’ಅಮಿಶ್’ ಅಂದ್ರೇನು ಗೊತ್ತಾ? – ರಂಗಸ್ವಾಮಿ ಮೂಕನಹಳ್ಳಿ ಬರೀತಾರೆ

ಅಮಿಶ್ , ಕಟ್ಟಳೆ ಅಮಿತ !

11952035_10207498274400721_4657712624097651900_n

ರಂಗಸ್ವಾಮಿ ಮೂಕನಹಳ್ಳಿ

ಸ್ಯಾಮ್ಯುಯೆಲ್ ನನಗೆ ಸಿಕ್ಕಿದ್ದು ಸ್ಪ್ಯಾನಿಷ್ ಲರ್ನಿಂಗ್ ಸೆಂಟರ್ ನಲ್ಲಿ , ಬಾರ್ಸಿಲೋನಾ ಗೆ ವರ್ಕ್ ವೀಸಾ , ಕೆಲಸ ಎರಡೂ ಪಡೆದೆ ಬಂದಿದ್ದೆ ಆದರೆ ಸ್ಪ್ಯಾನಿಷ್ ಭಾಷೆ ಮಾತ್ರ ಗೊತ್ತಿರಲಿಲ್ಲ , ಸರಿ ನನ್ನ ಕಂಪನಿ ೨೦ ಘಂಟೆಗಳ ಕ್ರಾಶ್ ಕೋರ್ಸ್ ಸೇರಿಕೋ ಮಿಕ್ಕದ್ದು ದಿನ ಕಳೆದಂತೆ ಕಲಿಯುತ್ತಿಯ ಎಂದು ತರಗತಿಗೆ ಸೇರಿಸಿದರು , ಜೀವನದ ಮೊದಲ ೨೩ ವರ್ಷ ಪಕ್ಕದ ಊರು ನೋಡದ ನನಗೆ ಒಮ್ಮೆಲೆ ಟೈಮ್ ಜೋನ್ ಬದಲಾದ ಅನುಭವ , ಎಲ್ಲಾ ಬಿಳಿಯರು ಸೇಮ್ ! ವ್ಯತ್ಯಾಸವೆ ತಿಳಿಯದು , ಬಿಯರ್ , ಸಿಗರೇಟು ಸೇವಿಸದವರೆ ಪರಮ ಪಾಪಿಗಳು ಬಾರ್ಸಿಲೋನಾ ದಲ್ಲಿ , ಹೆಣ್ಣು ಗಂಡೆಂಬ ಬೇಧವಿಲ್ಲದೆ ಸೇವನೆ ಅಭಾದಿತ . ಸ್ಯಾಮ್ಯುಯೆಲ್ ಆಪ್ತ ನಾಗಿದ್ದು ಆತ ನನ್ನಂತೆ ಇದ್ದ ಎನ್ನುವ ಕಾರಣದಿಂದ ,ನೋಡಲು ಉಳಿದ ಬಿಳಿಯರಂತೆ ಕಂಡರೂ ಆತನಲ್ಲಿ ಇದ್ದದ್ದು ಯಾವುದೇ ವ್ಯಸನಗಳ ದಾಸನಾಗದ ಮಗುವಿನ ಆತ್ಮ .

ನೀನು ಭಾರತೀಯ ಅಲ್ಲವೇ ? ಆತ ನನಗೆ ಕೇಳಿದ ಮೊದಲ ಪ್ರಶ್ನೆ , ಹೌದು ಎಂದೊಡನೆ , ಗಣಪತಿ , ವಿಷ್ಣು , ಶಿವ ಎಂದು ದೇವರುಗಳ ಹೆಸರೇಳಿ , ನಿಮ್ಮ ಕಲ್ಚರ್ ನನಗಿಷ್ಟ ಎಂದ . ನನಗೆ ಆಶ್ಚರ್ಯ ಆಗಿತ್ತು , ತೋರ್ಪಡಿಸಿ ಕೊಳ್ಳಲಿಲ್ಲ , ನೀನು ಯಾವ ವರ್ಗ ? ನಿಮ್ಮಲ್ಲಿ ನಾಲ್ಕು ವರ್ಗ ಇದೆ ಅಲ್ಲವೇ ? ಅಂದಾಗ ಮಾತ್ರ ಆಶ್ಚರ್ಯ ತೋರ್ಪಡಿಸಿಕೊಳ್ಳಲು ಇರದೆ ಆಗಲಿಲ್ಲ . ನಾನು” ಅಮಿಶ್ ” ಪಂಗಡಕ್ಕೆ ಸೇರಿದವನು , ಆದರೆ ನಾನು ಮರಳಿ ನನ್ನ ಪಂಗಡಕ್ಕೆ ಹೋಗಲಾಗದು , ನನ್ನ ಅಪ್ಪ ,ಅಮ್ಮ , ತಮ್ಮ ನ ನೋಡಲು ಕೂಡ ಆಗದು ಎಂದಾಗ ಇನ್ನಷ್ಟು ಆಶ್ಚರ್ಯ . ಅಮಿಶ್ ಎನ್ನುವ ಪದ ಕೇಳಿದ್ದೆ ಅಂದು , ಹೌದೆ ? ಏಕೆ? ಸಹಜವಾಗಿ ಪ್ರಶ್ನಿಸಿದ್ದೆ . ಅವನ ಉತ್ತರ ನನಗೆ ಹೊಸ ಜಗತ್ತಿನ ಪರಿಚಯ ಮಾಡಿಕೊಡುತ್ತದೆ ಎನ್ನುವ ಅರಿವು ಆಗ ಇರಲಿಲ್ಲ . ಅವರ ರೀತಿ ರಿವಾಜು ತಿಳಿಯುವ ಕುತೂಹಲ ಒಂದೆಡೆ , ಎರಡು ಸಾವಿರ ಇಸವಿಯಲ್ಲೂ ಅಮೇರಿಕಾದಲ್ಲಿ ಹೀಗೂ ಉಂಟಾ ? ಎನ್ನುವ ಅನುಮಾನ ಇನ್ನೊಂದೆಡೆ ! ಸ್ಯಾಮ್ಯುಯೆಲ್ ಹೇಳಿದ್ದು ಕೆಳಗಿನ ಸಾಲುಗಳಾಗಿವೆ .

ಅಮಿಶ್ ಎನ್ನುವುದು ಉತ್ತರ ಅಮೇರಿಕಾ ದಲ್ಲಿ ವಾಸವಿರುವ ಒಂದು ಜನಾಂಗ , ಇಂದಿಗೆ ಎರಡೂವರೆ ಲಕ್ಷ ಆಸುಪಾಸು ಜನಸಂಖ್ಯೆ ,ಜಾಕೋಬ್ ಅಮ್ಮಾನ್ ೧೭ ನೆ ಶತಮಾನದ ಸ್ವಿಸ್ ಪ್ರಜೆ , ಇತ ಬ್ಯಾಪ್ಟಿಸಂ ಮಕ್ಕಳು ಹುಟ್ಟಿದ ತಕ್ಷಣ ಮಾಡುವುದರ ವಿರುದ್ದ ಇದ್ದ , ಹೀಗಾಗಿ ಅಮೀಶ್ ಜನತೆ ಬ್ಯಾಪ್ಟಿಸಂ ಗೆ ಹೊಳ ಪಡುವುದು ೧೫ ರಿಂದ ೨೫ ರ ಒಳಗೆ , ಇದು ಆಗದೆ ಮುದುವೆ ಆಗಲು ಸಾಧ್ಯವಿಲ್ಲ , ಅಮೀಶ್ ಪಂಗಡ ಜಾಕೋಬ್ ಅಮ್ಮಾನ್ ನ ತತ್ವ ಪಾಲಿಸುತ್ತಾ ಬಂದಿದೆ . ಹ್ಯಾಟ್ ಹೇಗೆ ಧರಿಸಬೇಕು ಎನ್ನುವ ಕ್ಷುಲಕ ಕಾರಣಕ್ಕೆ ಕಿತ್ತಾಡಿ ಉಪ ಪಂಗಡ ಕಟ್ಟಿ ಕೊಳ್ಳುವ ಜನ , ಹೀಗಾಗಿ ಹಲವು ಹತ್ತು ಉಪ ಪಂಗಡಗಳು ಇವೆ . ಹಲವು ಕಟ್ಟು ಪಾಡುಗಳು ಸಹ್ಯ ಅನಿಸುತ್ತವೆ ಕೆಲವು ತೀರಾ ಕಂದಾಚಾರ , ಉಸಿರುಗಟ್ಟಿಸುತ್ತವೆ ಹೀಗಾಗಿ ದಿನೆ ದಿನೆ ಅಮಿಶ್ ಪಂಗಡದ ಕಂದಾಚಾರ ವಿರೋಧಿಸುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ , ಏನಿದು ಅಂತಹ ಕಟ್ಟುಪಾಡು ?

12

* ಯಾವುದೇ ಟೆಕ್ನೋಲೋಜಿ ಬಳಸುವಂತಿಲ್ಲ , ಫೋನ್ , ಮೊಬೈಲ್ , ಟಿವಿ , ವಾಶಿಂಗ್ ಮಷೀನ್ , ಎಲೆಕ್ಟ್ರಿಸಿಟಿ ಇಲ್ಲಿ ವ್ಯರ್ಜ್ಯ ! ಮಕ್ಕಳು ಮನೆಯ ಮುಂದಿನ ಜಾಗದಲ್ಲಿ ಆಟ ಆಡುತ್ತಾ ಕಾಲ ಕಳೆಯುತ್ತಾರೆ , ವೀಡಿಯೊ ಗೇಮ್ ಇನ್ನಿತರೆ ತಂತ್ರಾಂಶ ಸಂಬಂದಿ ಆಟಿಕೆಗಳು ಉಪಯೋಗಿಸುವಂತಿಲ್ಲ , ಮನೆಯವರ ಎಲ್ಲಾ ಬಟ್ಟೆ ಓಗೆಯುವುದು ಹೆಂಗಸರ ಕೆಲಸ , ಹೆಣ್ಣು ಮಗು ತಾಯಿಯ ಮನೆಗೆಲಸದಲ್ಲಿ ಸಹಾಯ ಮಾಡಬಹುದು , ಹುಡುಗ ತಂದೆಯ ಕಾರ್ಯದಲ್ಲಿ ಕೈಜೋಡಿಸುತ್ತಾನೆ .

*ಸಾರಿಗೆಗೆ ಕುದುರೆ ಬಂಡಿ ಇಂದಿಗೂ , ಕಾರು , ಬಸ್ ಇತರೆ ಸಾರಿಗೆ ಮಾಧ್ಯಮಗಳನ್ನು ಬಳಸುವಂತಿಲ್ಲ . ಈ ಕಾರಣಕ್ಕೆ ಇರಬಹುದು ಅಮಿಶ್ ಉತ್ತರ ಅಮೇರಿಕಾ ಬಿಟ್ಟು ಹೆಚ್ಚು ಹಬ್ಬಿಲ್ಲ , ತಮ್ಮ ದಿನ ನಿತ್ಯದ ಕೆಲಸಗಳಿಗೆ ನೆಡೆದು ಹೋಗುವುದು ಇವರ ಪರಿಪಾಟ .

*ಮದುವೆ ತಮ್ಮ ಅಮಿಶ್ ಜನಾಂಗದಲ್ಲಿನ ಹುಡುಗ ಹುಡುಗಿ ಯೊಂದಿಗೆ ಮಾತ್ರ , ಅಮಿಶ್ ಪಂಗಡದ ಹುಡುಗ/ಹುಡುಗಿ ಇತರೆ (ಅಮಿಶ್ ಪಂಗಡದವರ ಪ್ರಕಾರ ನಂಬಿಕೆ ಇಲ್ಲದವರು ,( ನಾನ್ ಬಿಲಿವೆರ್ಸ್ ) ) ಜನಾಂಗದ ಹುಡುಗ /ಹುಡುಗಿಯ ಪ್ರೀತಿಸುವುದು , ಮದುವೆ ಆಗುವುದು ನಿಶಿದ್ದ , ಒಂದು ಪಕ್ಷ ಹಾಗೇನಾದರೂ ಕಟ್ಟಳೆ ಮೀರಿ ಮದುವೆ ಆದರೆ ಮನೀಶ್ ಪಂಗಡ ದಿಂದ ಬಹಿಷ್ಕಾರ ಹಾಕುತ್ತಾರೆ , ಹಾಗೆ ಬಹಿಷ್ಕರಿಸಲ್ಪಟ್ಟ ಹುಡುಗ/ಹುಡುಗಿ ತನ್ನ ಹೆತ್ತವರ , ಸ್ನೇಹಿತರ , ಬಂಧು ಗಳ ಮತ್ತೆ ನೋಡುವ , ಮಾತನಾಡುವ ಅವಕಾಶ ವಂಚಿತರಾಗುತ್ತಾರೆ , ನನ್ನ ಮಿತ್ರ ಸ್ಯಾಮ್ಯುಯೆಲ್ ಈ ಕಟ್ಟಳೆಯ ಹೊಡೆತಕ್ಕೆ ಸಿಕ್ಕ ಬಲಿ !

