ಅಟೆನ್ಷನ್ ಪ್ಲೀಸ್! ‘ಪ್ರಥಮ್ ಬುಕ್ಸ್‌’ನಿಂದ ಹೊಸ ಪುಸ್ತಕಗಳು…

ಹೇಮಾ ಧ ಖುರ್ಸಾಪೂರ 

There is only one thing that can replace a book: the next book!

ಹೌದು… ‘ಪ್ರಥಮ್ ಬುಕ್ಸ್‌’ನಿಂದ ಹತ್ತು ಹೊಸ ಪುಸ್ತಕಗಳು ಪ್ರಕಟಗೊಂಡಿವೆ.

ಪುಸ್ತಕಗಳ ಪರಿಚಯ.

1 ದಿ ಗ್ರೇಟ್ ರಿಫಾಸ

ಲೇಖಕರು: ರೋಹಿಣಿ ನಿಲೇಕಣಿ

ಚಿತ್ರಗಳು: ಸಂಗೀತಾ ಕಡೂರ್

ಕನ್ನಡಕ್ಕೆ: ಕೃಪಾಕರ ಸೇನಾನಿ

ಬೆಲೆ: 60/-

ಕಬಿನಿ ಕಾಡಿನಲ್ಲಿ ಏನೋ ಅಸಹಜ ವಾತಾವರಣ. ಮೊದಲ ಮಳೆಗಳು ಇನ್ನೂ ಬಂದಿಲ್ಲ. ದಿನವೂ ಧೂಳೆಬ್ಬಿಸುತ್ತ ಗಿರಿಗಿಟ್ಟಲೆ ಸುತ್ತುವ ಪ್ರವಾಸಿಗರ ಸಫಾರಿ ಜೀಪುಗಳು ಕೂಡ ಕಾಣುತ್ತಿಲ್ಲ. ಈಗ; ಅಡವಿಯೊಳಗೆ ಸೋಜಿಗದ ಸನ್ನಿವೇಶವೊಂದು ಸೃಷ್ಟಿಯಾಗಿದೆ. ಪ್ರಾಣಿಗಳಿಗೆಲ್ಲ ಏನನ್ನಿಸಿತೋ… ಅವುಗಳೇ ಸಫಾರಿ ಹೊರಟಿವೆ. ಅದೇ ಜೀಪ್ ರಸ್ತೆಗಳಲ್ಲಿ… ಕೋವಿಡ್-19 ಹಿನ್ನೆಲೆಯಲ್ಲಿ ಒಂದು ವಿಭಿನ್ನ ಕಲ್ಪನೆಯ ತಮಾಷೆಯಾದ ಕತೆ.

2 ಸುಂದರಿ ಕಾಣೆಯಾಗಿದ್ದಾಳೆ

ಲೇಖಕರು, ಚಿತ್ರಗಳು: ಪ್ರಿಯಾ ಕುರಿಯನ್

ಕನ್ನಡಕ್ಕೆ: ಜೆ ವಿ ಕಾರ್ಲೊ

ಬೆಲೆ: 60/-

ತೇಸಮ್ಮಳ ಮುದ್ದಿನ ಎಮ್ಮೆ ‘ಸುಂದರಿ’ ಕಾಣೆಯಾಗಿದ್ದಾಳೆ! ಅವಳು ಎಲ್ಲಿ ಹೋದಳು, ಏನಾದಳೆಂದು ಯಾರಿಗೂ ಗೊತ್ತಿಲ್ಲ. ಆದರೆ ಪೊಲೀಸಮ್ಮ ಜಿನ್ಸಿ ಮಾತ್ರ ಅವಳನ್ನು ಹುಡುಕಿಯೇ ತೀರುವೆನೆಂಬ ಹಠತೊಟ್ಟು ಹೊರಟಿದ್ದಾಳೆ. ಅವಳು ಹಳ್ಳಿಯಲ್ಲೆಲ್ಲ ತಿರುಗಾಡಿ ಜನರನ್ನು ವಿಚಾರಿಸುತ್ತ ಏನಾದರೂ ಸುಳಿವು ಸಿಕ್ಕೀತೆ ಎಂಬ ಕಾತರದಲ್ಲಿದ್ದಾಳೆ. ಕೊನೆಗೂ ಸುಂದರಿ, ಜಿನ್ಸಿಗೆ ಸಿಗುತ್ತಾಳೆಯೇ? ಸಂಗೀತ ಇಷ್ಟಪಡುವ ಸುಂದರಿಯನ್ನು ಪತ್ತೆ ಹಚ್ಚುವ ಕುತೂಹಲಕಾರಿ ಕೆಲಸ ಎಲ್ಲಿಗೆ ಬಂದಿದೆ ನೋಡೋಣ ಬನ್ನಿ.

3 ಸೂರ್ಯನನ್ನೇ ತಿಂದ ಮೈನಾ!

ಲೇಖಕರು, ಚಿತ್ರಗಳು: ಲಬೋನಿ ರಾಯ್

ಕನ್ನಡಕ್ಕೆ: ದೀಪ್ತಿ ಬಿ

ಬೆಲೆ: 55/-

ತುಂಬ ಹಸಿದ ಒಂದು ಮೈನಾ ತನ್ನ ಪ್ರೀತಿಯ ತಿಂಡಿಯಾದ ಸೂರ್ಯನನ್ನು ತಿನ್ನಲು ಬಯಸುತ್ತಿದೆ. ಸೂರ್ಯನನ್ನು ತಿನ್ನಲು ಹೇಗೆ ಸಾಧ್ಯ? ಆಹಾರ ಸರಪಳಿ ಬಗೆಗೆ ಅಷ್ಟೇ ನಾಜೂಕಾಗಿ ಹೆಣೆದಿರುವ ಕತೆ ಇದು.

4 ಗಿಡಕ್ಕೆ ಕೊರಳಾದವಳು

ಲೇಖಕರು: ಸಾಯಂತನ್ ದತ್ತ

ಚಿತ್ರಗಳು: ಭವ್ಯಾ ಕುಮಾರ್

ಕನ್ನಡಕ್ಕೆ: ಮೋಹನ್ ಕುಮಾರ್ ಆರ್

ಬೆಲೆ: 55/-

ಜಯಶ್ರೀಗೆ ಗಿಡಗಳೆಂದರೆ ಪಂಚಪ್ರಾಣ. ಅವುಗಳ ಬಗ್ಗೆ ತಿಳಿಯಬೇಕೆಂದು ತನ್ನಿಡಿ ಬದುಕನ್ನು ಅದಕ್ಕಾಗಿ ಮೀಸಲಿಡಲು ನಿರ್ಧರಿಸಿದರು. ಇದು ಪರಿಸರ ವಿಜ್ಞಾನಿ ಡಾ. ಜಯಶ್ರೀ ಸುಬ್ರಹ್ಮಣ್ಯಂ ಜೀವನ ಕತೆ. ಈ ಕತೆ ಗಿಡಗಳ ಕುರಿತಾದ ಅವರ ಅಪರಿಮಿತ ಆಸಕ್ತಿ, ಪ್ರೀತಿಯನ್ನು ಹೇಳುತ್ತದೆ.

5 ಹರು

ಲೇಖಕರು, ಚಿತ್ರಗಳು: ಮಂಜರಿ ಚಕ್ರವರ್ತಿ

ಕನ್ನಡಕ್ಕೆ: ತನುಜಾ

ಬೆಲೆ: 60/-

ಮಂಜರಿ ಚಕ್ರವರ್ತಿ ನಿರಾಶ್ರಿತ ಮೇಕೆಯೊಂದನ್ನ ತಂದು ಸಾಕಿಕೊಂಡಿದ್ದಾರೆ. ಇದು, ಸಾಕು ಮೇಕೆ ಹರು ಜೊತೆಗಿನ ತಮ್ಮ ಒಡನಾಟದ ಬಗ್ಗೆ ಲೇಖಕರು ಬರೆದಿರುವ ಕಾಲ್ಪನಿಕ ಕತೆ. ಹರುಗೆ ತಿನ್ನೋದು, ಓಡೋದು, ಆಡೋದಂದ್ರೆ ಇಷ್ಟ. ಒಮ್ಮೊಮ್ಮೆ ರಾತ್ರಿ ಮಲಗಲು ಬೆಚ್ಚಗಿನ ಜಾಗ ಹುಡುಕಲು ಕಷ್ಟವಾದರೂ, ಹೊಟ್ಟೆ ತುಂಬ ತಿನ್ನಲು ಸಿಗದಿದ್ದರೂ ಇಂದಿಗಿಂತ ನಾಳೆ ಚೆನ್ನ ಎನ್ನುವುದು ಹರು ನಂಬಿಕೆ. ಪ್ರೀತಿ ಮತ್ತು ಖುಷಿ ಇದ್ದ ಮೇಲೆ ಬದುಕು ಎಂದಿಗೂ ಕೆಟ್ಟದಲ್ಲ!

6 ನಾನು ಇಂದು ಯಾವ ಮನೆ ಕಟ್ಟಲಿ?

ಲೇಖಕರು: ಶ್ವೇತಾ ಗಣೇಶ್ ಕುಮಾರ್

ಚಿತ್ರಗಳು: ಶುಭಶ್ರೀ ಮಾಥುರ್

ಬೆಲೆ: 45/-

ಜೈಸಲ್ಮೇರಿನಲ್ಲಿ ಮರಳುಗಲ್ಲಿನ ಹವೇಲಿಗಳು, ನಾಗಾಲ್ಯಾಂಡಿನಲ್ಲಿ ಕಾಡುಹುಲ್ಲಿನ ಚಾವಣಿಯ ಮನೆಗಳಿರುವುದು ನಿಮಗೆ ಗೊತ್ತೇ? ನಗರಗಳಲ್ಲಿ ಗಗನಚುಂಬಿ ಕಟ್ಟಡಗಳಿದ್ದರೆ, ಕೆಲವೆಡೆ ಸೌರಶಕ್ತಿಯಿಂದ ನಡೆಯುವ ಮನೆಗಳೂ ಇರುತ್ತವೆ. ಈ ಕತೆಯು ಪ್ರದೇಶದಿಂದ ಪ್ರದೇಶಕ್ಕೆ ಮನೆಗಳ ನಿರ್ಮಾಣ ಹೇಗಿರುತ್ತದೆ ಎಂಬ ಬಗ್ಗೆ ತಿಳಿಸುತ್ತದೆ. ಬನ್ನಿ, ಸುಲು ಜೊತೆ ಸೇರಿ ನಿಮ್ಮಿಷ್ಟದ ಮನೆ ಕಟ್ಟುವಿರಂತೆ.

7 ಕೋಳಿಯಷ್ಟು ಖುಷಿಯಾಗಿ

ಲೇಖಕರು: ರೀನಾ ಐ ಪುರಿ

ಚಿತ್ರಗಳು: ಆರತ್ರಿಕಾ ಚೌಧರಿ

ಬೆಲೆ: 60

ಭೂಮಿ ಮೇಲಿನ ಕೋಳಿಗಳು ನಡೆಸುವ ಅದ್ಭುತ ಜೀವನವನ್ನು ನೋಡಲು ‘ಬುರ್ಜಿ’ ಗ್ರಹದಿಂದ ಕೋಳಿಯಮ್ಮ, ಕೋಳಿಕುಮಾರ್ ಬಂದಿದ್ದಾರೆ. ಕೋಳಿಕೆರಂಗ ಅವರನ್ನು ಕೋಳಿಗಳ ಪ್ರಪಂಚದಲ್ಲೊಂದು ಸುತ್ತು ಹಾಕಿಸಲು ಕರೆದುಕೊಂಡು ಹೋಗುತ್ತಾನೆ. ಆದರೆ, ಅದು ಅವರಿಗೆ ಸಂತೋಷ ತುಂಬಿದ ಜಾಗ ಅಂತನಿಸುವುದಿಲ್ಲ ಯಾಕೆ? ಕೋಳಿಗಳು ಎಲ್ಲಿ ಖುಷಿಯಾಗಿರುತ್ತವೆ? ಈ ಕತೆ ಓದಿ ಗೊತ್ತಾಗುತ್ತದೆ.

8 ಗೊರಿಲ್ಲಾ ಪಾರ್ಟಿ

ಲೇಖಕರು, ಚಿತ್ರಗಳು: ಜೆಮ್ಮಾ ಜೋಸ್

ಬೆಲೆ: 35/-

ಗೊರಿಲ್ಲಾ ಪಾರ್ಟಿಗೆ ತಯಾರಾಗಿದೆ. ಪಾರ್ಟಿಗೆ ಏನು ಬೇಕು? ತುಂಬಾ ತುಂಬಾ ಟೋಪಿಗಳು! ಪಾರ್ಟಿ ಟೋಪಿಗಳನ್ನು ಗೊರಿಲ್ಲಾ ಮನೆಯಲ್ಲಿ ಎಲ್ಲ ಕಡೆ ಇರಿಸಿದೆ. ಪಾರ್ಟಿ ಟೋಪಿಗಳ ಮೂಲಕ ಸ್ಥಳಗಳನ್ನು ಗುರುತಿಸುವ ಬಗ್ಗೆ ಇರುವ ಮುದ್ದಾದ ಕತೆ.

9 ಶಾರ್ಕ್ ತಿಮಿಂಗಿಲ ಎಷ್ಟು ದೊಡ್ಡದು?

ಲೇಖಕರು: ವರ್ಷಾ ಶೇಷನ್

ಚಿತ್ರಗಳು: ಮಂದಾರ್ ಮ್ಹಸ್ಕರ್

ಬೆಲೆ: 45/-

ಶಾರ್ಕ್ ತಿಮಿಂಗಿಲ ಒಂದು ದೊಡ್ಡ ಮೀನು. ಎಷ್ಟು ದೊಡ್ಡದು? ನೀಲಿ ತಿಮಿಂಗಿಲಕ್ಕಿಂತ ದೊಡ್ಡದಾಗಿದೆಯೇ? ಅಥವಾ ಡಾಲ್ಫಿನ್‌ಗಿಂತ ಚಿಕ್ಕದಾಗಿದೆಯೇ? ಸಮುದ್ರ ಜಗತ್ತಿನ ಕುರಿತಾದ ಈ ಪುಸ್ತಕವು ಹೋಲಿಕೆ ಮಾಡುವುದನ್ನು ತಿಳಿಸಿ ಕೊಡುತ್ತದೆ.

10 ಬೂದುಬಣ್ಣ ನನಗಿಷ್ಟ

ಲೇಖಕರು, ಚಿತ್ರಗಳು: ಕನಾಟೊ ಜಿಮೊ

ಬೆಲೆ: 45/-

ಟೊಕಾಟೊ ಎಲ್ಲ ಬಣ್ಣಗಳನ್ನು ಪ್ರೀತಿಸುತ್ತಾನೆ. ಅವನು ಹೆಚ್ಚು ಇಷ್ಟಪಡುವ ಬಣ್ಣ, ಅವನ ತಂದೆಯೊಂದಿಗೆ ಚಳಿಯಲ್ಲಿ ಬೆಂಕಿ ಕಾಯಿಸುವ ಬೆಚ್ಚನೆಯ ರಾತ್ರಿಗಳನ್ನು ನೆನಪಿಸುತ್ತದೆ. ಈ ಮುದ್ದಾದ ಚಿತ್ರ-ಪುಸ್ತಕದಲ್ಲಿ ಟೊಕಾಟೊನ ಇಷ್ಟದ ಬಣ್ಣಗಳನ್ನು ಗುರುತಿಸಿ. ನಿಮ್ಮ ಇಷ್ಟದ ಬಣ್ಣ ಯಾವುದು?

‘ಪ್ರತಿ ಮಗುವಿನ ಕೈಯಲೊಂದು ಪುಸ್ತಕ’ ಎನ್ನುವುದು ‘ಪ್ರಥಮ್ ಬುಕ್ಸ್’ನ ಧ್ಯೇಯವಾಕ್ಯ.

ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಅಸಂಖ್ಯ ಕತೆಗಳನ್ನು ಓದಿ ಖುಷಿ ಪಡೆಯಲಿ ಎಂದು ಶುರುವಾಗಿದ್ದು ‘ಪ್ರಥಮ್ ಬುಕ್ಸ್’ನ ಡಿಜಿಟಲ್ ವೇದಿಕೆ ‘ಸ್ಟೋರಿವೀವರ್’ ಇನ್ನಷ್ಟು ಕತೆಗಳನ್ನು ಓದಲು https://storyweaver.org.in/ ಗೆ ಭೇಟಿ ನೀಡಿ.

‘ಪ್ರಥಮ್ ಬುಕ್ಸ್’ನ ಪುಸ್ತಕಗಳು ಅಥವಾ ಮಕ್ಕಳ ಪುಸ್ತಕಗಳನ್ನು ಖರೀದಿಸಲು www.bahuroopi.in ವೆಬ್ಸೈಟ್ ಕ್ಲಿಕ್ ಮಾಡಿ.

ವಾಟ್ಸ್ಯಾಪ್ ಮಾಡಿಯೂ ತರಿಸಿಕೊಳ್ಳಬಹುದು: 7019182729

ಮುಖಪುಟದ ಮೇಲೆ ಕೈ ಆಡಿಸದೆ, ಪುಟ ತಿರುಗಿಸಿ ಚಿತ್ರಗಳನ್ನ ನೋಡದೆ ಪುಸ್ತಕಗಳನ್ನು ಕೊಂಡುಕೊಳ್ಳುವುದು ಏನು ಚೆಂದ ಅಂತನಿಸಿದರೆ, ಬೆಂಗಳೂರಿನ ಸಂಜಯನಗರದಲ್ಲಿ ಇರುವ ‘ಬಹುರೂಪಿ ಬುಕ್ ಹಬ್’ಗೆ ಬನ್ನಿ.

‍ಲೇಖಕರು Admin

June 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: