಲ ಊರು ಬಿಟ್ಟು ಕಲ್ಯಾಣ ಸೇರಿದ್ದ. ಮುದ್ದಣ್ಣ ಮತ್ತೆ ಊರಿಗೆ ಮರಳಿ ಅಲ್ಲಿ ಕಲ್ಯಾಣದಲಿ ಬಸವಣ್ಣನವರು ಏನೇನು ಕಾರ್ಯಗಳನು ಮಾಡಿದ್ದರೂ ಮಾಡುತ್ತಿದ್ದರೋ ಇಲ್ಲಿಯೂ ಮಾಡಲು ಮುಂದಾಗುವ ಶರಣ.

ನಾಟಕದ ಆರಂಭವೇ ರಾಜಭಟರು ಸುಂಕ ಕೊಡದ ಪ್ರಜೆಗಳನು ಹುಡುಕುವ ಹುಡುಕಾಟದಿಂದ. ರಾಜಭಟರು ಸುಂಕ ವಸೂಲಿಗಾಗಿ ರೈತರನು ಹೆಡೆಮುರಿ ಕಟ್ಟಿ ಹಿಡಿದು ತರುತ್ತಾರೆ. ಮೂರು ವರ್ಷದಿಂದ ಬರಬಿದ್ದು ಕಷ್ಟಕೋಟಲೆಗಳಲಿ ಬದುಕುತ್ತಿದ್ದ ರೈತರಿಗೆ ತೆರಿಗೆ ಎಂಬುದು ತಲೆದಂಡವಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲಿ ಅವರು ಸುಂಕ ಕಟ್ಟಲು ಅಸಹಾಯಕರಾಗಿದ್ದಾರೆ. ಇದನು ಛಾಯಾಭಾರ್ಗವಿಯವರು ಎಷ್ಟು ಅದ್ಭುತವಾಗಿ ಚಿತ್ರಿಸಿದ್ದಾರೆ ಎಂದರೆ ರೈತರ ಸಮಸ್ಯೆಗಳನು ಇನ್ನೂ ಪರಿಣಾಮಕಾರಿಯಾಗಿ ತೋರಿಸಿತು.

ಪ್ರಚಲಿತದಲ್ಲಿ ರೈತರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು, ಪರಿಣಾಮಗಳನ್ನು ನಾಟಕದಲ್ಲಿ ರೈತರ ಕಷ್ಟ, ಸುಂಕದ ಸಮಸ್ಯೆ ಜಿ.ಎಸ್.ಟಿ. ಸಮಸ್ಯೆಗಳು, ಪರಿಣಾಮಕಾರಿಯಾಗಿ ಅಳವಡಿಸಿದ್ದಾರೆ. ರೈತರು ಇಂದು ಸಂಕೀರ್ಣವಾದ ಕಷ್ಟದ ಸ್ಥಿತಿಯಲ್ಲಿದ್ದಾರೆ ಅವರ ಸಮಸ್ಯೆಗಳು ಅನಂತಕೋಟಿ ಅವುಗಳನ್ನು ಭೇದಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಅಂತಹ ಸನ್ನಿವೇಶದಲ್ಲಿ ನಾಟಕವು ೧೨ನೇ ಶತಮಾನದ ಮುದ್ದಣ್ಣನ ಇತಿಹಾಸದೊಂದಿಗೆ ವರ್ತಮಾನದ ಅನೇಕ ಸಮಸ್ಯೆಗಳಿಗೆ ಮುಖಾಮುಖಿಯಾಗಿಸಿದ್ದಾರೆ.

ಹಿಂದೆ ಬಿ.ವಿ.ಕಾರಂತರು ನನಗೆ ಕಥೆಗಿಂತ ಕಂಟೆಂಟ್ ಮುಖ್ಯ. ಒಂದು ಪತ್ರಿಕೆಯ ಸಂಪಾದಕೀಯವನ್ನೆ ನಾಟಕ ಮಾಡಬಲ್ಲೆ ಎಂದು ಹೇಳಿದ್ದರು. ಅದರಂತೆ ಇಲ್ಲಿಯೂ ಮುದ್ದಣ್ಣನ ಕತೆ ನಪಮಾತ್ರ ಜೊತೆಗೆ ಟಿ.ವಿ. ಇದೆ ವಾರ್ತೆಗಳು ಬರುತ್ತಿವೆ. ಜಿ.ಎಸ್.ಟಿ. ಇದೆ ರೈತರ ಹೋರಾಟವಿದೆ. ಕುಲಶ ಎಂಬ ಹೆಸರಿನ ಗಾಮಲೆಕ್ಕಿಗನಿದ್ದಾನೆ. ಆತನು ಮಾಡುವ ಮರೆಮೋಸಗಳಿವೆ.

ಸ್ವಲ್ಪ ಹಿಂದೆ ಹೊದರೆ, ಸ್ಥಾಪರ ಧಿಕ್ಕರಿಸಿ ಇಷ್ಟಲಿಂಗವನು ಅದರ ಮಹತ್ವವನು ಹೇಳುವ ಮುದ್ದಣ್ಣ. ೧೯ನೇ ಶತಮಾನದ ಪ್ರಮುಖ ಥಿಯರಿಗಳಾಗಿದ್ದ ದಾಸ್ ಕ್ಯಾಪಿಟಲ್ ಮತ್ತು ಮ್ಯಾನಿಫೆಸ್ಟೋದ ಅನೇಕ ಅಂಶಗಳನು ಚರ್ಚಿಸುತ್ತಾನೆ. ಭೂಮಿಯನು ಸಾರ್ವಜನಿಕ ಆಸ್ತಿಯನ್ನಾಗಿ ಮಾಡುವರು ಸರ್ವರು ದುಡಿದು ತಿನ್ನಬೇಕೆಂಬ ಆಶಯದ ಬಸವತತ್ವ ಮತ್ತು ಮಾರ್ಕ್ಸ್ ಮಹಾಶಯನ ತತ್ವಗಳನು ಅನುಷ್ಠಾನಕ್ಕೆ ಒಡ್ಡುತ್ತಾನೆ. ಅದಕ್ಕಾಗಿ ಇದು ಒಂದು ಕಾಲಾತೀತ ಕೃತಿಯಾಗಿ ನಮ್ಮ ಮುಂದೆ ಕಾಣುತ್ತದೆ.

ಛಾಯಾ ಭಾರ್ಗವಿಯವರು ತಮ್ಮ ಎಲ್ಲಾ ಅನುಭವವನ್ನು ಧಾರೆ ಎರೆದಿದ್ದಾರೆ. ಮುಂದಿನಂತೆ ಕಾಸ್ಟೂಮ್ಸ್, ನೆರಳು ಬೆಳಕು ಸೆಟ್ ಅದ್ಭುತವಾಗಿದೆ ಹಾಡುಗಳು ಸನ್ನಿವೇಶಕ್ಕೆ ತಕ್ಕಂತೆ ಚೆನ್ನಾಗಿವೆ.

‍ಲೇಖಕರು Admin

January 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: