ಖ್ಯಾತ ಚಲನಚಿತ್ರ ಪತ್ರಕರ್ತ, Cine Buzz ಅಂತರ್ಜಾಲ ಚಲನಚಿತ್ರ ತಾಣದ ಪ್ರಧಾನ ಸಂಪಾದಕ ಅರುಣ್ ಕುಮಾರ್ ಜಿ ಅವರಿಗೆ ಕರ್ನಾಟಕ ಕಾರ್ಯನಿರತ ಸಂಘ (ಕೆಯುಡಬ್ಲ್ಯುಜೆ)ದ 2023-24 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಿಸಲಾಗಿದೆ.
ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಫೆಬ್ರುವರಿ 3 ಮತ್ತು 4 ರಂದು ದಾವಣಗೆರೆಯಲ್ಲಿ ಜರುಗಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
ಕೆಯುಡಬ್ಲ್ಯುಜೆ ಮಾಧ್ಯಮದ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಘೋಷಿಸಿದ್ದು ಚಲನಚಿತ್ರ ರಂಗದಲ್ಲಿ ಅರುಣ್ ಕುಮಾರ್ ಹಾಗೂ ವಿಜಯ ಕರ್ನಾಟಕದ ಬಬಿತಾ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.
‘ಲಂಕೇಶ್ ಪತ್ರಿಕೆ’ಯ ಮೂಲಕ ಪತ್ರಿಕೋದ್ಯಮಕ್ಕೆ ಅಡಿಯಿಟ್ಟ ಅರುಣ್ ನಂತರ ಪುಸ್ತಕ ವಿನ್ಯಾಸದತ್ತ ಒಲವು ತೋರಿಸಿದರು. ನಂತರ ಚಲನಚಿತ್ರ ಕ್ಷೇತ್ರದೆಡೆಗೆ ಹೊರಳಿದ ಅವರು Cini Buzz ಅಂತರ್ಜಾಲ ತಾಣ ಆರಂಭಿಸುವ ಮೂಲಕ ಯಶಸ್ವಿ ಚಲನಚಿತ್ರ ಪತ್ರಕರ್ತರಾದರು. ಪ್ರಸ್ತುತ ರಾಜ್ಯ ಚಲನಚಿತ್ರ ಪತ್ರಕರ್ತರ ಸಂಘದ ಕಾರ್ಯದರ್ಶಿ. ಚಲನಚಿತ್ರಗಳ ಹಲವು ರಂಗದಲ್ಲಿ ಅವರು ದುಡಿದಿದ್ದಾರೆ.
0 ಪ್ರತಿಕ್ರಿಯೆಗಳು