ಅಗ್ರಹಾರ ಕೃಷ್ಣಮೂರ್ತಿ ಈಗ ವಿವಾದದ ಮಡಿಲಲ್ಲಿ..

ಚಿತ್ರಕೃಪೆ: ಪರಮೇಶ್ವರ್ ಗುರುಸ್ವಾಮಿ

ಈ ವಾರದ ವಾದ ವಿವಾದದ ಕೇಂದ್ರ ಬಿಂದು ಅಗ್ರಹಾರ ಕೃಷ್ಣಮೂರ್ತಿ.

ಬೆಂಗಳೂರಿನಲ್ಲಿ ಕೇಂದ್ರ ಹೊಂದಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕೆಂದ್ರದಲ್ಲಿ ಕಾರ್ಯದರ್ಶಿಯಾಗಿದ್ದ ಅಗ್ರಹಾರ ಕೃಷ್ಣಮೂರ್ತಿಯವರು ನಂತರ ಸಾಹಿತ್ಯ ಅಕಾಡೆಮಿಯ ದೆಹಲಿ ಪ್ರಧಾನ ಕಚೇರಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.

ಅಗ್ರಹಾರ ಕೃಷ್ಣಮೂರ್ತಿಯವರು ಅಕಾಡೆಮಿಯ ಕಾರ್ಯದರ್ಶಿಯಾಗುತ್ತಾರೆ ಎನ್ನುವ ಸುದ್ದಿಯೇ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ವಾದ ವಿವಾದಗಳು ತಾರಕಕ್ಕೇರಿದವು.

ದೆಹಲಿಯ ಕನ್ನಡಿಗರು ಎರಡು ಬಣವಾಗಿ ಹಂಚಿಹೋದರು. ರಾಜ್ಯದಲ್ಲಿ ಇದೇ ಪರಿಸ್ಥಿತಿ.

ಅಗ್ರಹಾರ ಕೃಷ್ಣಮೂರ್ತಿ ಅವರು ಇನ್ನೇನು ನಿವೃತ್ತರಾಗುತ್ತಾರೆ ಎನ್ನುವ ಸಮಯದಲ್ಲಿ ಅವರನ್ನು ಅಕಾಡೆಮಿಯಿಂದ ಅನೇಕ ಆರೋಪ ಹೊರಿಸಿ ವಜಾ ಮಾಡಲಾಯಿತು.

ಅವರ ನಿವೃತ್ತಿ ವೇತನ ಸಹಿತ ಅನೇಕೆ ಸೌಲಭ್ಯಗಳಿಗೆ ಕೊಕ್ಕೆ ಹಾಕಲಾಯಿತು.
ಅಗ್ರಹಾರರು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ರಾಜ್ಯ ಹೈಕೋರ್ಟ್ ಅಗ್ರಹಾರರ ವಾದವನ್ನು ಎತ್ತಿ ಹಿಡಿಯಿತು.

ಈಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರರರು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.

ಇದು ಮತ್ತೆ ವಾದ ವಿವಾದದ ಕಿಡಿ ಎಬ್ಬಿಸಿದೆ.

ಅಗ್ರಹಾರ ಪ್ರಕರಣ ಕುರಿತು ನಿಮಗೆ ಏನನ್ನಿಸುತ್ತದೆ? ಈ ಬಗ್ಗೆ [email protected] ಗೆ ಬರೆದು ತಿಳಿಸಿ ನಿಮ್ಮ ಚರ್ಚೆ ಚಿಂತನೆಯನ್ನು ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗುವಂತಿರಲಿ.

ಈಗಾಗಲೇ ಈ ವಿವಾದಕ್ಕೆ ಸಂಬಂಧಿಸಿದ ಒಂದೆರಡು ಲೇಖನಗಳನ್ನು ಇಲ್ಲಿ ಕೊಡುತ್ತಿದ್ದೇವೆ.

‍ಲೇಖಕರು nalike

August 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ರವಿಕಾಂತ

    ಒಂದು ಸಾಹಿತ್ಯಕ್ಕೆ ಸಂಬಂಧಪಟ್ಟ magazine ಆಗಿ ಗುರುತಿಸಿಕೊಂಡ ‘ಅವಧಿ’ಯಲ್ಲಿ ಸಾಹಿತ್ಯಕ್ಕೆ ಯಾವ ರೀತಿಯಲ್ಲೂ ಸಂಬಂಧಿಸದ ಈ ವಿಷಯವನ್ನು ಯಾಕೆ ಪ್ರಕಟಿಸಿದ್ದೀರಿ? ಎಲ್ಲಾ ಕ್ಷೇತ್ರಗಳಲ್ಲೂ ಎಲ್ಲಾ ಕಾಲದಲ್ಲೂ ಒಬ್ಬರು ಮತ್ತೊಬ್ಬರಿಗೆ ತೊಂದರೆಕೊಡುವವರು ಇದ್ದೇ ಇರುತ್ತಾರೆ. ಈ ರೀತಿಯ ಸಾಹಿತ್ಯಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ವಿವಾದಗಳನ್ನು ಪ್ರಕಟಿಸುವುದರಿಂದ ಅದು ಸಾಹಿತ್ಯಕ್ಕೆ ಸಂಬಂಧಿಸಿದ ಪತ್ರಿಕೆ ಆಗುವುದಿಲ್ಲ. ಹೊಸದಾಗಿ ಸಾಹಿತ್ಯ ಓದಲು ಆರಂಭಿಸಿದವರಿಗೆ ಕೆಲವು ಪ್ರಸಿದ್ಧ ಕತೆಗಾರ/ಕಾದಂಬರಿಕಾರ/ಲೇಖಕ/ಕವಿಗಳನ್ನು ಬಿಟ್ಟರೆ ಉಳಿದವರ ಪರಿಚಯ ಇರುವುದೇ ಇಲ್ಲ. ಅವರ ವಿವಾದದ ಮೂಲಕ ಅವರ ಪರಿಚಯ ಮಾಡಿಕೊಡಬೇಕೆ? ಅವಧಿ ಅಂತರ್ಜಾಲದಲ್ಲಿ ಪ್ರಕಟವಾಗುವುದರಿಂದ ಅದಕ್ಕೆ ವಿಸ್ತೃತ ಓದುಗರಿರುತ್ತಾರೆ. ಯಾರೋ ಒಬ್ಬ ಟೆಕ್ಕಿ, ಒಬ್ಬ ಚಾರ್ಟೆಡ್ ಅಕೌಂಟೆಂಟ್, ಒಬ್ಬ ಸಣ್ಣ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವನು ಅವಧಿಯ ಓದುಗನಾಗಿರಬಹುದು. ಅವನಿಗೆ ಈ ವಿವಾದಗಳ ಗೊಡವೆಯೇಕೆ? ಗಮನಿಸಿ ಅವನು ಈ ವಿವಾದಗಳನ್ನು ತಿಳಿದುಕೊಳ್ಳಲು ಸಾಹಿತ್ಯ ಓದುತ್ತಿಲ್ಲ. ಸಾಹಿತ್ಯ ಓದಲು ಈ ಪತ್ರಿಕೆ ಓದುತ್ತಾನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: