ಅನಂತ ಕುಣಿಗಲ್ ಓದಿದ ‘ನನ್ನವ್ವನ ಬಯೋಗ್ರಫಿ’

ಅನಂತ ಕುಣಿಗಲ್

“ನಿಮ್ಮವ್ವ ಬೇರೆ ಅಲ್ಲ, ನಮ್ಮವ್ವ ಬೇರೆ ಅಲ್ಲ!”
“ಅಪ್ಪ ಅಂದ್ರೆ ಅಮಲು
ಅವನಿಲ್ಲ ಅನ್ನೋ ದಿಗಿಲು
ಅವ್ವ ಅಂದ್ರೆ ಆಕಾಶ
ಅವಳೆ ಎಲ್ಲ ಅನ್ನೋ ಸಂತೋಷ”

ಜಯರಾಮಾಚಾರಿ ಅವರ ಅವ್ವನ ನೆನಪುಗಳ ಬುತ್ತಿಯನ್ನು ಬಿಚ್ಚಿಡುವ ‘ನನ್ನವ್ವನ ಬಯೋಗ್ರಪಿ’ ಕೇವಲ ಒಂದು ಕೃತಿಯಾಗಿರದೆ ಸದಾ ನಮ್ಮನ್ನೆಲ್ಲ ಜೀವಿಸಲು ಬಿಡುವ ಉಸಿರಾಗಿ ನಮ್ಮನ್ನು ತಾಕಿದೆ. ಇಲ್ಲಿನ ಎಷ್ಟೋ ನೆನಪುಗಳು ನನ್ನ ಬದುಕಿನ ಹಸಿ ಕತೆಯೂ ಹೌದು! ಓದುವಾಗ ಅತ್ತಿದ್ದೂ ಉಂಟು, ಅವ್ವನ ಬಗೆಗೆ ಮರುಕ ಹುಟ್ಟಿದ್ದೂ ಉಂಟು, ಅಲ್ಲಲ್ಲಿ ಸಹನೆ ಮೀರಿದ ಅಸಹಾಯಕರಾಗಿದ್ದೂ ಉಂಟು.

ಕೆಲವು ದಿನಗಳಾದ ಮೇಲೆ ಓದೋಣ ಎಂದು ಪಕ್ಕಕ್ಕೆ ಸರಿಸಿದ್ದ ಪುಟ್ಟ ಪುಸ್ತಕ ಸದಾ ನನ್ನನ್ನು ಕೆಣುಕುತ್ತಲೇ ಇತ್ತು. ನೆನ್ನೆ ರಾತ್ರಿ ಮಲಗುವ ಹೊತ್ತಿಗೆ ಕಣ್ಣಾಡಿಸಲು ಶುರುಮಾಡಿದವ ಮುಕ್ಕಾಲು ಭಾಗ ಓದಿ ಮುಗಿಸುವ ಹೊತ್ತಿಗೆ ದುಃಖ ಉಮ್ಮಳಿಸಿ ಬಂತು. ಓದಲು ಸಾಧ್ಯವಾಗದೆ ಅವ್ವನ ಗುಂಗಿನಲ್ಲೇ ಮಲಗಿಬಿಟ್ಟೆ. ಮತ್ತೆ ಎದ್ದ ತಕ್ಷಣ ಅವ್ವ ಮತ್ತೆ ಓದಿಸಿಕೊಂಡಳು. ಮತ್ತೊಂದಷ್ಟು ನೆನಪುಗಳನ್ನು ನಮ್ಮೊಂದಿಗೆ ಬಿಟ್ಟು ಹೊರಟೇಬಿಟ್ಟಳು. ನಿಜಕ್ಕೂ ಹೃದಯ ಹಿಂಡುವಂಥಹ ಕಥನವಿದು. ಎಲ್ಲರೂ ಓದಬಹುದಾದ ಪುಟ್ಟ ಪುಸ್ತಕ. ಅವ್ವನ ಬಗೆಗಿನ ಕೈಪಿಡಿ ಎಂದರೆ ತಪ್ಪಾಗಲಾರದು. ಅಷ್ಟು ಚೆಂದದ ನಿರೂಪಣೆ ಪ್ರತೀ ನೆನಪಿಗೂ ಇದೆ. ಅಷ್ಟೇ ಅಂದವಾಗಿ ಮತ್ತು ಅಚ್ಚುಕಟ್ಟಾಗಿ ಪುಸ್ತಕದ ಮುದ್ರಣವೂ ಸೊಗಸಾಗಿ ಮೂಡಿಬಂದಿದೆ.

ಕಪ್ಪಾಗಲಿ ಬಿಳುಪಾಗಲಿ, ಹಟ್ಟಿಯಾಗಲಿ ಬಂಗಲೆಯಾಗಲಿ, ಹಳ್ಳಿಯಾಗಲಿ ಸಿಟಿಯಾಗಲಿ ಎಲ್ಲ ಅವ್ವಂದಿರಲ್ಲೂ ಮಕ್ಕಳ ಬಗೆಗೆ ಇರೋದು ಒಂದೇ ಥರದ ಪ್ರೀತಿ. ಮಕ್ಕಳು ಎಡವಿದಾಗ ಅವರ ಕರಳು ಚುರುಕ್ ಎಂದೇ ಎನ್ನುತ್ತದೆ. ಅವರೇ ಮಕ್ಕಳಾದಾಗ (ವಯಸ್ಸಾದಾಗ) ನಮ್ಮ ಕರಳು ಚುರುಕ್ ಎನ್ನದಿದ್ದರೆ ನಮ್ಮಂಥ ಪಾಪಿಗಳು ಈ ಜಗತ್ತಿನಲ್ಲಿ ಇನ್ಯಾರೂ ಇರೋಕೆ ಸಾಧ್ಯವೇ ಇಲ್ಲ.

ಎಷ್ಟು ಹೇಳೋದು ಅವ್ವನ ಬಗ್ಗೆ?? ನಾನೊಂದು ಬಯೋಗ್ರಪಿ ಬರೆಯಬೇಕಾಗಬಹುದಷ್ಟೇ.. ನನ್ನ ಕುಡುಕ ತಂದೆಯ ಬಗ್ಗೆ ಬಯೋಗ್ರಪಿ ಬರೆಯಬೇಕೆಂದಿದ್ದ ನನಗೆ ಜಯರಾಮಚಾರಿಯವರ ನನ್ನವ್ವನ ಬಯೋಗ್ರಪಿ ಬರವಣಿಗೆಗೆ ಹಿಂಬು ಕೊಡುವಂತಿದೆ. ಪದೇ ಪದೇ ಓದಿಸಿಕೊಳ್ಳುವ ಕಣ್ಣೀರಿಗೂ ಅರ್ಥ ತುಂಬಿಸುವ ಪುಸ್ತಕ ಬರೆದಿದ್ದಕ್ಕಾಗಿ ಥ್ಯಾಂಕ್ಯೂ ಗೆಳೆಯ.. ಶುಭವಾಗಲಿ ಮುಂದಿನ ಹೊತ್ತಿಗೆಗೆ..

ಅವ್ವ ಇನ್ನೂ ಸ್ವಲ್ಪ ಹೊತ್ತು ನಮ್ಮೊಂದಿಗಿರಬೇಕಿತ್ತು.

‍ಲೇಖಕರು Admin

July 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: