ಜಿ ಪಿ ಬಸವರಾಜು ಅವರ ಕವಿತೆಗಳು ನನ್ನನ್ನು ಎಷ್ಟು ಆಕರ್ಷಿಸಿದ್ದವೋ ಅಷ್ಟೇ ಆಕರ್ಷಿಸಿದ್ದು ಅವರ ಚಿಂತನೆಗಳು. ‘ಬರಹಗಾರ ನೀನು ಯಾರ ಪರ?’ ಎಂದು ನಿಜಕ್ಕೂ ಆತಂಕದಿಂದ ಕೇಳಬೇಕಾದ ದಿನಗಳು ಇವು. ಬಹುಷಃ ಜಿ ಪಿ ಬಸವರಾಜು ಅವರನ್ನು ಬಿಟ್ಟು. ಅವರ ಸಮಾಜಮುಖಿ ಚಿಂತನೆಗಳು ಅವರ ಬರಹದ ಆರಂಭದ ದಿನಗಳಿಂದ ಇಲ್ಲಿಯವರೆಗೂ ಪ್ರಶ್ನಾತೀತವಾಗಿಯೇ ಉಳಿದಿವೆ.
ನಾನು ಬಸವರಾಜು ಅವರನ್ನು ಓದಿ ಬೆಳೆದವನು. ಅವರ ಕವಿತೆ, ಪ್ರವಾಸ ಕಥನಕ್ಕೆ ಮಾರು ಹೋದವನು. ಅವರ ಕೈಕುಲುಕಿದ್ದು ನಾನು ಇನ್ನೂ ಕಾಲೇಜು ಓದುತ್ತಿದ್ದ ದಿನಗಳಲ್ಲಿ ಮಂಗಳೂರಿಗೆ ಸಂಕಿರಣಕ್ಕೆಂದು ಹೋದಾಗ. ಮಂಗಳೂರಿನಲ್ಲಿ ಕೊಣಾಜೆಯಿಂದ ಬೈಕ್ ಏರಿ ಕಡಲನ್ನು ಬಗಲಲ್ಲಿ ಇಟ್ಟುಕೊಂಡು ಸಾಗುತ್ತಿದ್ದ ಬಸವರಾಜು ಅವರ ಚಿತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ನಂತರ ‘ಪ್ರಜಾವಾಣಿ’ಯ ಅಂಗಳದಲ್ಲೇ ನಾವಿಬ್ಬರೂ ಇದ್ದ ಕಾರಣ ಮೇಲಿಂದ ಮೇಲೆ ಅವರೊಡನೆ ಮಾತನಾಡುವ ಅವಕಾಶ ಬಂದಿದೆ. ಬಸವರಾಜು ಅವರ ಜೊತೆಗಿನ ಚರ್ಚೆಗಳು ನನ್ನ ಪ್ರಜ್ಞೆಯನ್ನು ತಿದ್ದಿವೆ.
ಬಸವರಾಜು ಅವರು ‘ಮಯೂರ’ದ ಮುಖ್ಯಸ್ಥರಾಗಿದ್ದು ಅವರೊಳಗಿನ ಬರಹಗಾರನಿಗೂ, ಪತ್ರಕರ್ತನಿಗೂ ಸಂದ ಮನ್ನಣೆಯೇ. ಜಿ ಎಸ್ ಸದಾಶಿವ, ಎ ಈಶ್ವರಯ್ಯ ಅವರ ನಂತರ ಮಾಸಿಕ ಪತ್ರಿಕೋದ್ಯಮದಲ್ಲಿ ಬಸವರಾಜು ಅವರದ್ದೇ ಮುಖ್ಯ ಹೆಸರು.
ಅವರು ಸಂಪಾದಕ ಸ್ಥಾನವನ್ನು ಎಷ್ಟು ಸೃಜನಶೀಲವಾಗಿ ನಿರ್ವಹಿಸಿದರು ಎನ್ನುವುದಕ್ಕೆ ಅವರು ರೂಪಿಸಿರುವ ‘ಅವಧಿ’ ವಿಶೇಷ ಸಂಚಿಕೆಯೇ ಸಾಕ್ಷಿ. ಅವರ ಸಂಪಾದಕೀಯ ಅವರ ಒಳಗಿನ ತಳಮಳಕ್ಕೆ ಕನ್ನಡಿ.
ಇಂದು ಮತ್ತು ನಾಳೆ ಎರಡು ದಿನ ಬಸವರಾಜು ಅವರ ನೇತೃತ್ವದಲ್ಲಿ ‘ಅವಧಿ’ ಹೊರಬರುತ್ತಿದೆ. ಇದು ಬಸವರಾಜು ಅವರಿಗಲ್ಲ.. ‘ಅವಧಿ’ಗೆ ಒಂದು ಮನ್ನಣೆ.
ಖುಷಿಯಾಯಿತು
ಅವಧಿಗೆ ಬಂದು ಇಲ್ಲಿನ ಸಾಹಿತ್ಯ ಬರಹಗಳನ್ನು ಕಂಡು ಓದಿ ತುಂಬಾ ಖುಷಿಯಾಯಿತು
ಅವಧಿಯ ಕವನಗಳನ್ನು ಓದುವುದೆ ಚಂದ
ಅವದಿಗೆ ನಾವು ಬರೆಯಬಹುದ
ಎಷ್ಟು ಚೆಂದ ಬರಹ, ಎಷ್ಟೊಂದು ಒಳನೋಟ…
ಅವದಿಗೆ ನಾವು ಬರೆಯಬಹುದ