ನೂರಾರು ವರ್ಷದಿಂದ ರಕ್ತ ಬದಲಾಗದೆ ಅಲ್ಲೇ ಮದುವೆ ಅದುದರ ಪಲ ಜೆನಿಟಿಕ್ ಮುಟೈಶನ್ ಇನ್ನಿತರ ತೊಂದರೆಗಳು ಇಲ್ಲಿ ಹೇರಳ , ಮಗು ಹುಟ್ಟುವಾಗ ಸಾಯುವ ಪ್ರಮಾಣ ಇಂದಿಗೂ ಹೆಚ್ಚು , ಇದೆಲ್ಲಾ ಬಲ್ಲ ಸ್ಯಾಮ್ಯುಯೆಲ್ ಇಂತಹ ಕಟ್ಟುಪಾಡುಗಳಿಗೆ ಇತಿಶ್ರೀ ಹಾಡಲು ನಿರ್ಧರಿಸಿದಾಗ , ಗುಟ್ಟಾಗಿ ತನ್ನ ಬೆಂಬಲ ಸೂಚಿಸಿದ್ದು ಅವನ ತಾಯಿ .

*ಹೊಸದಾಗಿ ಮದುವೆ ಆದ ಜೋಡಿಯಲ್ಲಿ ಪ್ರೀತಿ ಬೆಳೆಯಲಿ ಎನ್ನುವ ಸಲುವಾಗಿ ತಿಂಗಳು ಗಟ್ಟಲೆ ಒಟ್ಟಾಗಿ ಮಲಗಲು ಬಿಡುತ್ತಾರೆ , ಸಂಭೋಗ ನಿಶಿದ್ದ , ಇಬ್ಬರಲ್ಲಿ ಪ್ರೀತಿ ಬೆಳೆದ ನಂತರವೇ ಪ್ರಸ್ಥ , ಹಿಂದೆ ಹಾಸಿಗೆಯಲ್ಲಿ ಕಟ್ಟಿ ಹಾಕುತಿದ್ದರಂತೆ , ಇಂದು ಸ್ವಲ್ಪ ಬದಲಾಗಿ ಎರಡು ಮಂಚದ ನಡುವೆ ಮರದ ಸಣ್ಣ ಗೋಡೆ ನಿರ್ಮಿಸುತ್ತಾರೆ .

*ಬೈಬಲ್ ನಿಂದ ಆಯ್ದು ಮಾಡಿದ ಕಾನೂನು ಕಟ್ಟಳೆ ಯಾರು ಮಿರುವಂತಿಲ್ಲ , ಸಾಮಾನ್ಯವಾಗಿ ಚರ್ಚ್ ನ ಪಾದ್ರಿ ಯಾವುದು ಸರಿ , ಯಾವುದು ಸಲ್ಲ ಎನ್ನುವುದನ್ನು ನಿರ್ಧರಿಸುತ್ತಾನೆ , ಮುಕ್ಕಾಲು ಪಾಲು ಅವನ ನಿರ್ಧಾರವೇ ಕೊನೆ .

*ಮನೆ ಕಟ್ಟುವುದರಿಂದ ಹಿಡಿದು ಎಲ್ಲಾ ಕೆಲಸಗಳನ್ನು ಕೂಡಿ ಮಾಡುತ್ತಾರೆ , ಹೊರಗಿನ ಯಾರ ಸಹಾಯ ಬಯಸುವುದಿಲ್ಲ , ಹುಚ್ಚುತನ ಹೆಚ್ಚಿರುವ ನಂಬಿಕೆ ಇಲ್ಲದವರ ಸಹಾಯ ಪಡೆಯುವುದು ನಿಶಿದ್ದ , ತಮ್ಮ ನಿಲುವ ಬೆಂಬಲಿಸಲು ಬೈಬಲ್ ನಲ್ಲಿನ ಒಂದು ವಾಕ್ಯ “Be not unequally yoked with unbelievers. For what do righteousness and wickedness have in common? Or what fellowship can light have with darkness?” (II Corinthians 6:14). ಹೇಳಿ ತನ್ನ ಜನರ ಅಂಕೆಯಲ್ಲಿ ಇಟ್ಟಿದೆ .

*ಕೈ ಮಗ್ಗದಿಂದ ತಯಾರಾದ ಬಟ್ಟೆ ಮಾತ್ರವೆ ಉಪಯೋಗಿಸಬಹುದು , ಟೈ , ಬೆಲ್ಟ್ , ಗ್ಲೋವೆಸ್ ತೊಡುವಂತಿಲ್ಲ ! ಸಾಮಾನ್ಯವಾಗಿ ಕಪ್ಪು ಬಣ್ಣ ಇಷ್ಟಪಡುತ್ತಾರೆ . ತಮ್ಮ ನಿಯಮ ಸರಳ , ಸಹಜಕ್ಕೆ ಅನುಗುಣವಾಗಿ ಸರಳಾದ ಬಟ್ಟೆ ಇಷ್ಟ ಪಡುತ್ತಾರೆ . ಹಲವು ಉಪ ಪಂಗಡ ಗುಂಡಿ ಕೂಡ ಉಪಯೋಗಿಸುವುದಿಲ್ಲ , ಮೆಜೋರಿಟಿ , ಶರ್ಟ್ನಲ್ಲಿ ಗುಂಡಿ ಬಳಸುತ್ತಾರೆ , ಪ್ಯಾಂಟ್ ಕೂಡ ಗುಂಡಿ , ಜೀಪ್ಪು ಬಳಸುವಂತಿಲ್ಲ .

* ಮದುವೆ ಆದ ಗಂಡಸು ಗಡ್ಡ ಬಿಡಬೇಕು , ಆದರೆ ಮೀಸೆ ಬಿಡುವಂತಿಲ್ಲ , ಇಂತಹ ಸಣ್ಣ ಪುಟ್ಟ ವಿಷಯಗಳಲ್ಲಿ ಬಿನ್ನ ಮತ ಬಂದು ಅದು ಹೊಡೆದಾಟಕ್ಕೆ ತಿರುಗಿದ ಸನ್ನಿವೇಶಗಳು ಹಲವು .

*ಹೆಣ್ಣು ತನ್ನ ತಲೆ ಕೊದಲು ಕತ್ತರಿಸುವ ಹಾಗಿಲ್ಲ , ಗಂಡಸು ತನ್ನ ಗಡ್ಡ ಕತ್ತರಿಸುವ ಹಾಗಿಲ್ಲ , ಜೀವನ ಪರ್ಯಂತ ಇದು ಅನ್ವಯಿಸುತ್ತೆ , ಕಿರಿ ಕಿರಿ ಎನ್ನುವಷ್ಟು ಉದ್ದದ ಗಡ್ಡ , ತಲೆ ಕೂದಲು ಕತ್ತರಿಸಿದನ್ನೇ ದೊಡ್ಡ ವಿಷಯ ಮಾಡಿ ಹೊಡೆದಾಟ ಆಗಿವೆ . ೨೦೧೩ ರಲ್ಲಿ ಅಮಿಶ್ ಪಂಗಡದ ನಾಯಕ ಸ್ಯಾಮ್ಯುಯೆಲ್ ಮುಲ್ಲೇಟ್ (Samuel Mullet ) ಗಡ್ಡ ಕತ್ತರಿಸಿದ ಬೇರೊಂದು ಅಮಿಶ್ ಪಂಗಡದ ಜನರನ್ನು ಹೊಡೆಯುವಂತೆ ತನ್ನ ಅನುಯಾಯಿಗಳ ಉದ್ರೆಕಿಸದ ಅಪಾದನೆ ಮೇಲೆ ೧೫ ವರ್ಷ ಜೈಲು ಶಿಕ್ಷೆಗೆ ಗುರಿಯಗಿದ್ದಾನೆ !

*ಯಾವುದೇ ಅಂಗಡಿ ಇಂದ ಆಹಾರ ಕೊಳ್ಳುವ ಹಾಗಿಲ್ಲ , ತಮ್ಮ ಆಹಾರ ತಾವೇ ಬೆಳೆಯುತ್ತಾರೆ , ಕುರಿ , ಕೋಳಿ ಸಾಕುತ್ತಾರೆ . ಫ್ರಿಡ್ಜ್ ಇಲ್ಲದ ಕಾರಣ ಫ್ರೆಶ್ ಹಣ್ಣು ತರಕಾರಿ ಸೇವಿಸುತ್ತಾರೆ , ಉತ್ತಮ ಆಹಾರ ಕ್ರಮ ಹೊಂದಿರುವುದರಿಂದ ಅನೇಕ ರೋಗಗಳಿಂದ ಇವರು ಮುಕ್ತ . ಈ ನಡುವೆ ತೀರಾ ಬೆಳೆಯಲು ಸಾಧ್ಯವಿಲ್ಲದ ವಸ್ತುಗಳ ಅಂಗಡಿಯಲ್ಲಿ ಕೊಳ್ಳಲು ಚರ್ಚು ಅನುಮತಿ ನೀಡಿದೆ

*ಶಿಕ್ಷಣಕ್ಕೆ ಮಹತ್ವ ಕೊಡುವ ಅಮೀಶ್ ಪಂಗಡ ತಮ್ಮದೇ ಸ್ಕೂಲ್ ಅಥವಾ ಚರ್ಚ್ ನಲ್ಲಿ ಮಕ್ಕಳ ಓದಲು ಕಳಿಸುತ್ತಾರೆ , ಹದಿನೈದರ ನಂತರ ಓದುವುದು ಬಿಡುವುದು ಮಕ್ಕಳ ಇಚ್ಚೆ .

*೮ ರಿಂದ ೨೦ ಸಂಖ್ಯೆಯ ಒಂದು ಕುಟುಂಬ ತೀರಾ ಸಾಮಾನ್ಯ , ಅಂದರೆ ಅಮಿಶ್ ಜೋಡಿ ೭ ರಿಂದ ೮ ಮಕ್ಕಳನ್ನು ಮಾಡಿ ಕೊಳ್ಳುತ್ತಾರೆ .
ಅಮಿಶ್ ಯುವಕರು/ಯುವತಿಯರು ಆಧುನಿಕತೆಯ ವ್ಯಾಮೋಹಕ್ಕೆ ಸೇಳತಕ್ಕೆ ಸಿಕ್ಕು ತಮ್ಮ ರೀತಿ ನೀತಿ ಎಲ್ಲಾ ತೊರೆದು ಮುಕ್ತವಾಗಿ ತಮ್ಮನ್ನು ಹೋರ ಪ್ರಪಂಚಕ್ಕೆ ತೆರೆದು ಕೊಳ್ಳುತ್ತಿದ್ದಾರೆ ಎಲ್ಲಾ ಜನಾಂಗ , ಧರ್ಮ , ವ್ಯಕ್ತಿ ಬದಲಾದಂತೆ ಅಮೀಶ್ ಕೂಡ ಬದಲಾಗುತ್ತ ಸಾಗಿದ್ದರೆ , ಆದರೆ ಕ್ರಮಿಸುವ ದಾರಿ ಇನ್ನೂ ಬಹಳಷ್ಟಿದೆ .

‍ಲೇಖಕರು avadhi-sandhyarani

September 4, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Swarna

    ಕೆಲ ದಿನಗಳ ಹಿಂದೆ ಚಾನೆಲೊಂದರಲ್ಲಿ ಇವರ ಬಗ್ಗೆ ಡಾಕ್ಯುಮೆಂಟರಿ ಬಂದಿತ್ತು. ಧರ್ಮದ ಹೆಸರಲ್ಲಿ ಏನೇನೆಲ್ಲಾ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: