Talki(ತಲ್ಕಿ) 50 ವಯಸ್ಸು ದಾಟಿದ ಟ್ರಾನ್ಸ್ ಸಮುದಾಯದ ಕಲಾವಿದರು ಸೇರಿ ತಾವೇ ಕಟ್ಟಿ ಕೊಂಡಿರುವ ವಿಶಿಷ್ಟ ನಾಟಕ. ಇದು ಅವರ ಕನಸಿನ ನಾಟಕ ಕೂಡ.ಇಂತಹ ಪ್ರಯೋಗಗಳು ರಂಗಭೂಮಿಯ ಪರಿಧಿಯನ್ನು ವಿಸ್ತರಿಸುತ್ತಾ ಅದರ ‘ಘನತೆ’ಯನ್ನು ಹೆಚ್ಚಿಸುತ್ತವೆ ಅನ್ನುವುದು ನನ್ನ ಬಲವಾದ ನಂಬಿಕೆ.
ನಾಟಕದ ಪಾತ್ರಧಾರಿಗಳಾದ ಚಾಂದಿನಿ, ಶೋಭಕ್ಕ,ರೇವತಿ ಅಮ್ಮ ನನಗೆ ಹಳೆಯ ದೋಸ್ತಿಗಳು. ಇವರ ಜೊತೆಗೆ ಬಾನಮ್ಮ, ಸರವಣ, ಶಾಂತಮ್ಮ ,ತ್ರಿಮೂರ್ತಿ ಎಲ್ಲ ಸೇರಿ ಕಳೆದ ವರ್ಷ ಚಂದ್ರು ಮತ್ತು ನಾನು ಒಟ್ಟಿಗೆ ಒಂದು ಶಿಬಿರದಲ್ಲಿ ಇದ್ದೆವು. ಅಲ್ಲಿನ ಅವರು ಹಂಚಿಕೊಂಡ ಪ್ರೀತಿ, ಪ್ರೇಮ, ಊಟ, ಬದುಕು, ಸಮುದಾಯದ ಕುರಿತಾದ, ಕಥೆಗಳು ನಾವು ಎಂದಿಗೂ ಕಾಪಿಟ್ಟುಕೊಳ್ಳಬೇಕಾದಂತಹವು.
ಆ ಕಥನಗಳ ಮುಂದುವರಿಕೆ ಎಂಬಂತಿರುವ ‘ ತಲ್ಕಿ ‘ ನಾಟಕ ನೀವು ತಪ್ಪದೆ ನೋಡಲೇಬೇಕಾದ ನಾಟಕ. ನಾಳೆ ಸಂಜೆ ಕಲಾ ಗ್ರಾಮಕ್ಕೆ ತಪ್ಪದೆ ಬನ್ನಿ.
-ಲಕ್ಷ್ಮಣ್ ಕೆ ಪಿ
0 ಪ್ರತಿಕ್ರಿಯೆಗಳು