ಮಹಿಪಾಲ ರೆಡ್ಡಿ ಮುನ್ನೂರ್ ಹಿರಿಯ ಪತ್ರಕರ್ತ, ಸಂಘಟಕ, ಕವಿ.
ಪ್ರತಿಷ್ಟಿತ ‘ಅಮ್ಮ’ ಪ್ರಶಸ್ತಿಯನ್ನು ರೂಪಿಸಿದವರು
ಅವರ ಹುಟ್ಟುಹಬ್ಬದ ದಿನಕ್ಕೆ ಅವರ ಮಗ ಪತ್ರಕರ್ತ ವಿಜಯಭಾಸ್ಕರ ರೆಡ್ಡಿ ಬರೆದ ಬರಹ ಇಲ್ಲಿದೆ-

ಅಪ್ಪ ಒಲವ ನಾವಿಕ
ತೆಳಗಿನ ಎತ್ತರದ ಮೈಕಟ್ಟು, ರಾಶಿ ಗುಂಗರು ಕೂದಲು, ಕೈ ಕೊನೆ ಬೆರಳಿನ ಉಗುರು ಮಾರುದ್ದ, ಸದಾ ಧ್ಯಾನಿಸುವ ಕಣ್ಣ ರೆಪ್ಪೆ, ಏನ್ನನ್ನೊ ಹುಡಕುವ ಕಣ್ಣು, ಮೊದಲ ಬೆಂಚಿನ ವಿದ್ಯಾರ್ಥಿ ಎಲ್ಲದಕ್ಕೂ ಸೈ ಎಂದು ಮುಂದೆ ಬರುವೆ ಹುಡುಗ, ಕ್ರಿಯಾಶೀಲಕ್ಕೆ ಅಲ್ಲಿಂದಲೇ ಬುನಾದಿ ಭದ್ರವಾಗಿ ರೂಪುಗೊಳ್ಳುತ್ತಾ ಒಳ್ಳೆಯದನ್ನೆ ಮೈಗೂಡಿಸಿಕೊಂಡು ಬೆಳದ ಸಣ್ಣ ಅಗಸಿಯ ಮೇಷ್ಟ್ರು ಮಗನಾಗಿ, ಬಿರಾದಾರ ಕುಟುಂಬದ ಮಗಳ ಮಗನಾಗಿ
ಶ್ರೀಮಂತಿಕೆಯೂ ಹಾಗೂ ಬಡತನವನ್ನು ಸಮವಾಗಿ ಕಂಡ ಎಳೆಯ ಕಣ್ಣುಗಳ ಬಾಲ್ಯವನ್ನು ಈಗಲೂ ಅಪ್ಪ ಹೇಳಬೇಕಾದರೆ ನಾವೆಲ್ಲಾ ಪರೆಶಾನ್ ಆಗಿ ಕೇಳುತ್ತಿದ್ದೆವು.
ತನ್ನ ನೆಲದ ಬೇರನ್ನು, ತಾಯಿಯ ಹುಟ್ಟಿದ ಮಣ್ಣಿನ ಬಗ್ಗೆ ಅಪಾರ ಗೌರವ ಹಾಗೂ ಪ್ರೀತಿಯನ್ನುಟ್ಟುಕೊಂಡ ಅಪ್ಪ ಸದಾ ಅಂತರ್ ಮುಖಿ ತಾಯಿ ಭಾಷಿಕ, ಎಂದೂ ಕೈ ಚೆಲ್ಲಿ ಕೂತವನಲ್ಲ, ಆಗುತ್ತೆ ಎಂಬ ಸಕರಾತ್ಮಕ ವಿಶಾಲ ಭಾವನೆ ಇಟ್ಟುಕೊಂಡೆ ಅಪ್ಪ ಇಷ್ಟತ್ತರಕ್ಕೆ ಬೆಳೆದು ನಿಂತ. ತನ್ನೊಟ್ಟಿಗೆ ಇರುವ ಅಷ್ಟೂ ಜನ ನಗಬೇಕು ಮತ್ತು ಗೌರವದ ಬದುಕು ನಡೆಸಬೇಕು ಎಂಬ ಆಶಯ ಉಳ್ಳವರು.

ನನಗೆ ಈಗಲೂ ನೆನಪಿದೆ ಆ ದಿವಸ ನಾನು ತಾತನ ಕೈಯಲ್ಲಿ ಸರಿಯಾಗಿ ಏಟು ತಿಂದಿದ್ದೆ ಸಾಹಿತಿ, ರಿಪೋರ್ಟ್ ರ್ ಮಗನಾಗಿ ಕನ್ನಡ ಬರಿಯಾಕ ಬರಲ್ವಾ ನಿನಗೆ ಅಂತೇಳು ತಾತ ನಾಲ್ಕೇಕು ಹೆಚ್ಚೆ ಬಾರಿಸಿದರು. ಕನ್ನಡ ಬರೆಯೋದು ರೂಢಿಸಿಕೊಳ್ಳಬೇಕು ಅಂತ ಇರಬಾರದು ಕನ್ನಡ ಉಸಿರಾಡಬೇಕು, ಜೀವಿಸಬೇಕು ಕನ್ನಡದ ಜೊತೆ ಎಂದು ತಾತ ಕೋಪದಿಂದಲೇ ಹೇಳಿದರು. ನಿಮ್ಮಪ್ಪ ಕನ್ನಡ ಹೆಂಗ ಕಲ್ತಾ ಗೊತ್ತಾ,?
ಬಜಾರ್ ಅಂಗಡಿಗಳ ಬೋರ್ಡ್ ಮೇಲೆ ಬರೆದ ಕನ್ನಡ ಅಕ್ಷರ ಗಮನಿಸಿ, ಅದರಲ್ಲಿನ ಅಕ್ಷರಗಳ ಕೂಡಿಸುವಿಕೆ, ವ್ಯತ್ಯಾಸ ಗಮನಿಸಿ ಶಾಲೆಯಲ್ಲಿ ಕಲಿಸುವುದಕ್ಕೂ ಮುನ್ನವೇ ತಾನೇ ನನ್ನನ್ನ ಕೇಳಿ ಕೇಳಿ ಕಲಿತಾ ಕಣೋ ಅಂತ ತಾತ ತನ್ನ ಮಗನ ಬಗ್ಗೆ ಅಪಾರ ಪ್ರೀತಿಯಿಂದ ಹೇಳಿದೆ.
ಅಂತಹ ಅಪ್ಪ ಕನ್ನಡವನ್ನು ನಿರರ್ಗಳವಾಗಿ ಮಾತನಾಡಬಲ್ಲ, ಬರೆಯಬಲ್ಲ ಎಂದರೆ ಅದಕ್ಕೆ ಅಪಾರ ಓದಿನ ಜಾಡೇ ಸಾಕ್ಷಿ, ರಾತ್ರಿಯೂ, ಪ್ರಯಾಣದಲ್ಲಿಯೂ ಓದಿನ ಧ್ಯಾನಕ್ಕೆ ಕೂಡುವ ಅಪ್ಪ, ಆತನ ಓದೇ ಮಾತಿನ ಹಾಗೂ ಬರಹಕ್ಕೆ ಮತ್ತು ಗತ್ತಿಗೆ ಇಂಪು ನೀಡಿದೆ.
ಸದಾ ಕ್ರಿಯಾಶೀಲ ಚಿಂತನೆಗೆ ಹಾಗೂ ಹೊಸ ದಿಕ್ಕಿನೆಡೆಗೆ ಸಾಗಿವ ಹೊತ್ತಿನಲ್ಲಿ ತಾನು ನೆನಪಿಸಿಕೊಳ್ಳುವುದು ಒಂದೇ ಜೀವವನ್ನ ಅದು ತಾಯಿ ಮಹಾದೇವಮ್ಮ, ಅಪ್ಪನ ಜೀವನದಾಗ ಎಲ್ಲವೂ ಇದೆ ಆದರೆ ತಾಯಿ ಇಲ್ಲ, ಈ ಒಂದು ವಿಷಯದಲ್ಲಿ ಆತ ಸೋತ, ಹೌದು ತಾಯಿ ಇನ್ನೇನು ಕಣ್ಣುಮುಚ್ಚುತ್ತಾಳೆ ಎಂದು ಆರೋಗ್ಯ ಕೈ ಕೊಟ್ಟಾಗ ಮಗನಿಗೆ ಒಂದು ಮದುವೆ ಮಾಡೋಣ, ಮಗನ ಮದುವ ನೋಡಿ ಮಹಾದೇವಿ ಸಾಯಲಿ ಎಂದು ಅಳಗ ಬಳಗ, ಅಪ್ಪ, ಮಾವ ಎಲ್ಲರೂ ತಿಳಿಸಿದಾಗ ಅಪ್ಪ ಆಯಿತು ಅಮ್ಮನಿಗೋಸ್ಕರ ತಾನೇ ಆಗಲಿ ಎಂದ.
ಅಪ್ಪ ಮದುವೆಯಾಗುವ ಮುಂಚೆ ಅಜ್ಜಿಗೆ ವೈದ್ಯರು ಹೇಳಿದ್ದು ಆರು ತಿಂಗಳು ಬದುಕುವಿರಿ ಎಂದು ಮದುವೆಯಾಗಿ ಮೂರು ಮೂರು ಮೊಮ್ಮಕ್ಕಳ ಎತ್ತಿ ಆಡಿಸುತ್ತಾ ಅಜ್ಜಿ ಬರೋಬ್ಬರಿ ಆರು ವರ್ಷ ಸಂತಸದಿಂದ ದಿನ ಕಳೆದು ಪ್ರೀತಿಯ ಮಗನನ್ನ, ಮಾತು ಕೇಳುವ ಸೊಸೆಯನ್ನು, ತಮ್ಮದೇ ಸಂಸಾರದ ಪಿಸುಮಾತಿನ ಗಂಡನನ್ನ ಅಜ್ಜಿ ಬಿಟ್ಟು ಹೋದಳು.
ಅಜ್ಜಿ ತೀರಿಕೊಂಡ ಮೇಲೆ ಅಪ್ಲ ಅಕ್ಷರಸಹ ಒಂಬ್ಬಟ್ಟಿಯಾಗಿ ಎದೆ ಭಾರ ಮಾಡಿಕೊಂಡು ಇದ್ದ, ಊಟಕ್ಕೆ ಕೈಯಾಡಿಸಿ ಒಂದು ತತ್ತೂ ತಿನದೇ ಎದ್ದು ನಡೆಯುವ, ಇಡೀ ಹಗಲೂ ರಾತ್ರಿ ಅಪ್ಪನ ಚಿಂತೆಯಲ್ಲೇ ಅಮ್ಮ ಇರುವಾಕಿ, ಅಪ್ಪ ತನ್ನಮ್ಮನ ಮೇಲೆ ಹೆಚ್ಚು ಪ್ರೀತಿ ಅಷ್ಟೇ ಗೌರವ ಜೊತೆಗೆ ನೆನಪು , ಮಮತೆ ತನ್ನಮ್ಮ ಎಂದರೆ ಹೀಗೆ ಹೀಗೆ ಹಾಗೇ ಎಂದೆಲ್ಲಾ ಬಣ್ಣಿಸುವ ತನ್ನಮ್ಮಾ ಹಠಾತ್ತನೆ ಹೋಗಾದ ಆಗುವ ನೋವು ಅಪ್ಪನಿಗೆ ನಿಖರವಾಗಿ ಗೊತ್ತು, ನಾಲ್ಕನೆ ಮಗು ಹುಟ್ಟದ ಮೇಲೆ ಅವನಿಗೆ ತನ್ನಮ್ಮ ಹೆಸರಿಟ್ಟು ಅಪ್ಪ ಅವನಲ್ಲಿ ಅಮ್ಮನನ್ನು ಕಾಣುತ್ತಾನೇ ಅವನೇ ತಮ್ಮ ಮಹಾದೇವ.

ತಾನು ಅಕ್ಷರಗಳ ನಡುವೆ, ಪುಸ್ತಕದ ನಡುವೆ ಉಸಿರಾಡುವ ಆದಕಾರಣ ನನ್ನಮ್ಮನೂ ಒದರತ ಜೊತೆ ಸದಾ ಜೀವಂತವಾಗಿಲಿ ಎಂದು ‘ಅಮ್ಮ ಪ್ರಶಸ್ತಿ’ ಎಂದು ಕಳೆದ 22 ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ. ಅಜ್ಜಿ ಮಹಾದೇವಮ್ಮನ ಹೆಸರು ಕರ್ನಾಟಕದ ಮೂಲೆ ಮೂಲೆಯಲ್ಲಿ ಹಬ್ಬಿತು, ಅಪ್ಪ ತನ್ನಮ್ಮನ ನೆನಪು ನಾಡಿಗೆ ಹಂಚಿ, ಅಮ್ಮನ ಪ್ರೀತಿಗೆ ಬೊಗಸೆಯಾದರು.
ಅಪ್ಪ ಈಗ ಐವತ್ತು, ಚುರು ಸುಸ್ತು ಅಂತಾರೆ ಆದರೂ ಎಂದೂ ತೋರಿಸಿಕೊಟ್ಟಿಲ್ಲ, ಅಪ್ಪಟ ಸರಳವಾಗಿ, ನಕ್ಕಾವ ಗೆದ್ದಾವ ಎಂದು ಮಂದಹಾಸವೇ ಇಟ್ಟುಕೊಂಡು ಜೀವಿಸುತ್ತಾ, ಸ್ನೇಹಕ್ಕೆ ಹೆಚ್ಚು ಒಲವನಿಟ್ಟು, ಅಷ್ಟೇ ವ್ಯವಹಾರಕ್ಕೆ ಕೊಡಲಿ ಪೆಟ್ಟು, ಮನೆ ಮನದಲ್ಲಿ ಶುದ್ಧ ಪ್ರೀತಿಯ ಹರಡುವ ಅಪ್ಪ ನನಗೆ ಒಲವಿನ ಅಪ್ಪ, ಜಗತ್ತಿಗೆ ಮಹಿಪಾಲರೆಡ್ಡಿ ಮುನ್ನೂರ್.
ಜನುಮ ದಿನದ ಶುಭಾಶಯ ಪಪ್ಪ
ಸ್ನೇಹಕ್ಕೆ ಒಲವನಿಟ್ಟು
ವ್ಯವಹಾರಕ್ಕೆ ಕೊಡಲಿಪೆಟ್ಟು
ಅಪ್ಪನನ್ನು ಅರ್ಥ ಮಾಡಿಕೊಂಡ ಮಗನ ಮಾತು ನಿಜವಾಗಲೂ ಒಲ ವಿನದು.
ಇ0ತ ಅಪ್ಪ ಮಕ್ಕಳು ಮನೆ ಮನೆಗೆ
ಇರಲಿ.