ಅರವಿಂದ ಮಾಲಗತ್ತಿ ರಾಜೀನಾಮೆ ನೀಡಬಾರದು..

‘ಅವಧಿ’ ನಿನ್ನೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅರವಿಂದ ಮಾಲಗತ್ತಿ ಅವರೊಂದಿಗೆ ಫೇಸ್ ಬುಕ್ ನೇರ ಪ್ರಸಾರ ಹಮ್ಮಿಕೊಂಡಿತ್ತು.

ಸಂವಾದದಲ್ಲಿ ಮಾತನಾಡುತ್ತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅರವಿಂದ ಮಾಲಗತ್ತಿ ಅವರು ಹೊಸ ಸರ್ಕಾರ ಬಹುಮತ ಸಾಬೀತು ಪಡಿಸಿದ ತಕ್ಷಣ ರಾಜೀನಾಮೆ ನೀಡುವುದಾಗಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಖ್ಯಾತ ರಂಗಕರ್ಮಿ ಪ್ರಸಾದ್ ರಕ್ಷಿದಿ ಅವರ ಅಭಿಪ್ರಾಯ ಇಲ್ಲಿದೆ-

ನೀವೂ ಚರ್ಚೆಯಲ್ಲಿ ಭಾಗವಹಿಸಬಹುದು. [email protected]ಗೆ ಕಳಿಸಿ  

ಪ್ರಸಾದ್ ರಕ್ಷಿದಿ 

ಅರವಿಂದ ಮಾಲಗತ್ತಿಯವರು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಅವರು ನಂಬಿರುವ ಸಿದ್ಧಾಂತ, ತತ್ವಗಳ ಪ್ರಕಾರ ಸರಿಯಿರಬಹುದು. ಆದರೆ ಕೆಲವು ವಿಚಾರಗಳ ಬಗ್ಗೆ ಅವರು ಗಮನಹರಿಸಬೇಕು.

ಹೌದು ಎಲ್ಲ ಸರ್ಕಾರಿ (ಸ್ವಾಯತ್ತ) ಸಂಸ್ಥೆಗಳ ಪದಾಧಿಕಾರಿಗಳ ಆಯ್ಕೆಯ ಹಿಂದೆ. ರಾಜಕೀಯ ಒಲವುಗಳು ಖಂಡಿತ ಕೆಲಸ ಮಾಡುತ್ತದೆ. ತಟಸ್ಥ, ಅಪೊಲಿಟಿಕಲ್ ಎನ್ನುವುದು ಒಂದು ಗೋಸುಂಬೆತನವಷ್ಟೆ. ಆದರೆ ಈ ರೀತಿಯ ಲಾಭದಾಯಕವಲ್ಲದ, ಸಾಂಸ್ಕೃತಿಕ ಹುದ್ದೆಗಳಿಗೆ ನೇಮಕವಾದವರು, ತಮ್ಮ ತಮ್ಮ ಸಿದ್ಧಾಂತ, ತತ್ವಗಳೇನೇ ಇರಲಿ ಅದನ್ನು ಮೀರಿ ನಿಷ್ಪಕ್ಷವಾತವಾಗಿ ಕೆಲಸ ಮಾಡುತ್ತಾರೆ ಎಂಬುದು ನಿರೀಕ್ಷೆ.

ಈಗ ಸರ್ಕಾರಗಳು ಬದಲಾದ ತಕ್ಷಣ ರಾಜೀನಾಮೆ ಕೊಟ್ಟರೆಂದರೆ, ಇದುವರೆಗೆ ಅವರು ಪಕ್ಷಪಾತಿಯಾಗಿ ತನ್ನನ್ನು ನೇಮಿಸಿದ ಪಕ್ಷಕ್ಕೆ ನಿಷ್ಟರಾಗಿ ಕೆಲಸ ಮಾಡುತ್ತಿದ್ದರು ಎಂದು ಒಪ್ಪಿಕೊಂಡಂತಾಗುವುದಿಲ್ಲವೇ. ಇದು ಮುಂದೆ ಬರುವವರಿಗೂ ಅನ್ವಯಿಸುತ್ತದೆ. ಇದು ಆ ರೀತಿ ಆಗಬಾರದು.

ಹೌದು ಮುಂದಿನ ಸರ್ಕಾರವೂ ತನಗೆ ಬೇಕಾದವರನ್ನು ನೇಮಿಸುತ್ತದೆ. ಆದರೆ ಅವರ ಕಾರ್ಯವನ್ನೂ ಜನ ಗಮನಿಸುತ್ತಾರೆ. ಆಡಳಿತಾತ್ಮಕ ಹುದ್ದೆಗಳು ಹೇಗೂ ಸರ್ಕಾರದ ಕೈಯಲ್ಲಿ ಇರುತ್ತದೆ. ಅವರನ್ನು ಬದಲಾಯಿಸುವುದು ಅವರ ಹಕ್ಕು ಮತ್ತು ವಿವೇಚನೆಗೆ ಬಿಟ್ಟದ್ದು.

ಈ ಹಿಂದೆ ಹಲವರು ರಾಜೀನಾಮೆ ನೀಡಿದ್ದಾರೆ ನಿಜ. ಈಗಲಾದರೂ ಇಂತಹ ನಡೆಗೊಂದು ಸರಿಯಾದ ನಿಲುವು ಮತ್ತು ನೀತಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಯಾವ ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಗಳವರೂ ರಾಜೀನಾಮೆ ನೀಡಬಾರದು, ಸರ್ಕಾರ ರಾಜೀನಾಮೆ ಕೇಳಬಾರದು. ಕೇಳಿದರೂ ಪ್ರತಿಭಟಿಸಬೇಕು. ಬೇಕಾದರೆ ವಜಾ ಮಾಡಲಿ.

ಸಾಂಸ್ಕೃತಿಕ ವಲಯದ ಎಲ್ಲರೂ ಸೇರಿ ಇದಕ್ಕೊಂದು ಪರಿಹಾರ ಹುಡುಕುವುದು ಅಗತ್ಯ.

 

‍ಲೇಖಕರು avadhi

July 27, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. Suresh rajamane

  ಎಸ್ ಸರ್ಕಾರಗಳು ಬದಲಾದ ತಕ್ಷಣ ರಾಜನಾಮೆ ಕೊಡೊ ಸಂಸ್ಕೃತಿ ನಿಲ್ಲಬೇಕು..
  ನಾನು ಅದನ್ನೆ ಬಯಸ್ತಿನಿ ಡಾ.ಅರವಿಂದ ಮಾಲಗತ್ತಿಯವರು ಸಾಹಿತ್ಯ ಅಕಾಡೆಮಿಯನ್ನು ತುಂಬಾ ಚನ್ನಾಗಿ ನಿರ್ವಹಿಸುತ್ತಿದ್ದಾರೆ..

  ಪ್ರತಿಕ್ರಿಯೆ
 2. Kotresh T A M Kotri

  ರಕ್ಷಿದಿ ಸರ್ ನಿಲುವು ಸರಿಯಾಗಿದೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: